ಅಮೇರಿಕಾದ ಆಯುರ್ವೇದ ಸಮ್ಮೇಳನಕ್ಕೆ ಡಾ. ಪ್ರಶಾಂತ ಅವರಿಗೆ ಆಹ್ವಾನ

| Published : Sep 21 2025, 02:01 AM IST

ಅಮೇರಿಕಾದ ಆಯುರ್ವೇದ ಸಮ್ಮೇಳನಕ್ಕೆ ಡಾ. ಪ್ರಶಾಂತ ಅವರಿಗೆ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಸೆ. 27, 28ರಂದು ಸಮ್ಮೇಳನ ನಡೆಯಲಿದ್ದು, ಇದರಲ್ಲಿ “ಮರ್ಮ” ಚಿಕಿತ್ಸೆ ಅಂದರೆ “ಮರ್ಮ ಥೆರಿಪಿ”, ನಾಡಿ ಪರೀಕ್ಷೆ ಕುರಿತು ನಡೆಯುಲಿರುವ ವಿಚಾರಗೋಷ್ಠಿ ಹಾಗೂ ರಸಾಯನ ವಿಷಯ ಮಹತ್ವ ಕುರಿತು ಮುಖ್ಯ ಭಾಷಣಕಾರರಾಗಿ ಹಾಗೂ ತಜ್ಞರಾಗಿ ಆಹ್ವಾನಿತರಾಗಿದ್ದಾರೆ.

ಹುಬ್ಬಳ್ಳಿ: ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ ಎ.ಎಸ್.‌ ಅಮೇರಿಕಾ ದೇಶದ ಕ್ಯಾಲಿಪೋರ್ನಿಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಜಾಗತಿಕ ಆಯುರ್ವೇದ ಮಹಾ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಆಹ್ವಾನಿತರಾಗಿದ್ದಾರೆ.

ಸೆ. 27, 28ರಂದು ಸಮ್ಮೇಳನ ನಡೆಯಲಿದ್ದು, ಇದರಲ್ಲಿ “ಮರ್ಮ” ಚಿಕಿತ್ಸೆ ಅಂದರೆ “ಮರ್ಮ ಥೆರಿಪಿ”, ನಾಡಿ ಪರೀಕ್ಷೆ ಕುರಿತು ನಡೆಯುಲಿರುವ ವಿಚಾರಗೋಷ್ಠಿ ಹಾಗೂ ರಸಾಯನ ವಿಷಯ ಮಹತ್ವ ಕುರಿತು ಮುಖ್ಯ ಭಾಷಣಕಾರರಾಗಿ ಹಾಗೂ ತಜ್ಞರಾಗಿ ಆಹ್ವಾನಿತರಾಗಿದ್ದಾರೆ. ಸಮ್ಮೇಳನಕ್ಕೆ ದೇಶದಿಂದ ಏಕೈಕ ಭಾಷಣಕಾರರಾಗಿ ಹಾಗೂ ವಿಷಯತಜ್ಞರಾಗಿ ಆಮಂತ್ರಿತರಾಗಿರುವುದು ವಿಶೇಷ.

ಜಾಗತಿಕ ಸಮ್ಮೇಳನ “ಗ್ಲೋಬಲ್‌ ವೆಲ್ನೆಸ್‌ ಮಿಟ್‌ ” ಇದು ಜಗತ್ತಿನ ಬೇರೆ ಬೇರೆ ದೇಶಗಳಿಂದ ಆಗಮಿಸಿದ ಹಾಗೂ ದಕ್ಷಿಣ ಅಮೇರಿಕಾ, ಉತ್ತರ ಅಮೇರಿಕಾ ಮತ್ತು ಇನ್ನಿತರ ದೇಶಗಳಲ್ಲಿ ನೆಲಸಿರುವ ಆಯುರ್ವೇದ ವಿಷಯ ತಜ್ಞರು ಹಾಗೂ ಆಯುರ್ವೇದ ಕುರಿತಾದ ಸಂಶೋಧಕರು ಶಿಕ್ಷಣ ತಜ್ಞರು ಕೂಡಿಕೊಂಡು ಅಸೋಸಿಯೇಶನ್ ಆಫ್ ಆಯುರ್ವೇದ ಫ್ರೊಪೆಸೆನಲ್ಸ್‌ ಇನ್ ನಾರ್ಥ್‌ ಅಮೇರಿಕಾ ಹಾಗೂ ಇತರ ಸಂಘಟನೆಗಳಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಯುರ್ವೇದ ಸೇವಾ ಸಮಿತಿಯ ಸಭಾಪತಿ ಗೋವಿಂದ ಜೋಶಿ, ಕಾರ್ಯದರ್ಶಿ ಸಂಜೀವ ಜೋಶಿ, ಕಾರ್ಯಕಾರಿ ಮಂಡಳಿ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.