- ಹಿರೇಕಲ್ಮಠದಲ್ಲಿ ಕೃಷಿಮೇಳ: 3ನೇ ದಿನದ ಧರ್ಮ ಸಭೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇಶದಲ್ಲಿ ಧರ್ಮ, ಸಂಸ್ಕೃತಿ, ಸಹಬಾಳ್ವೆಯ ಮನೋಧರ್ಮಗಳು ಇರುವ ಕಾರಣ ವಿಶ್ವದಲ್ಲೇ ಭಾರತ ವಿಶಿಷ್ಟ ದೇಶವಾಗಿ, ಸರ್ವಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮಿದೆ ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್ ಹೇಳಿದರು.ಹೊನ್ನಾಳಿ ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ-2026, ರಾಜ್ಯಮಟ್ಟದ ಕೃಷಿಮೇಳದ 3ನೇ ದಿನವಾದ ಭಾನುವಾರ ನಡೆದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ಜನತೆ ಭೂಮಿಯನ್ನೇ ತಾಯಿ ಎಂದು ಪೂಜಿಸುತ್ತಾರೆ. ರೈತರು ಸಾಮಾನ್ಯವಾಗಿ ಒಂದು ಬೆಳೆಗೆ ಬೆಲೆ ಹೆಚ್ಚಾದಾಗ ಎಲ್ಲರೂ ಅದೇ ಬೆಳೆ ಬೆಳೆಯಲು ಮುಂದಾಗುತ್ತಾರೆ. ಆಗ ಬೆಳೆಯ ಸರಬರಾಜು ಹೆಚ್ಚಾಗಿ ಸಹಜವಾಗಿ ಬೆಲೆ ಇಳಿಯುತ್ತದೆ. ಇದರ ನಷ್ಟ ಕಂಡ ರೈತ ಬೇಸರಗೊಳ್ಳುತ್ತಾನೆ, ಪ್ರತಿಭಟನೆ ಮಾಡುವ ಅನೇಕ ಘಟನೆಗಳನ್ನು ಕಂಡಿದ್ದೇವೆ. ಹೀಗಾಗಬಾದರು. ಮಿಶ್ರಬೆಳೆ ಕೃಷಿ ಪದ್ಧತಿ ಹಾಗೂ ಕೃಷಿತಜ್ಞರ ಸಲಹೆ ಪಡೆದು ನಷ್ಟಗಳಿಂದ ಪಾರಾಗಿ ಆರ್ಥಿಕ ಸದೃಢತೆ ಹೊಂದಬೇಕು ಎಂದು ತಿಳಿಸಿದರು.
ಹೊನ್ನಾಳಿ ಹಿರೇಕಲ್ಮಠ ಲಿಂ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಸ್ವತಃ ಕೃಷಿಕರಾಗಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ನೆಡೆದಾಡುವ ದೇವರು ಎಂದು ಜನರಿಂದ ಕರೆಯಿಸಿಕೊಂಡಿದ್ದರು ಎಂದು ಹಿರಿಯ ಶ್ರೀಗಳನ್ನು ಸ್ಮರಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಕುಮಾರ್ ಮಾತನಾಡಿ, ಬದಲಾಗುತ್ತಿರುವ ಹವಾಮಾನ ವೈಪರಿತ್ಯದಿಂದಾಗಿ ಕೃಷಿಕರು ಲಾಭಕ್ಕಿಂತ ನಷ್ಟವನ್ನೇ ಅನುಭವಿಸುಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಕೃಷಿ ಮತ್ತು ರೈತರಿಗಾಗಿ ಅನೇಕ ಉತ್ತಮ ಯೋಜನೆಗಳನ್ನು ತಂದಿದ್ದಾರೆ. ರೈತರಿಗೆ ಜೀವನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪತಂಜಲಿ ಯೋಗಕೇಂದ್ರ ಹುಬ್ಬಳ್ಳಿ ಶಾಖೆ ಯೋಗಗುರು ಶೀ ಭವರ್ ಲಾಲ್ ಅವರು ಯೋಗ ಮತ್ತು ಅದರ ಮಹತ್ವಗಳ ಕುರಿತು ಮಾತನಾಡಿದರು. ಧರ್ಮಸಭೆ ನೇತೃತ್ವವನ್ನು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು, ಗೌರಿಮಠ ಕರ್ಜಿಗಿ ಶಿವಯೋಗಿ ಶಿವಾಚಾರ್ಯ ಸ್ವಾಮಿಜಿ, ಶಂಕರ ದೇವರ ಮಠ,ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಡಿ.ಜಿ.ಶಾಂತನಗೌಡ ವಹಿಸಿದ್ದರು. ಒಬಿಸಿ ಮುಖಂಡ ಎಚ್.ಎ. ಉಮಾಪತಿ, ಮುಖ್ಯ ಅತಿಥಿಗಳಾಗಿ ರೈತ ಮುಖಂಡ ಕರಿಬಸಪ್ಪ ಗೌಡ, ಎಚ್.ಕಡದಕಟ್ಟೆ ಜಗದೀಶ್, ನ್ಯಾಮತಿ ಮಲ್ಲಿಕಾರ್ಜುನ, ಮುಖಂಡರಾದ ಆರಕೆರೆ ಎ.ಬಿ. ಹನುಮಂತಪ್ಪ,ಎಂ.ಆರ್. ಮಹೇಶ್, ಶಾಂತರಾಜ್ ಪಾಟೀಲ್,ಕೆ.ವಿ.ಚನ್ನಪ್ಪ, ಯಕ್ಕನಹಳ್ಳಿಿ ಚಗದೀಶ್,ನೆಲಹೊನ್ನೆ ದೇವರಾಜ್, ಪ್ರವೀಣ್ ರಾಂಪುರ, ಹಿರೇಮಠದ ಬಸವರಾಜಪ್ಪ,ಹರ್ಷ ಪಾಟೀಲ್, ಸುನಿಲ್ ಕುಮಾರ್, ಬಿಂಬ ಮಂಜುನಾಥ, ಕತ್ತಿಗೆ ನಾಗರಾಜ್, ಸೇರಿದಂತೆ ಅನೇಕ ಮುಖಂಡರು ಇದ್ದರು.
- - --1ಎಚ್.ಎಲ್.ಐ3:
ಹೊನ್ನಾಳಿ ಹಿರೇಕಲ್ಮಠದಲ್ಲಿ ಚಂದ್ರ ಸ್ಮರಣೆ-2026 ರಾಜ್ಯಮಟ್ಟದ ಕೃಷಿ ಮೇಳದ ಮೂರನೇ ದಿನದ ಧರ್ಮಸಭೆಯಲ್ಲಿ ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್ ಮಾತನಾಡಿದರು.