ನಮ್ಮ ಕಲೆ, ಸಂಸ್ಕೃತಿ, ಪರಂಪರೆ ಉಳಿಸಲು ನಾಟಕಗಳು ಇಂಬು ನೀಡುತ್ತವೆ: ಚೈತ್ರ ಶಶಿಧರ್ ಗೌಡ

| Published : Mar 21 2025, 12:34 AM IST / Updated: Mar 21 2025, 12:35 AM IST

ನಮ್ಮ ಕಲೆ, ಸಂಸ್ಕೃತಿ, ಪರಂಪರೆ ಉಳಿಸಲು ನಾಟಕಗಳು ಇಂಬು ನೀಡುತ್ತವೆ: ಚೈತ್ರ ಶಶಿಧರ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನೈಜ ಕಲಾವಿದರೂ ಇರುವುದೇ ನಾಟಕಗಳಲ್ಲಿ ಗುಬ್ಬಿ ವೀರಣ್ಣ ಕಂಪನಿಯಿಂದ ಬಂದ ಹಲವು ಕಲಾವಿದರು ಇಂದು ಚಿತ್ರರಂಗದಲ್ಲಿದ್ದಾರೆ. ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ನಮ್ಮ ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಲು ನಾಟಕಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂಬು ನೀಡುತ್ತವೆ ಎಂದು ಸಮಾಜ ಸೇವಕಿ ಚೈತ್ರ ಶಶಿಧರ್ ಗೌಡ ಹೇಳಿದರು.

ತೊರೆಚಾಕನಹಳ್ಳಿಯಲ್ಲಿ ಶ್ರೀಮಾರುತಿ ಗ್ರಾಮಾಭಿವೃದ್ಧಿ ಟ್ರಸ್ಟ್, ಸಿ.ಎ. ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘ ಹಾಗೂ ರಂಗಭೂಮಿ ಚಾರಿಟೇಬಲ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮಾರಮ್ಮನ ಹಬ್ಬದ ಅಂಗವಾಗಿ ತೊರೆಚಾಕನಹಳ್ಳಿ ಶಂಕರೇಗೌಡ ವಿರಚಿತ ಚಿಗುರಿದ ಕನಸು ಮತ್ತು ಗಂಡನಿದ್ದರೂ ಮುತೈದೆಯಲ್ಲ ಎಂಬ ಸುಂದರ ಸಾಮಾಜಿಕ ನಾಟಕಕ್ಕೆ ಆರ್ಥಿಕ ನೆರವು ನೀಡಿ ಮಾತನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಮನರಂಜನೆಗಾಗಿಯೇ ಸೀಮೀತವಾಗದೆ ನಮ ಮನೋವಿಕಾಸಕ್ಕೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಉತ್ತಮ ಕಥೆಯಾದರಿತ ನಾಟಕಗಳನ್ನು ಅಭಿನಯಿಸಿ ಜನರಿಗೆ ವಾಸ್ತವ ಅರಿವ ರೀತಿ ಅಭಿನಯಿಸಿ ಎಂದರು.

ನೈಜ ಕಲಾವಿದರೂ ಇರುವುದೇ ನಾಟಕಗಳಲ್ಲಿ ಗುಬ್ಬಿ ವೀರಣ್ಣ ಕಂಪನಿಯಿಂದ ಬಂದ ಹಲವು ಕಲಾವಿದರು ಇಂದು ಚಿತ್ರರಂಗದಲ್ಲಿದ್ದಾರೆ. ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂದರು.

ಪ್ರಸ್ತುತ ಹಳ್ಳಿಗಳಲ್ಲಿ ನಾಟಕ ಆಡುತ್ತಿದ್ದ ಕಲಾವಿದರೂ ಜೀ ಕನ್ನಡ ವೇದಿಕೆಯಲ್ಲಿ ನಮ್ಮನ್ನು ರಂಜಿಸುತ್ತಿದ್ದಾರೆ. ಇಂತಹ ಕಲಾವಿದರನ್ನು ಪ್ರೋತ್ಸಹಿಸುವ ಸಲುವಾಗಿ ನಿರಂತರವಾಗಿ ನಾಟಕಗಳಿಗೆ ನಮ್ಮ ಟ್ರಸ್ಟ್ ಸಹಾಯ ಮಾಡುತ್ತ ಬಂದಿದೆ ಎಂದರು.

ಈ ವೇಳೆ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘ ತೊರೆಚಾಕನಹಳ್ಳಿ ಶಂಕರೇಗೌಡ ವಿರಚಿತ ಬಂಗಾರದ ಗುಡಿ ಮತ್ತು ದಾರಿ ತಪ್ಪಿದ ಮಗ ಎಂಬ ಸಾಮಾಜಿಕ ನಾಟಕ ಪುಸ್ತಕ ಬಿಡುಗಡೆ ಗೊಳಿಸಲಾಯಿತು.

ಈ ವೇಳೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಶಿಧರ್‌ಗೌಡ, ಕನ್ನಡ ಜ್ಯೋತಿ ಯುವಕರ ಸಂಘದ ಮಾಜಿ ಅಧ್ಯಕ್ಷ ತೈಲೂರು ಸಿದ್ದರಾಜು, ಖ್ಯಾತ ಹಾಸ್ಯ ನಟ ಕ್ಯಾತಘಟ್ಟ ಅಭಿ, ರಶ್ಮಿ, ಮುಖಂಡರಾದ ಅಜ್ಜಹಳ್ಳಿ ಮನು, ತೊರೆಚಾಕನಹಳ್ಳಿ ಮಹೇಶ, ಕೋಡಹಳ್ಳಿ ಸತ್ಯಪ್ಪ ಅಜ್ಜಹಳ್ಳಿ ವಿಕ್ಕಿ, ಕಿರಣ್, ಬಸವ, ರಾಜು, ರಾಕೇಶ್, ಮನು, ಸೇರಿದಂತೆ ಗ್ರಾಮಸ್ಥರು ಸೇರಿದಂತೆ ಹಲವರಿದ್ದರು.