ಕೊಪ್ಪಳ: ಅಭಿವೃದ್ಧಿ ಕಾರ್ಯಗಳಿಗೆ ಸದಾ ಬದ್ಧನಿದ್ದೇನೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ನಾನಾ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದ ಅವರು, ನೀರಾವರಿ ಯೋಜನೆಗಳಿಗೆ ಅನುದಾನ ನೀಡಲಾಗಿದೆ. ನೀರಾವರಿ ಯೋಜನೆ ಬಹುದಿನದ ಕನಸಾಗಿತ್ತು. ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈ ನೀರಾವರಿ ಯೋಜನೆ ಈ ಭಾಗದ ಅನೇಕ ರೈತರ ಅನೇಕ ವರ್ಷಗಳ ಕನಸಾಗಿತ್ತು. ಈಗ ನಾವು ಈ ನೀರಾವರಿ ಯೋಜನೆಗೆ ಅನುದಾನ ಮಂಜೂರು ಮಾಡಿಸಿ, ಈ ಭಾಗದ ಬಹುದಿನಗಳ ಬೇಡಿಕೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಕರ್ಕಿಹಳ್ಳಿ ಸೈಟ್ -2ರಲ್ಲಿ 180 ಎಕರೆ, ಚಿಕ್ಕಬಗನಾಳ ಗ್ರಾಮದಲ್ಲಿ 279 ಎಕರೆ ಹಾಗೂ ಹಿರೇಬಗನಾಳ ಗ್ರಾಮದಲ್ಲಿ 263 ಎಕರೆ ನೀರಾವರಿ ಪ್ರದೇಶ ಆಗಲಿದೆ. ನೀರಾವರಿ ಯೋಜನೆಯಿಂದ ರೈತರಿಗೆ ಆರ್ಥಿಕವಾಗಿ ಮುನ್ನೆಲೆಗೆ ಬರಲು ಸಹಕಾರಿ ಆಗುತ್ತದೆ. ಆದ್ದರಿಂದ ನೀರಾವರಿ ಯೋಜನೆಗಳಿಗೆ ಮಹತ್ವ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಲಾಚನಕೇರಿ ಗ್ರಾಮದಲ್ಲಿ ಕೂಡ ₹2.80 ಕೋಟಿ ವೆಚ್ಚದಲ್ಲಿ 344 ಎಕರೆ ನೀರಾವರಿ ಪ್ರದೇಶದ ಕಾಮಗಾರಿಗೆ ಹಾಗೂ ₹90 ಲಕ್ಷ ವೆಚ್ಚದಲ್ಲಿ ಎಸ್.ಟಿ. ಸಮಾಜದ ಆಯ್ದ ಫಲಾನುಭವಿಗಳಿಗೆ ತುಂಗಭದ್ರಾ ಹಿನ್ನೀರಿಂದ ಏತ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿ, ₹1.81 ಕೋಟಿ ವೆಚ್ಚದಲ್ಲಿ ಕುಣಿಕೇರಿ ತಾಂಡಾ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ ಮತ್ತು ಅಲ್ಲಾನಗರ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣದ ಕಾಮಗಾರಿ, ₹14.53 ಕೋಟಿ ವೆಚ್ಚದಲ್ಲಿ ಗೊಂಡಬಾಳ ಜಿಪಂ ವ್ಯಾಪ್ತಿಯ ಕರ್ಕಿಹಳ್ಳಿ ಗ್ರಾಮದಲ್ಲಿ ₹8.20 ಕೋಟಿ ವೆಚ್ಚದಲ್ಲಿ ಕರ್ಕಿಹಳ್ಳಿ ಸೈಟ್ -1 ಹಾಗೂ ಕರ್ಕಿಹಳ್ಳಿ ಸೈಟ್ -2, ಚಿಕ್ಕಬಗನಾಳ ಹಾಗೂ ಹಿರೇಬಗನಾಳ ಏತ ನೀರಾವರಿ ಯೋಜನೆಗೆ ಅಡಿಗಲ್ಲು ನೆರವೇರಿಸಲಾಯಿತು.

ಕೊಪ್ಪಳ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ಜಿಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ, ಗವಿಸಿದ್ದಪ್ಪ ಕರಡಿ, ಮುಖಂಡರಾದ ಜಡಿಯಪ್ಪ ಬಂಗಾಳಿ, ಹೇಮಣ್ಣ ದೇವರಮನಿ, ವಿರೂಪಣ್ಣ ಕುರುಬರು, ತೋಟಪ್ಪ ಕಾಮನೂರು, ಕೆ.ಎಂ. ಸೈಯದ್, ಹನುಮೇಶ ಹೊಸಳ್ಳಿ, ಜಗದೀಶ ಕರ್ಕಿಹಳ್ಳಿ, ಗವಿಸಿದ್ದಪ್ಪ ಕುಂಬಾರ, ಅಸ್ಮಾನ್ ಸಾಬ್, ಚಂದಪಾಷಾ, ಯಂಕಪ್ಪ ಹೊಸಳ್ಳಿ ಬನ್ನೇಪಗೌಡ, ದಾದಪೀರ್, ರವಿ ದೇವರಮನಿ, ಧರ್ಮರಾಜ ದೇವರಮನಿ, ದೇವೇಂದ್ರಪ್ಪ ಮಜ್ಜಿಗಿ, ಮಾರುತಿ ಪವಾಡದಾಸ, ರವಿ ಕಾಸನಕಂಡಿ, ನಿಂಗಪ್ಪ ಕಾಸನಕಂಡಿ, ಮಲ್ಲು ಪೂಜಾರ್, ಇಒ ದುಂಡಪ್ಪ ತುರಾದಿ ಇತರರಿದ್ದರು.