ಕೊಡಂಗೆ ರಾಮಮಂದಿರದಲ್ಲಿ ಏಕಾಹ ಭಜನಾ ಸಪ್ತಾಹ ಸಂಪನ್ನ

| Published : Dec 13 2024, 12:47 AM IST

ಕೊಡಂಗೆ ರಾಮಮಂದಿರದಲ್ಲಿ ಏಕಾಹ ಭಜನಾ ಸಪ್ತಾಹ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಪರ್ಕಳ ಕೊಡಂಗೆಯ ಶ್ರೀರಾಮ ಮಂದಿರದಲ್ಲಿ ೭೨ನೇ ವರ್ಷದ ಏಕಾಹ ಭಜನಾ ಮಂಗಲೋತ್ಸವ ವಿಜೃಂಬಣೆಯಿಂದ ಸಂಪನ್ನಗೊಂಡಿತು. ನರಸಿಂಗೆ ದೇವಳದ ವೈದಿಕರಾದ ಗಣೇಶ್ ಭಟ್‌, ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಕಳ ಕೊಡಂಗೆಯ ಶ್ರೀರಾಮ ಮಂದಿರದಲ್ಲಿ ೭೨ನೇ ವರ್ಷದ ಏಕಾಹ ಭಜನಾ ಮಂಗಲೋತ್ಸವ ವಿಜೃಂಬಣೆಯಿಂದ ಸಂಪನ್ನಗೊಂಡಿತು. ನರಸಿಂಗೆ ದೇವಳದ ವೈದಿಕರಾದ ಗಣೇಶ್ ಭಟ್‌, ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು.ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆಯ ನಂತರ ಅನ್ನಸಂತರ್ಪಣೆ ನಡೆಯಿತು. ಶ್ರೀರಾಮ ಮಂದಿರದ ಗೌರವ ಅಧ್ಯಕ್ಷ ಸರಳೇಬೆಟ್ಟು ರಮಾನಾಥ ನಾಯಕ್, ಅಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್, ಕಾರ್ಯದರ್ಶಿಗಳಾದ ಹರೀಶ್ಚಂದ್ರ ನಾಯಕ್ ಮಂಚಿ, ರಾಮದಾಸ್ ನಾಯಕ್, ಸಂಚಾಲಕ ಅರುಣ್ ನಾಯಕ್, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ಹಿರ್ಗಾನ ಲಕ್ಷ್ಮೀಪುರ ದೇವಳದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಸಾರಸ್ವತ ಸಂದೇಶ್ ಪತ್ರಿಕೆಯ ಸಂಪಾದಕ ಸರಳೇಬೆಟ್ಟು ಗೋಪಾಲಕೃಷ್ಣ ನಾಯಕ್, ಅನ್ನಸಂತರ್ಪಣೆಯ ಸೇವಾದಾರರಾದ ರಾಘವೇಂದ್ರ ನಾಯಕ್ ಮಾರುತಿನಗರ, ಶ್ರೀ ದುರ್ಗಾಪರಮೇಶ್ವರೀ ಸೊಸೈಟಿ ಅಧ್ಯಕ್ಷ ಅಶೋಕ್ ನಾಯಕ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಶ್ರೀರಾಮ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭ ದೇವರನ್ನು ಮತ್ತು ಮಂದಿರವನ್ನು ಹೂವುಗಳಿಂದ ವಿಶೇಷವಾಗಿ ಶೃಂಗರಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ೧೩ ಭಜನಾ ಮಂಡಳಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಜನಾ ಸೇವೆಯನ್ನು ನೀಡಿದ್ದವು.