ವೆಂಕರಟರಾಜನಹಳ್ಳಿ, ತಿಮ್ಮನಾಯಕನಹಳ್ಳಿಯ ತಲಾ ಎರಡು ದೇಗುಲಗಳಲ್ಲಿ ಹುಂಡಿ ಚಿನ್ನಾಭರಣ ದರೋಡೆ
ಕನ್ನಡಪ್ರಭ ವಾರ್ತೆ ಮಾಲೂರುತಾಲೂಕು ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ವೆಂಕರಟರಾಜನಹಳ್ಳಿ ಹಾಗೂ ತಿಮ್ಮನಾಯಕನಹಳ್ಳಿ ಗ್ರಾಮಗಳ ೪ ದೇವಾಲಯಗಳಲ್ಲಿ ದೇವಾಲಯದ ಹುಂಡಿ ಹಾಗೂ ಚಿನ್ನಾಭರಣಗಳನ್ನು ಕಳುವು ಮಾಡಿಕೊಂಡು ಹೋಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ವೆಂಕರಟರಾಜನಹಳ್ಳಿ ಹಾಗೂ ತಿಮ್ಮನಾಯಕನಹಳ್ಳಿಗಳಲ್ಲಿ ಶುಕ್ರವಾರ ರಾತ್ರಿ ಒಟ್ಟು ೪ ದೇವಸ್ಥಾನಗಳು ಬಾಗಿಲು ಮುರಿದು ದೇವಾಲಯ ಪ್ರವೇಶ ಮಾಡಿ ಕಳ್ಳತನ ನಡೆದಿದ್ದು ಭಕ್ತರಲ್ಲಿ ಬಾರಿ ಆತಂಕ ಉಂಟಾಗಿದೆ.ವೆಂಕಟರಾಜನಹಳ್ಳಿ ರೇಣುಕ ಎಲ್ಲಮ್ಮ ದೇವಸ್ಥಾನದ ಬೆಳ್ಳಿ ಕಿರೀಟ ಖಡ್ಗ ಸರ ಹುಂಡಿ ನಗದು ಕಳವು ಮಾಡಿದ್ದಾರೆ. ಅಂಕಣಮ್ಮ ದೇವಸ್ಥಾನ ದೇವಿಯ ಆಭರಣಗಳು ಮತ್ತು ಹುಂಡಿ ಕಳವು, ತಿಮ್ಮನಾಯಕನಹಳ್ಳಿ ಸಫಲಮ್ಮ ದೇವಿ ಕಿರೀಟ ಮಾಂಗಲ್ಯ ಸರ ದಾನದ ಹಣ ಕಳವು, ಎಲ್ಲಮ್ಮ ದೇವಸ್ಥಾನ ಕಳವು ಅಮ್ಮನವರ ಬಳಿ ಇರುವ ಬೆಳ್ಳಿ ಆಭರಣ ಕಳವು ನಾಲ್ಕು ದೇವಾಲಯಗಳಲ್ಲಿ ಒಟ್ಟು ೬ ಲಕ್ಷಕ್ಕೂ ಹೆಚ್ಚು ಕಳುವಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಮಾಸ್ತಿ ಪೋಲಿಸರಿಗೆ ಮಾಹಿತಿ ನೀಡಿದ್ದು ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿದರು.
ಒಂದೇ ಬಾರಿಗೆ ೪ ದೇವಾಲಯಗಳಲ್ಲಿ ಕಳ್ಳತನವಾಗಿರುವುದು ಗ್ರಾಮಸ್ಥರಲ್ಲಿ ಅತಂಕವಾಗಿದ್ದು, ರಾತ್ರಿ ವೇಳೆ ಪೋಲಿಸರು ಗಸ್ತು ಮಾಡದೆ ಇರುವುದರಿಂದ ಕಳ್ಳತನವಾಗಿದ್ದು, ಇತ್ತಿಚಿಗೆ ಗ್ರಾಮದ ತೋಟಗಳಲ್ಲಿ ಪಂಪು ಮೋಟರ್‌ಗಳು ಸಹ ಕಳ್ಳತನವಾಗಿದೆ ಪೋಲಿಸರು ಕಂಡು ಕಾಣದಂತೆ ಇದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಮಾಸ್ತಿ ಠಾಣೆಯ ಪೋಲಿಸ್ ಇನ್ಸ್‌ಪೆಕ್ಟರ್ ಓಂ ಪ್ರಕಾಶ್ ಗೌಡ ಹಾಗೂ ಸಿಬ್ಬಂದಿ ೪ ಸ್ಥಳಗಳನ್ನು ಭೇಟಿ ನೀಡಿ ಪರಿಶೀಲನೆ ನಡೆಸಿದರು.