ಅತ್ಯಧಿಕ ಮತಗಳಿಂದ ಡಾ.ಪ್ರಭಾ ಗೆಲ್ಲಿಸಿ: ಎಸ್ಸೆಸ್ಸೆಂ

| Published : Apr 17 2024, 01:16 AM IST

ಸಾರಾಂಶ

ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ವಿದ್ಯಾವಂತೆ. ಶಾಸಕ ಬಿ.ದೇವೇಂದ್ರಪ್ಪ, ಸಚಿವರೊಂದಿಗೆ ಜಗಳೂರು ಕ್ಷೇತ್ರದ ಸಮಗ್ರ ನೀರು ತರುವುದು ಸೇರಿದಂತೆ ಜನರಿಗೆ ಸ್ಪಂದಿಸಲಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕ್ಷೇತ್ರದಿಂದ ಅತ್ಯಧಿಕ ಮತ ನೀಡಿ, ಗೆಲ್ಲಿಸುವಂತೆ ಗಣಿ ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜಗಳೂರಲ್ಲಿ ಮನವಿ ಮಾಡಿದ್ದಾರೆ.

- ಜಗಳೂರಲ್ಲಿ ಕಾಂಗ್ರೆಸ್ ಸಮಾವೇಶ । ಪಕ್ಷಕ್ಕೆ ಬಿಜೆಪಿಗರು ಸೇರ್ಪಡೆ

- - -

ಕನ್ನಡ ಪ್ರಭವಾರ್ತೆ ಜಗಳೂರು

ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ವಿದ್ಯಾವಂತೆ. ಶಾಸಕ ಬಿ.ದೇವೇಂದ್ರಪ್ಪ, ಸಚಿವರೊಂದಿಗೆ ಜಗಳೂರು ಕ್ಷೇತ್ರದ ಸಮಗ್ರ ನೀರು ತರುವುದು ಸೇರಿದಂತೆ ಜನರಿಗೆ ಸ್ಪಂದಿಸಲಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕ್ಷೇತ್ರದಿಂದ ಅತ್ಯಧಿಕ ಮತ ನೀಡಿ, ಗೆಲ್ಲಿಸುವಂತೆ ಗಣಿ ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮನವಿ ಮಾಡಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ, ಬಿಜೆಪಿ ಮುಖಂಡರನ್ನು ಕಾಂಗ್ರೆಸ್‌ಗೆ ಬರ ಮಾಡಿಕೊಂಡು ಪ್ರಭಾ ಮಲ್ಲಿಕಾರ್ಜುನ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಕಾಂಗ್ರೆಸ್ ಅಲೆ ಇದೆ. ಸಿದ್ದರಾಮಯ್ಯನವರು ಬಡಜನರಿಗೆ ನೀಡಿರುವ 5 ಗ್ಯಾರಂಟಿ, ಜಗಳೂರು ಕ್ಷೇತ್ರಕ್ಕೆ 57 ಕೆರೆಗಳಿಗೆ ನೀರು, ಭದ್ರಾ ಮೇಲ್ದಂಡೆ ಯೋಜನೆ ಕೆಲಸಗಳು ಸಾಕ್ಷಿಯಾಗಿವೆ ಎಂದ ಅವರು, ಕನಿಷ್ಠ ಜಗಳೂರು ಕ್ಷೇತ್ರದಿಂದ 25 ಸಾವಿರ ಲೀಡ್ ಕೊಡಿ ಸಾಕು. 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಂದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, 3 ಬಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆದವರಿಂದ ಕ್ಷೇತ್ರಕ್ಕೆ ಏನೂ ಕೊಡುಗೆಯಿಲ್ಲ. ಹೊಲಕ್ಕೆ ಫಸಲು ಬದಲಾವಣೆ ಮಾಡುವ ರೀತಿಯಲ್ಲಿ ಈ ಬಾರಿ ರಾಜಕೀಯ ಫಸಲು ಬದಲಾವಣೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಅವರನ್ನು ಅಧಿಕ ಮತ ನೀಡಿ ಗೆಲ್ಲಿಸೋಣ. ಜಗಳೂರು ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡೋಣ ಎಂದರು.

ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಮಾತನಾಡಿ, ಸಚಿವರಾದ ಮಲ್ಲಿಕಾರ್ಜುನ್ ವರ್ಷಕ್ಕೆ ಎರಡು ಬಾರಿ ಜಗಳೂರಿಗೆ ಬಂದರೆ ಸಾಕು. ಜೊತೆಗೆ ಬರಪೀಡಿತ ಜಗಳೂರು ಕ್ಷೇತ್ರಕ್ಕೆ ಒತ್ತು ನೀಡಿ ಸಾಕು. ಪ್ರಭಾ ಮಲ್ಲಿಕಾರ್ಜುನ್ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.

ಟಿ.ಜಿ.ರವಿಕುಮಾರ್, ಬ್ರಾಹ್ಮಣ ನಿಗಮ ಅಧ್ಯಕ್ಷ ಅಸಗೋಡು ಜಯಸಿಂಹ, ಕೆ.ಪಿ.ಪಾಲಯ್ಯ, ಶಿವಕುಮಾರ್ ಒಡೆಯರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮ್ಮದ್ ಮಾತನಾಡಿದರು.

ಬಿಜೆಪಿ ಮುಖಂಡರಾದ ಕೃಷ್ಣಮೂರ್ತಿ, ಕಾಂತರಾಜ್, ಗುರುಮೂರ್ತಿ, ಸಂಪತ್, ಸಾಕಮ್ಮ, ಪಲ್ಲಾಗಟ್ಟೆ, ಲಿಂಗನಹಳ್ಳಿ, ಬಿದರಕೆರೆ ಸೇರಿದಂತೆ ವಿವಿಧ ಹಳ್ಳಿಗಳ ನೂರಾರು ಮುಖಂಡರು ಸಚಿವ ಮಲ್ಲಿಕಾರ್ಜುನ್, ಶಾಸಕ ದೇವೇಂದ್ರಪ್ಪ ಸಮಕ್ಷಮ ಕಾಂಗ್ರೆಸ್ ಸೇರಿದರು.

ಅರಸೀಕೆರೆ ಬ್ಲಾಕ್ ಅಧ್ಯಕ್ಷ ಮಂಜುಣ್ಣ, ಕಲ್ಲೇಶ್ ರಾಜ್ ಪಟೇಲ್, ಎಸ್.ಟಿ. ಶೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ್, ಪಿ.ಸುರೇಶ್ ಗೌಡ, ಯಶವಂತಗೌಡ, ಬಸಾಪುರ ರವಿಚಂದ್ರ, ಎಸ್.ಕೆ. ರಾಮರೆಡ್ಡಿ, ಶಿವನಗೌಡ, ವೈ.ಎನ್. ಮಂಜುನಾಥ, ಪ.ಪಂ. ಸದಸ್ಯರಾದ ಮಂಜುನಾಥ್, ಶಕೀಲ್ ಅಹಮ್ಮದ್, ಮುಖಂಡರು ಉಪಸ್ಥಿತರಿದ್ದರು.

- - -

-16ಜೆ.ಎಲ್.ಆರ್1:

ಜಗಳೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಗಣಿ ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಿದರು.