ಸಾರಾಂಶ
ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ‘ಸೌತ್ ಇಂಡಿಯಾ ಬಿಸಿನೆಸ್ ಅವಾರ್ಡ್ಸ್’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ‘ಸೌತ್ ಇಂಡಿಯಾ ಬಿಸಿನೆಸ್ ಅವಾರ್ಡ್ಸ್’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಯುಎಇ ರಾಯಭಾರಿ ಹಾಗೂ ಎಎಜಿ ಚೇರ್ಮನ್ ಡಾ. ಅಹ್ಮದ್ ಅಬ್ದುಲ್ ರೆಹಮಾನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಉದ್ಯಮ, ಸಂಸ್ಕೃತಿ ಮತ್ತು ವಾಣಿಜ್ಯ ವಲಯದಲ್ಲಿ ಜಾಗತಿಕವಾಗಿ ಪ್ರಭಾವ ಬೀರಿರುವವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಸೌತ್ ಇಂಡಿಯಾ ಬಿಸಿನೆಸ್ ಅವಾರ್ಡ್ಸ್ ಪರಿಚಯಿಸಿರುವ ‘ಸೌತ್ ಪವರ್ಲಿಸ್ಟ್-100’ ಅನಾವರಣಗೊಳಿಸಲಾಯಿತು.ಆನಂದ ಸಂಕೇಶ್ವರ ಜತೆಗೆ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೆಸಸ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಅಶೋಕ್ ಖೇಣಿ, ಕೆಸಿಪಿ ಸಿಮೆಂಟ್ಸ್ ಜಂಟಿ ಆಡಳಿತ ನಿರ್ದೇಶಕಿ ಕವಿತಾ ದತ್ತ, ಎನ್ಎ ಆರ್ಕಿಟೆಕ್ನಿಕ್ ಸಂಸ್ಥಾಪಕರಾದ ನಿರೂಪ್ ರೆಡ್ಡಿ, ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕರಾದ ಶೈಲಜಾ ಕಿರಣ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪುರಸ್ಕಾರ ನೀಡಲಾಯಿತು.