ಶಿಕ್ಷಣ ಅಕ್ಷರ ಪ್ರೀತಿಸುವ, ಶ್ರಮಜೀವಿಗಳ ಸ್ವತ್ತು: ಭೀಮಣ್ಣ ನಾಯ್ಕ

| Published : Nov 09 2025, 03:00 AM IST

ಶಿಕ್ಷಣ ಅಕ್ಷರ ಪ್ರೀತಿಸುವ, ಶ್ರಮಜೀವಿಗಳ ಸ್ವತ್ತು: ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಯಾರ ಸ್ವತ್ತಲ್ಲ. ಅದು ಅಕ್ಷರವನ್ನು ಪ್ರೀತಿಸುವವರ ಮತ್ತು ಶ್ರಮಜೀವಿಗಳ ಸ್ವತ್ತು. ಹೀಗಾಗಿ ಪ್ರತಿಯೊಬ್ಬರು ಉನ್ನತ ಶಿಕ್ಷಣವನ್ನು ಪಡೆಯುವತ್ತ ಗಮನಹರಿಸಬೇಕು.

ಕನ್ನಡಪ್ರಭ ವಾರ್ತೆ ಅಂಕೋಲಾ

ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಕಳೆದ 31 ವರ್ಷಗಳ ಹಿಂದೆಯೇ ಎನ್.ಎಂ. ನಾಯ್ಕರು ಈ ಭಾಗದಲ್ಲಿ ಪ್ರೌಢಶಾಲೆ ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಂಸ್ಥೆ ಮತ್ತು ಗ್ರಾಮಸ್ಥರ ಸಹಕಾರದಿಂದ ಇಂದು ಬೆಳ್ಳಿಹಬ್ಬ ನಡೆಯುತ್ತಿರುವುದು ಹರ್ಷದಾಯಕ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ಮಂಜಗುಣಿಯಲ್ಲಿ ಶ್ರೀ ಗುರುದಾಸ ಪ್ರೌಢಶಾಲೆಯ ಶನಿವಾರ ಬೆಳ್ಳಿಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣ ಪ್ರೀತಿಸಬೇಕು. ತೀವ್ರ ಬಡತನದ ಬೇಗುದಿಯಲ್ಲಿ ಇರುವ ಮಕ್ಕಳು ಕೂಡ ಇಂದು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಶಿಕ್ಷಣ ಯಾರ ಸ್ವತ್ತಲ್ಲ. ಅದು ಅಕ್ಷರವನ್ನು ಪ್ರೀತಿಸುವವರ ಮತ್ತು ಶ್ರಮಜೀವಿಗಳ ಸ್ವತ್ತು. ಹೀಗಾಗಿ ಪ್ರತಿಯೊಬ್ಬರು ಉನ್ನತ ಶಿಕ್ಷಣವನ್ನು ಪಡೆಯುವತ್ತ ಗಮನಹರಿಸಬೇಕು ಎಂದರು.

ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್. ನಾಯ್ಕ ಬೆಳ್ಳಿ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಬೆಳ್ಳಿಹಬ್ಬವನ್ನು ಎಲ್ಲರೂ ಸೇರಿ ಸಂಭ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಶಿಕ್ಷಣ ಕ್ಷೇತ್ರಕ್ಕೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹೊಸತನವನ್ನು ತಂದಿದ್ದರು. ಅದರಂತೆ ಮಧು ಬಂಗಾರಪ್ಪ ಕೂಡ ಈಗ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಶಿಕ್ಷಣಕ್ಕೆ ಮಹತ್ವ ನೀಡಬೇಕು. ಹಾಗೇ ಸ್ಮರಣ ಸಂಚಿಕೆಯು ಕೂಡ ಉತ್ತಮವಾಗಿ ಮೂಡಿಬಂದಿದೆ ಎಂದರು.

ಶ್ರೀ ರಾಜರಾಜೇಶ್ವರಿ ಸಂಸ್ಥೆಯ ಅಧ್ಯಕ್ಷ ಡಾ. ನಾಗರಾಜ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನಾ ಪ್ರತಿಷ್ಠಾನ ಪ್ರಾಧಿಕಾರದ ತಾಲೂಕಾಧ್ಯಕ್ಷ ಪಾಂಡುರಂಗ ಕೆ. ಗೌಡ, ಸಲಹಾ ಸಮಿತಿ ಅಧ್ಯಕ್ಷ ಅಶೋಕ ಡಿ. ನಾಯ್ಕ, ಹೊನ್ನೆಬೈಲ್ ಗ್ರಾಪಂ ಅಧ್ಯಕ್ಷ ವೆಂಕಟ್ರಮಣ ಕೆ. ನಾಯ್ಕ, ಪ್ರಭಾರಿ ಶಿಕ್ಷಣಾಧಿಕಾರಿ ನಾಗರಾಜ ರಾಯ್ಕರ ಮಾತನಾಡಿದರು.

ಸ್ಮರಣ ಸಂಚಿಕೆ ಅಧ್ಯಕ್ಷ ನಾಗರಾಜ ಮಂಜಗುಣಿ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಪ್ರವೀಣ ವಿ. ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ ವಿ. ನಾಯ್ಕ, ಟ್ರಸ್ಟಿಗಳಾದ ವಿಶ್ವನಾಥ ಟಿ. ನಾಯ್ಕ, ಅಖಿಲ ಎನ್. ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟೇಶ ಎಸ್. ನಾಯ್ಕ, ತಾಯಂದಿರ ಸಮಿತಿ ಅಧ್ಯಕ್ಷ ಶ್ಯಾಮಲಾ ಕುಡ್ತಳಕರ ಉಪಸ್ಥಿತರಿದ್ದರು.

ಮುಖ್ಯಾಧ್ಯಾಪಕ ಎಂ.ಡಿ. ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಜಿ.ಆರ್. ತಾಂಡೇಲ, ಚಂದ್ರಶೇಖರ ಜಿ. ನಾಯ್ಕ ನಿರ್ವಹಿಸಿದರು. ಚಂದ್ರಕಾಂತ ಲಮಾಣಿ ವಂದಿಸಿದರು. ಶಿಕ್ಷಕರಾದ ಸಚಿನ ನಾಯಕ, ಭಾಸ್ಕರ ನಾಯ್ಕ, ದೀಪಾ ನಾಯಕ, ಅರುಣಕುಮಾರ ನಾಯ್ಕ, ನಯನಾ ಗಾಂವಕರ, ರಾಜೇಶ ಬಾನಾವಳಿಕರ, ಸಲಹಾ ಸಮಿತಿ ಉಪಾಧ್ಯಕ್ಷ ಮಹಾಬಲೇಶ್ವರ ನಾಯ್ಕ, ಶ್ರೀಪಾದ ನಾಯ್ಕ, ಅಶೋಕ ವಿ. ನಾಯ್ಕ ಸೇರಿ ಹಲವರು ಉಪಸ್ಥಿತರಿದ್ದರು.