ದಾಬಸ್‍ಪೇಟೆ: ಸೋಂಪುರ ಹೋಬಳಿಯ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತಾರಾ ಮತ್ತು ಉಪಾಧ್ಯಕ್ಷರಾಗಿ ವೆಂಕಟಶಾಮಯ್ಯ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕುಮಾರ್ ತಿಳಿಸಿದರು. ನೂತನ ಅಧ್ಯಕ್ಷೆ ತಾರಾ ಮಾತನಾಡಿ, ಸಹಕಾರ ಸಂಘಕ್ಕೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಖುಷಿ ತಂದಿದೆ. ಸಂಘವನ್ನು ಲಾಭದತ್ತ ಕೊಂಡ್ಯೊಯ್ಯಲು ಪ್ರಯತ್ನಿಸುತ್ತೇನೆ. ನಿಕಟಪೂರ್ವ ಅಧ್ಯಕ್ಷ ನಾಗಭೂಷಣ್ ಅವರ ಸಹಕಾರ, ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದರು. ಈ ವೇಳೆ ನಿರ್ದೇಶಕರಾದ ನಿರ್ಮಲ, ಚಂದ್ರಶೇಖರ್, ಲಿಂಗರಾಜು, ಲೋಕೇಶ್, ಮರಿಗಂಗಪ್ಪ, ರವಿಚಂದ್ರ, ರಾಜಣ್ಣ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರವಿಕುಮಾರ್, ಸಿಇಒ ನಾಗರಾಜು, ಸಿಬ್ಬಂದಿಗಳಾದ ಸೌಮ್ಯ, ದೇವರಾಜು, ಗ್ರಾಮಸ್ಥರು ಉಪಸ್ಥಿತರಿದ್ದರು.