ಸಾರಾಂಶ
ಗಡಿನಾಡು ಕಾಸರಗೋಡಿನಲ್ಲಿ ಯಕ್ಷಗಾನ ಹಾಗೂ ಸಾಹಿತ್ಯಕ್ಕಾಗಿ ಸಿರಿಬಾಗಿಲು ಪ್ರತಿಷ್ಠಾನವು ನೀಡುತ್ತಿರುವ ಕೊಡುಗೆಗಳು ಗಣನೀಯವಾದುದು ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕನ್ನಡ ಸಾಹಿತ್ಯ- ಸಂಸ್ಕೃತಿ- ಕಲೆ ಯಕ್ಷಗಾನ ಇತ್ಯಾದಿಗಳ ಉಳಿವಿಗಾಗಿ ಸರ್ಕಾರೇತರ ಸಂಘ ಸಂಸ್ಥೆಗಳ ಕೊಡುಗೆಗಳು ಅಪಾರವಾಗಿದೆ ಎಂದು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ್ ಬಿಳಿಮಲೆ ಹೇಳಿದರು.ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ನಡೆದ ಸಂಸ್ಕೃತಿ ಶಿಬಿರ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ಗಡಿನಾಡು ಕಾಸರಗೋಡಿನಲ್ಲಿ ಯಕ್ಷಗಾನ ಹಾಗೂ ಸಾಹಿತ್ಯಕ್ಕಾಗಿ ಸಿರಿಬಾಗಿಲು ಪ್ರತಿಷ್ಠಾನವು ನೀಡುತ್ತಿರುವ ಕೊಡುಗೆಗಳು ಗಣನೀಯವಾದುದು. ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಮೇಳದ ಪ್ರಧಾನ ಭಾಗವತರಾದ ರಾಮಕೃಷ್ಣ ಮಯ್ಯ ಅವರ ಸಾಧನೆ ಮೆಚ್ಚುವಂತಹದ್ದು. ಅವರ ಯೋಜನೆಗೆ ಸಹಕರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಆದುದರಿಂದ ಮುಂದಿನ ದಿನಗಳಲ್ಲಿ ಪ್ರತಿಷ್ಠಾನಕ್ಕೆ ಯಾವುದಾದರೂ ಕಂಪನಿಗಳ ಸಿಎಸ್‌ಆರ್ ಫಂಡ್ ಒದಗಿಸಿ ಪ್ರತಿಷ್ಠಾನದ ಚಟುವಟಿಕೆಯನ್ನು ಇನ್ನೂ ಹೆಚ್ಚು ನಡೆಯುವಂತಾಗಲು, ಪ್ರತಿಷ್ಠಾನದ ಎಲ್ಲ ಯೋಜನೆಗಳು ಕಾರ್ಯಗತವಾಗಲು ಸಹಕರಿಸುವುದಾಗಿ ಹೇಳಿದರು.ಅತಿಥಿಗಳಾಗಿ ಡಾ. ಸುಂದರ ಕೇಣಾಜೆ, ಜಾನಪದ ಸಂಶೋಧಕ, ಗಮಕ ಪರಿಷತ್ ಅಧ್ಯಕ್ಷ ತೆಕ್ಕೆಕ್ಕೆರೆ ಶಂಕರನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಲು ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.