ಸಾರಾಂಶ
ಅವರ ತಾಯಿ ಹೆಸರಿನಲ್ಲಿ ಗಿಡ ನೆಡಲಾಯಿತು.
ಕನ್ನಡಪ್ರಭ ವಾರ್ತೆ ಮೈಸೂರುಪ್ರಧಾನಿ ನರೇಂದ್ರಮೋದಿ ಅವರ 75ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ನರಸಿಂಹರಾಜ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಿ, ಅವರ ತಾಯಿ ಹೆಸರಿನಲ್ಲಿ ಗಿಡ ನೆಡಲಾಯಿತು.ತೀರ್ಪುಗಾರರಾಗಿ ನಗರ ಪಾಲಿಕೆ ಮಾಜಿ ಸದಸ್ಯೆ ಉಷಾ ನಾರಾಯಣ್ಣಗೌಡಪ್ಪ ಮತ್ತು ಪಾರ್ವತಿ ಪಾಲ್ಗೊಂಡಿದ್ದರು.ಮಾಜಿ ಮೇಯರ್ ಸಂದೇಶ್ ಸ್ವಾಮಿ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪದ್ಮನಾಭ, ಜಿ. ಮಂಜು ಅವರು ಅತಿಥಿಯಾಗಿ ಪಾಲ್ಗೊಂಡಿದ್ದರು.ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ , ಸಂಚಾಲಕ ವೇಲು ಶಿವಕುಮಾರ್, ನಾರಾಯಣ ಲೋಲಪ್ಪ, ಬಸವರಾಜ್, ನವೀನ್ ರಾಜ್, ನವೀನ್‌ಶೆಟ್ಟಿ, ರಾಜು, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಪಾಲಾಕ್ಷ, ಪ್ರಧಾನ ಕಾರ್ಯದರ್ಶಿ ಉಮಾಶ್ರೀ, ಕವಿತಾ ಸಿಂಗ್, ಎಂ.ಎನ್. ವನಜಾಕ್ಷಿ, ಪವಿತ್ರಾ, ಇಂದಿರಾ, ಶ್ಯಾಮಲಾ, ಭವಾನಿ ಸಿಂಗ್, ಲಕ್ಷ್ಮೀ, ವನಜಾಕ್ಷಮ್ಮ ಮೊದಲಾದವರು ಇದ್ದರು.