ಮೀನುಗಾರಿಕೆಯಿಂದ ಉದ್ಯೋಗವಕಾಶ, ಆದಾಯ ವೃದ್ಧಿ: ಪಾಟೀಲ

| Published : Jul 13 2024, 01:44 AM IST / Updated: Jul 13 2024, 10:58 AM IST

ಮೀನುಗಾರಿಕೆಯಿಂದ ಉದ್ಯೋಗವಕಾಶ, ಆದಾಯ ವೃದ್ಧಿ: ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮೀನುಗಾರಿಕೆಯು ಅನೇಕ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ನೀಡಿದೆ. ಇದರಿಂದ ಜನರು ತಾವಿರುವ ಸ್ಥಳದಲ್ಲಿಯೇ ಉದ್ಯೋಗ, ಆದಾಯ ಪಡೆಯಬಹುದಾಗಿದೆ.  

 ಚಿತ್ತಾಪುರ :  ಮೀನುಗಾರಿಕೆಯು ಅನೇಕ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ನೀಡಿದೆ. ಇದರಿಂದ ಜನರು ತಾವಿರುವ ಸ್ಥಳದಲ್ಲಿಯೇ ಉದ್ಯೋಗ, ಆದಾಯ ಪಡೆಯಬಹುದಾಗಿದೆ. ವಿಶ್ವದ ಅನೇಕ ಜನರಿಗೆ ಮೀನು ಆಹಾರವಾಗಿದೆ. ಮೀನುಗಳಿಂದ ನೀರಿನ ಗುಣಮಟ್ಟ ಹೆಚ್ಚಳವಾಗಲು ಸಾಧ್ಯವಾಗುತ್ತದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

ಖಾಜಾ ಕೋಟನೂರ ಕೆರೆಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ರಾಷ್ಟ್ರೀಯ ಮೀನು ಸಾಕಾಣಿಕೆದಾರರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮೀನು ಹೆಚ್ಚಿನ ಪ್ರಮಾಣದ ಪ್ರೋಟಿನ್ ಅಂಶ ಒಳಗೊಂಡಿದ್ದು, ಅದರ ಸೇವನೆ ಆರೋಗ್ಯಕ್ಕೆ ಉತ್ತಮವೆಂದು ವೈದ್ಯಲೋಕ ತಿಳಿಸಿದೆ. ಮರೆವು, ಕ್ಯಾನ್ಸರ್ ಕಾಯಿಲೆಗಳ ಗುಣಪಡಿಸುವಲ್ಲಿ ಮೀನಿನ ಆಹಾರವನ್ನು ಬಳಸಲಾಗುತ್ತದೆ. ಡಾ.ಹೀರಾಲಾಲ್ ಚೌಧರಿ ಮತ್ತು ಡಾ. ಕೆ.ಎಚ್.ಅಲಿಕುನ್ಹಿ ಅವರ ಒಳನಾಡು ಮೀನು ಸಾಕಾಣಿಕೆಯಲ್ಲಿ ಮೀನುಗಳ ಸಂತಾನೋತ್ಪತ್ತಿಯಲ್ಲಿ ಹೈಪೋಫೈಸೇಷನ್ ತಂತ್ರಜ್ಞಾನದ ಪ್ರಯೋಗ ಜು.೧೦, ೧೯೫೭ರಂದು ಯಶಸ್ವಿಯಾಯಿತು. ಅದಕ್ಕಾಗಿ ಈ ದಿನವನ್ನು ‘ರಾಷ್ಟ್ರೀಯ ಮೀನು ಸಾಕಾಣಿಕೆದಾರರ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ ಎಂದರು. ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಮೀನುಗಾರರಾದ ಸುಲೋಮನ್, ಲಕ್ಷ್ಮಿ, ಎಸ್ಟರಿನ್, ಪ್ರಶಾಂತಿ ಸೇರಿದಂತೆ ಮೀನುಗಾರರ ಕುಟುಂಬದವರು ಇದ್ದರು.