ಸಾರಾಂಶ
ಮಕ್ಕಳಿಂದ- ವಯಸ್ಸಾದ ಮುಪ್ಪಿನನವರೆಗೂ ತಮಗೆ ಶಿಕ್ಷಣ ಹಾಗೂ ಶಿಸ್ತು ಕಲಿಸಿಕೊಟ್ಟ ಗುರುಗಳನ್ನು ನೆನೆಯುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಶ್ರೇಯೋಭಿವೃದ್ಧಿಗೆ ಎಲ್ಲಾ ಶಿಕ್ಷಕರು ಕಾರಣರಾಗುತ್ತಾರೆ. ಇದರಿಂದ ಶಿಕ್ಷಣ ಕ್ಷೇತ್ರ ಮಹಾಶ್ರೇಷ್ಠ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಿಗಿಂತ ಶಿಕ್ಷಣ ಕ್ಷೇತ್ರ ಮಹಾ ಶ್ರೇಷ್ಠತೆಯನ್ನು ಹೊಂದಿದೆ ಎಂದು ಶಾಸಕ ಹಾಗೂ ಶಾಲಾಭಿವೃದ್ಧಿ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ.ಅಶೋಕ್ ಕುಮಾರ್ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿ ಮಾತನಾಡಿ, ಶಿಕ್ಷಣ ಕ್ಷೇತ್ರ ಪ್ರತಿಯೊಂದು ವಿಷಯದಲ್ಲಿ ಒಬ್ಬೊಬ್ಬರನ್ನು ಸಹ ಗುರುತು ಮಾಡಿ ತೋರಿಸುತ್ತದೆ, ಜೊತೆಗೆ ಗುರುಗಳಾಗಿ ಮಕ್ಕಳ ಕಾರ್ಯ ಚಟುವಟಿಕೆಗಳಿಗೆ, ಶ್ರೇಯಸ್ಸಿಗೆ ಶ್ರಮಿಸುವುದರಿಂದಲೇ ಗುರುಗಳು ಇಂದಿಗೂ ಗೌರವ ಸಿಗುತ್ತಿದೆ ಎಂದರು.
ಮಕ್ಕಳಿಂದ- ವಯಸ್ಸಾದ ಮುಪ್ಪಿನನವರೆಗೂ ತಮಗೆ ಶಿಕ್ಷಣ ಹಾಗೂ ಶಿಸ್ತು ಕಲಿಸಿಕೊಟ್ಟ ಗುರುಗಳನ್ನು ನೆನೆಯುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಶ್ರೇಯೋಭಿವೃದ್ಧಿಗೆ ಎಲ್ಲಾ ಶಿಕ್ಷಕರು ಕಾರಣರಾಗುತ್ತಾರೆ. ಇದರಿಂದ ಶಿಕ್ಷಣ ಕ್ಷೇತ್ರ ಮಹಾಶ್ರೇಷ್ಠ ಎನ್ನಲಾಗಿದೆ ಎಂದರು.ನಂತರ ಬಿಇಒ ಆರ್.ಪಿ.ಮಹೇಶ್ ಉಪ ಪ್ರಾಂಶುಪಾಲರ ಕುರಿತು ಆಶಯ ನುಡಿದರು. ಈ ವೇಳೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಶಾಲಾಭಿವೃದ್ಧಿ ಸದಸ್ಯರು ಹಾಗೂ ಶಿಕ್ಷಕಕ ವೃಂದ, ಶಾಲೆಯ ವಿದ್ಯಾರ್ಥಿಗಳ ಉಪಸ್ಥಿತರಿದ್ದು, ನಿವೃತ್ತ ಉಪ ಪ್ರಾಂಶುಪಾಲ ಬಿ. ಅಶೋಕ್ ಕುಮಾರ್ ಅವರನ್ನು ಅಭಿನಂದಿಸಿ ಗೌರವಿಸಿದರು.