ಗ್ರಾಮೀಣ ಸೊಗಡುಗಳಾದ ಜನಪದ ನೃತ್ಯ ರೂಪಕಗಳು ಮತ್ತು ನಾಟಕಗಳು ಇಂದಿಗೂ ಹಳ್ಳಿಗಳ ಜೀವಾಳ
ಹಗರಿಬೊಮ್ಮನಹಳ್ಳಿ: ಗ್ರಾಮೀಣ ಭಾಗದಲ್ಲಿ ರಂಗ ಚಳವಳಿಯ ರೂಪವಾದ ನಾಟಕಗಳು ನಿರಂತರವಾಗಿ ಪ್ರದರ್ಶಿತಗೊಳ್ಳುತ್ತಿವೆ. ಗ್ರಾಮೀಣ ಜನರನ್ನು ಎಚ್ಚರದ ಸ್ಥಿತಿಯಲ್ಲಿಡಲು ನಾಟಕಗಳು ಪೂರಕವಾಗಿವೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ವಿ.ಬಿ. ಮಲ್ಲೇಶಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಯಡ್ರಾಮನಹಳ್ಳಿ ಗ್ರಾಮದ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಸೊಗಡುಗಳಾದ ಜನಪದ ನೃತ್ಯ ರೂಪಕಗಳು ಮತ್ತು ನಾಟಕಗಳು ಇಂದಿಗೂ ಹಳ್ಳಿಗಳ ಜೀವಾಳವಾಗಿವೆ. ನಗರ ಪ್ರದೇಶಗಳಿಂದ ವಿಮುಖವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಷತ್ತು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಪರಿಷತ್ತಿನ ಅಧ್ಯಕ್ಷ ಗೂಳಪ್ಪ ಹುಲಿಮನಿ ಮಾತನಾಡಿ, ಜನರಲ್ಲಿ ಸಾಂಸ್ಕ್ರತಿಕ ಶ್ರೀಮಂತಿಕೆ ಬೆಳೆಸುವ ಅಗತ್ಯವಿದೆ. ಕಲಾವಿದರನ್ನು ಪೋಷಿಸುವ ಔದಾರ್ಯವನ್ನು ಮುಂದಿನ ಪೀಳಿಗೆಗೆ ವಿಸ್ತರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ದತ್ತಿ ದಾನಿಗಳಾದ ಇಟಗಿ ಕಲ್ಲೇಶಪ್ಪ, ತಂಬ್ರಹಳ್ಳಿಯ ರಾಮನಮಲಿ, ಜಿ. ಮಂಜುನಾಥ, ಪೆಂಡಕೂರು ಗಿರೀಶ, ಉಲವತ್ತಿಯ ಆಲೂರು ವೀರಭದ್ರಪ್ಪ ಮತ್ತು ಹಡಗಲಿಯ ಶಾನುಭೋಗರ ಜಗದೀಶ ಅವರು ದತ್ತಿ ದಾನ ಒದಗಿಸಿದ್ದರು.
ಆನಂತರ ಮರಿಯಮ್ಮನಹಳ್ಳಿಯ ಕಲಾವಿದರು ಜಾನಪದ ನೃತ್ಯ ಮತ್ತು ರೈತರ ಧ್ವನಿ ಕಿರು ನಾಟಕ ಪ್ರದರ್ಶಿಸಿದರು. ಗ್ರಾಮದ ಮುಖಂಡರಾದ ಶಿವರಾಮಪ್ಪ, ಜಗದೀಶ, ಕುರಿ ಮುದುಕಪ್ಪ, ಉಮೇಶ್, ವೀರೇಶ, ಮಹಾದೇವಪ್ಪ, ವೀರಣ್ಣ, ಶಿವಮೂರ್ತೆಪ್ಪ, ಕೊಟ್ರಗೌಡ, ಬಸವರಾಜ್, ಕೊಟ್ರಪ್ಪ, ಸಂಗಪ್ಪ, ಪ್ರಶಾಂತ, ಹನುಮಂತಪ್ಪ, ನಾಗೇಂದ್ರಪ್ಪ, ದುರುಗಪ್ಪ, ಮರಿಯಪ್ಪ, ಅಂಬ್ರೇಶಪ್ಪ, ದೇವಪ್ಪ, ಶಿವಪ್ಪ ಹಾಗೂ ಹುಳ್ಳಿ ಹುಲುಗಪ್ಪ ಮತ್ತಿತರರಿದ್ದರು.ಪರಿಷತ್ತಿನ ಪದಾಧಿಕಾರಿಗಳಾದ ಎಸ್.ವಿ. ಪಾಟೀಲ್, ಮಾರುತಿ ಮತ್ತು ಪ್ರಹ್ಲಾದ್ ಕಾರ್ಯಕ್ರಮ ನಿರ್ವಹಿಸಿದರು.