ಮನುಷ್ಯನ ಪರಿವರ್ತಿಸುವ ನಾಟಕ: ಕಾಂಗ್ರೆಸ್ ಯುವ ಮುಖಂಡ ಬಸವರಾಜ ಜಂಬಾಳಿ

| Published : Feb 18 2025, 12:32 AM IST

ಮನುಷ್ಯನ ಪರಿವರ್ತಿಸುವ ನಾಟಕ: ಕಾಂಗ್ರೆಸ್ ಯುವ ಮುಖಂಡ ಬಸವರಾಜ ಜಂಬಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಟಕಗಳು ಮನುಷ್ಯನ ಜೀವನದಲ್ಲಿ ಪರಿವರ್ತನೆ ತರುವ ಸಾಮಾಜಿಕ ಕಳಿಕಳಿ ಹೊಂದಿವೆ. ನಾಟಕ ರಂಗಭೂಮಿಯಲ್ಲಿಯೇ ನಿಜವಾದ ಮತ್ತು ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ-ಬೆಳೆಸುವ ಕೆಲಸ ಎಲ್ಲೆಡೆ ಪ್ರಾಮಾಣಿಕವಾಗಿ ನಡೆಯಬೇಕಿದೆ.

ಯಲಬುರ್ಗಾ

ಪ್ರತಿಯೊಬ್ಬರು ರಂಗಭೂಮಿ ಕಲೆ ಉಳಿವಿಗೆ ಶ್ರಮಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಬಸವರಾಜ ಜಂಬಾಳಿ ಹೇಳಿದರು.ತಾಲೂಕಿನ ಕಲಕಬಂಡಿ ಗ್ರಾಮದಲ್ಲಿ ಶ್ರೀಕರಿಯಮ್ಮ ದೇವಿಯ ಜಾತ್ರೆ ಪ್ರಯುಕ್ತ ಗ್ರಾಮದ ಶ್ರೀಮಾರುತೇಶ್ವರ ಯುವ ನಾಟ್ಯ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡ ಜನ ಮೆಚ್ಚಿದ ರಾಜಾಹುಲಿ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳು ಮನುಷ್ಯನ ಜೀವನದಲ್ಲಿ ಪರಿವರ್ತನೆ ತರುವ ಸಾಮಾಜಿಕ ಕಳಿಕಳಿ ಹೊಂದಿವೆ. ನಾಟಕ ರಂಗಭೂಮಿಯಲ್ಲಿಯೇ ನಿಜವಾದ ಮತ್ತು ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ-ಬೆಳೆಸುವ ಕೆಲಸ ಎಲ್ಲೆಡೆ ಪ್ರಾಮಾಣಿಕವಾಗಿ ನಡೆಯಬೇಕಿದೆ ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲೂಕು ಸಮಿತಿ ಸದಸ್ಯ ರಾಮನಗೌಡ ಭಾವಿಕಟ್ಟಿ ಮಾತನಾಡಿ, ರಂಗಭೂಮಿಯಲ್ಲಿ ನಟನೆ ಮಾಡುವುದು ಒಂದು ಸವಾಲಿನ ಕೆಲಸವಾಗಿದೆ. ರಂಗಕಲೆಯನ್ನು ಕರಗತ ಮಾಡಿಕೊಂಡಲ್ಲಿ ಉತ್ತಮ ಸಾಮಾಜಿಕ ನಾಟಕಗಳನ್ನು ಹೊರತರಬಹುದು ಎಂಬುದಕ್ಕೆ ಕಲಕಬಂಡಿ ಗ್ರಾಮದ ಕಲಾವಿದರು ಉದಾಹರಣೆಯಾಗಿದ್ದಾರೆ. ನಾಟಕ ಕಲೆ ಉಳಸಿ ಬೆಳಸುವುದು ನಾಗರಿಕ ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ನಾಟಕದಲ್ಲಿ ಬರುವ ಒಳ್ಳೆಯ ಸನ್ನಿವೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕೆಂದು ಕರೆ ನೀಡಿದರು.

ಈ ವೇಳೆ ಪ್ರಮುಖರಾದ ಪ್ರಭುಗೌಡ ಪಾಟೀಲ, ವೀರಯ್ಯ ಹಿರೇಮಠ, ವೀರಣ್ಣ ಕರಡಿಮಠ, ಶರಣಗೌಡ ಮಲಿಪಾಟೀಲ್, ಮುದುಕನಗೌಡ ಮಲಿಪಾಟೀಲ್, ಹನಮಂತ ಗಾಳಿ, ಕರಬಸಪ್ಪ ಸಣ್ಣಗ್ಯಾನಗೌಡ್ರ, ಚನ್ನಪ್ಪ ತೆಂಗಿನಕಾಯಿ, ಹೊನ್ನನಗೌಡ ಮಲಿಪಾಟೀಲ್, ಪೊಲೀಸ್ ಇಲಾಖೆಯ ಕರಬಸಪ್ಪ ಕಟ್ಟಿಮನಿ, ಸೋಮಪ್ಪ ಸಣ್ಣಗ್ಯಾನಗೌಡ್ರ ಮತ್ತಿತರರು ಇದ್ದರು.