ಸಾಮಾಜಿಕ ಸೇವೆ ರೂಢಿಸಿಕೊಂಡಾಗ ಆರ್ಥಿಕಾಭಿವೃದ್ಧಿ ಸಾಧ್ಯ-ಶಾಂತಪ್ಪ ಬೆಣ್ಣಿ

| Published : Sep 25 2024, 12:47 AM IST

ಸಾಮಾಜಿಕ ಸೇವೆ ರೂಢಿಸಿಕೊಂಡಾಗ ಆರ್ಥಿಕಾಭಿವೃದ್ಧಿ ಸಾಧ್ಯ-ಶಾಂತಪ್ಪ ಬೆಣ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯವಹಾರದ ಜೊತೆಗೆ ಸಾಮಾಜಿಕ ಸೇವೆಗಳ ರೂಢಿಸಿಕೊಂಡಾಗ ಮಾತ್ರ ಆರ್ಥಿಕಾಭಿವೃದ್ದಿಗೆ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಶ್ರಮವಹಿಸಬೇಕು ಎಂದು ಶ್ರೀ ಉಜ್ಜನಿ ಮರುಳಸಿದ್ಧೇಶ್ವರ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಶಾಂತಪ್ಪ ಬೆಣ್ಣಿ ಹೇಳಿದರು.

ರಾಣಿಬೆನ್ನೂರು: ವ್ಯವಹಾರದ ಜೊತೆಗೆ ಸಾಮಾಜಿಕ ಸೇವೆಗಳ ರೂಢಿಸಿಕೊಂಡಾಗ ಮಾತ್ರ ಆರ್ಥಿಕಾಭಿವೃದ್ದಿಗೆ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಶ್ರಮವಹಿಸಬೇಕು ಎಂದು ಶ್ರೀ ಉಜ್ಜನಿ ಮರುಳಸಿದ್ಧೇಶ್ವರ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಶಾಂತಪ್ಪ ಬೆಣ್ಣಿ ಹೇಳಿದರು. ನಗರದ ಪಿ.ಬಿ. ರಸ್ತೆಯ ಸಾಲೇಶ್ವರ ಕಲ್ಯಾಣ ಮಂಟಪದ ಎದುರಿನ ಶ್ರೀ ಉಜ್ಜನಿ ಮರುಳಸಿದ್ಧೇಶ್ವರ ಸೌಹಾರ್ದ ಸಹಕಾರಿ ನಿಯಮಿತದ ಸಭಾಭವನದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಹಕಾರಿ ಸಂಘವನ್ನು ೨೦೧೫ರಲ್ಲಿ ಸ್ಥಾಪನೆ ಮಾಡಲಾಯಿತು. ಆಗ ೩೦೦ ಸದಸ್ಯರಿಂದ ಆರಂಭವಾದ ಬ್ಯಾಂಕ್ ಈಗ ೮೦೦ ಸದಸ್ಯರನ್ನು ಹೊಂದಿದೆ. ಎಲ್ಲಾ ಸದಸ್ಯರಿಗೆ ಸಾಲಸೌಲಭ್ಯ ನೀಡಲಾಗುತ್ತಿದೆ ಎಂದರು. ಇನ್ನೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೋತ್ಸಾಹ ಧನ, ಸಹಕಾರಿಯಲ್ಲಿ ಮುದ್ದತಿ ಠೇವು ಮತ್ತು ಹಿರಿಯ ನಾಗರೀಕರಿಗೆ ಠೇವಣೆಗಳಿಗೆ ವಿಶೇಷ ಸವಲತ್ತು ನೀಡಲಾಗುತ್ತದೆ. ಇದರ ಜೊತೆಗೆ ಸಿಬ್ಬಂದಿಗಳು, ಪಿಗ್ಮಿ ಏಜೆಂಟರು, ನಿರ್ದೇಶಕರ ನಿಸ್ವಾರ್ಥ ಸೇವೆ ಹಾಗೂ ಸಾಲವನ್ನು ಪಡೆದ ಶೇರುದಾರರು ಸಾಲ ಮುಟ್ಟಿಸುವುದರಿಂದ ಹಣಕಾಸು ಸಂಸ್ಥೆ ಉತ್ತಮ ಸ್ಥಿತಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದರು. ಉಪಾಧ್ಯಕ್ಷ ಕುಮಾರಿ ದತ್ತೂರಿ ಮಾತನಾಡಿ, ಸಹಕಾರಿ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಜೊತೆಗೂಡಿ ಕೆಲಸ ಮಾಡಿದಾಗ ಸಂಘ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇನ್ನೂ ಸಿಬ್ಬಂದಿಗಳ ಶ್ರಮದಿಂದ ಸೊಸೈಟಿ ಏಳಿಗೆಗೆ ಸಹಕಾರಿಯಾಗಿದೆ, ಆದ್ದರಿಂದ ಈ ಬೋನಸ್ ನೀಡಬೇಕು ಎಂದರು. ಸೊಸೈಟಿ ನಿರ್ದೇಶಕರಾದ ಜಯಶ್ರೀ ನೀರಲಗಿಮಠ, ರೇವಣಸಿದ್ದಪ್ಪ ಜಿ.ಎಚ್., ಚಂದ್ರಮ್ಮ ಬೆಣ್ಣಿ, ವೀಣಾ ಬೆಣ್ಣಿ, ಬಸವರಾಜ ಯರಬಾಳ, ಕುಮಾರ ದತ್ತೂರಿ, ರತ್ನಾ ದತ್ತೂರಿ, ರಾಮಪ್ಪ ಭಜಂತ್ರಿ, ಮಂಜಪ್ಪ ಗುತ್ತೇಕ್ಕನವರ, ವ್ಯವಸ್ಥಾಪಕ ಕುಮಾರ ಬೆಣ್ಣಿ, ನಾಗರಾಜ ಎಸ್.ಬಿ., ಸೇರಿದಂತೆ ಮತ್ತಿತರು ಇದ್ದರು.