ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜು ಹಾಗೂ ರಷ್ಯಾ ಒಕ್ಕೂಟದ ಪೆಟ್ರೋಜಾವೊಡ್ಕ್ಸ್‌ನಲ್ಲಿರುವ ಅಕಾಡೆಮಿ ಆಫ್ ಸೈನ್ಸಸ್‌ನ ಕರೇಲಿಯನ್ ಸಂಶೋಧನಾ ಕೇಂದ್ರದೊಂದಿಗೆ ಅಂತಾರಾಷ್ಟ್ರೀಯ ತಿಳುವಳಿಕೆ ಒಪ್ಪಂದವನ್ನು (ಎಂ.ಒ.ಯು) ಮಾಡಿಕೊಂಡಿದೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜು ಹಾಗೂ ರಷ್ಯಾ ಒಕ್ಕೂಟದ ಪೆಟ್ರೋಜಾವೊಡ್ಕ್ಸ್‌ನಲ್ಲಿರುವ ಅಕಾಡೆಮಿ ಆಫ್ ಸೈನ್ಸಸ್‌ನ ಕರೇಲಿಯನ್ ಸಂಶೋಧನಾ ಕೇಂದ್ರದೊಂದಿಗೆ ಅಂತಾರಾಷ್ಟ್ರೀಯ ತಿಳುವಳಿಕೆ ಒಪ್ಪಂದವನ್ನು (ಎಂ.ಒ.ಯು) ಮಾಡಿಕೊಂಡಿದೆ.

ಎಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಹಾಗೂ ರಷ್ಯಾದ ಅಕಾಡೆಮಿ ಆಫ್‌ ಸೈನ್ಸ್ ನಿರ್ದೇಶಕ ಡಾ. ಅಲೆಕ್ಸಾಂಡ್ ಎಸ್. ಈ ಒಪ್ಪಂದಕ್ಕೆ ಸಹಿ ಮಾಡಿ, ಒಪ್ಪಂದದ ಕರಾರ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.ಎರಡು ದೇಶಗಳ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗವನ್ನು ಬಲಪಡಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.ಈ ಒಡಂಬಡಿಕೆ ಮೂಲಕ ಜಂಟಿ ಸಂಶೋಧನಾ ಯೋಜನೆಗಳು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳು, ಸಮ್ಮೇಳನಗಳು ಮತ್ತು ಸೆಮಿನಾರಗಳ ಸಂಘಟನೆ ಮತ್ತು ಸಂಶೋಧನಾ ಲೇಖನಗಳ ಪ್ರಕಟಣೆ ಮಾಡಬಹುದಾಗಿದೆ. ಈ ಒಪ್ಪಂದವು ವಿಶೇಷವಾಗಿ ಭೂವಿಜ್ಞಾನ, ಭೂಮಾಹಿತಿ ತಂತ್ರಜ್ಞಾನಗಳು ಮತ್ತು ಸಂಬಂಧಿತ ಸಂಶೋಶನಾ ಕ್ಷೇತ್ರಗಳಲ್ಲಿ ಎರಡೂ ಸಂಸ್ಥೆಗಳಿಗೆ ಉಪಯುಕ್ತವಾಗಲಿದೆ. ಈ ಒಪ್ಪಂದವು ಐದು ವರ್ಷಗಳ ಕಾಲಾವಧಿ ಹೊಂದಿದ್ದು, ವಿದ್ಯಾರ್ಥಿಗಳು, ಅಧ್ಯಾಪಕರಿಗೆ ಆಂತಾರಾಷ್ಟ್ರೀಯ ಮಾನ್ಯತೆ, ಸಂಶೋಧನಾ ಅವಕಾಶಗಳು ಮತ್ತು ಶೈಕ್ಷಣಿಕ ನೆಟ್ ವರ್ಕಿಂಗನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ.ಹಳಿಯಾಳದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕೈಗೊಂಡಿರುವ ಉಪಕ್ರಮಗಳಿಗೆ ಡಾ. ಅಲೆಕ್ಸಾಂಡರ್ ಮೆಚ್ಚುಗೆ ವ್ಯಕ್ತಪಡಿಸಿದರು.ಅಂತಾರಾಷ್ಟ್ರೀಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ ಕುಲಕರ್ಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಒಪ್ಪಂದದ ಸಮಯದಲ್ಲಿ ಸಿವಿಲ್ ವಿಭಾಗದ ಹಿರಿಯ ಪ್ರಾಧಾಪ್ಯಕ ಡಾ. ವಿ.ಎಸ್. ಹೆಗಡೆ, ಸಂಶೋಧನಾ ಹಾಗೂ ಅಭಿವೃದ್ಧಿ ವಿಭಾಗದ ಡೀನ್ ಡಾ. ಶೈಲೇಶ್ ಚೆನ್ನಪಟ್ಟಣ, ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ. ಹರ್ಷ ಜಾಧವ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರ ಉಪಸ್ಥಿತರಿದ್ದರು.