ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜನೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳ ತಂಡದ ಸದಸ್ಯರಾಗಿದ್ದ ತಹಸೀಲ್ದಾರ್ ರವಿಕುಮಾರ ಕೊರವರ ಅವರು ಸವಣೂರಿನಲ್ಲಿ ಸೇವೆ ಸಲ್ಲಿಸುತ್ತಿರುವದು ಹಾಗೂ 15ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ನೇತೃತ್ವ ವಹಿಸಿರುವದು ಕಂಡಾಗ ಸಮ್ಮೇಳನ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಸಮ್ಮೇಳನ ಜರುಗುತ್ತದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.

ಸವಣೂರು: ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜನೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳ ತಂಡದ ಸದಸ್ಯರಾಗಿದ್ದ ತಹಸೀಲ್ದಾರ್ ರವಿಕುಮಾರ ಕೊರವರ ಅವರು ಸವಣೂರಿನಲ್ಲಿ ಸೇವೆ ಸಲ್ಲಿಸುತ್ತಿರುವದು ಹಾಗೂ 15ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ನೇತೃತ್ವ ವಹಿಸಿರುವದು ಕಂಡಾಗ ಸಮ್ಮೇಳನ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಸಮ್ಮೇಳನ ಜರುಗುತ್ತದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.ಕಸಾಪ ವತಿಯಿಂದ ಪಟ್ಟಣದ ಜ್ಞಾನಪೀಠ ಪುರಸ್ಕೃತ ಡಾ. ವಿ. ಕೃ. ಗೋಕಾಕ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ದ್ವಿತೀಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 15ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನೇತೃತ್ವ ವಹಿಸಿರುವದು ಕಂಡಾಗ ಸಮ್ಮೇಳನ ಅದ್ಧೂರಿ ಮತ್ತು ಅರ್ಥಪೂರ್ಣ ಆಯೋಜನೆಯಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಸಾಹಿತ್ಯ ಆಸಕ್ತರು ಹೆಚ್ಚಿನ ನಂಬಿಕೆಯೊಂದಿಗೆ ಸಮ್ಮೇಳನದಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಉತ್ಸಾಹ ತೋರಬೇಕು. 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ಸರ್ಕಾರದ ಆರ್ಥಿಕ ದಿಗ್ಬಂಧನದಿಂದಾಗಿ ಹಣ ಕಾಸಿನ ತೊಂದರೆಯಾಗಿ ಕೋರ್ಟ್‌ ವ್ಯಾಜ್ಯದಲ್ಲಿ ಇರುವುದರಿಂದ ಅನುದಾನ ಬಿಡುಗಡೆ ಆಗುವದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಸವಣೂರಿನ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಇದರ ಜವಾಬ್ದಾರಿಯನ್ನು ತೆಗೆದುಕೊಂಡು ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಬೇಕು ಎಂದರು.ಸಭೆಯ ನೇತೃತ್ವ ವಹಿಸಿ ತಹಸೀಲ್ದಾರ್ ರವಿಕುಮಾರ ಕೊರವರ ಮಾತನಾಡಿ, ಪಟ್ಟಣದಲ್ಲಿ 15ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಯೋಜನೆಗೆ ದಿನಾಂಕ, ಸ್ಥಳ ನಿಗದಿಯೊಂದಿಗೆ ಸಾಹಿತ್ಯಾಸಕ್ತರು ಪೂರ್ವ ಸಿದ್ದತೆಗೆ ಮುಂದಾಗಿರುವದು ಸಾಹಿತ್ಯಾಸಕ್ತರ ಮನಸ್ಸು ಮತ್ತಷ್ಟ ಇಮ್ಮಡಿಗೊಳಿಸಿದೆ. ತಾಲೂಕು ಸೇರಿದಂತೆ ಜಿಲ್ಲೆಯ ಹೆಸರಾಂತ ಶರಣರು, ದಾರ್ಶನಿಕರು, ಸಾಹಿತಿಗಳ ಜೀವನ ದರ್ಶನ ಗೋಷ್ಠಿಗಳನ್ನು ಸಮ್ಮೇಳನದಲ್ಲಿ ಏರ್ಪಡಿಸುವದು. ಮುಖ್ಯವಾಗಿ ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳು ಸೇರಿದಂತೆ ಸರ್ವರಿಗೂ ಸ್ಥಳೀಯ ಪ್ರಾಮುಖ್ಯತೆಯ ಸವಿರುಚಿ ಊಟದ ವ್ಯವಸ್ಥೆ ಕೈಗೊಳ್ಳಲಾಗುವದು. ಸಮ್ಮೇಳನ ಹಿನ್ನಲೆಯಲ್ಲಿ ಪಟ್ಟಣದಲ್ಲಿ ವಿಶೇಷವಾಗಿ ಸ್ವಚ್ಛತೆಯೊಂದಿಗೆ ಶೃಂಗರಿಸುವದು. ಹಾವೇರಿ ಜಿಲ್ಲೆಯ ವಿವಿಧ ಸ್ಥಳಗಳಿಂದ ಸಾಹಿತ್ಯಾಸ್ತಕರು ಆಗಮಿಸುವ ಹಿನ್ನಲೆಯಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅದರಲ್ಲಿಯೂ ಸಹ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪದವಿ ಕಾಲೇಜ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸಲು ಮುಂದಾದಲ್ಲಿ ಮಾತ್ರ ಈ ಹಿಂದೇ ನಡೆದ 14 ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಂತ 15ನೇ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯೊಂದಿಗೆ ಅರ್ಥಪೂರ್ಣವಾಗಿ ಸವಣೂರಿನ ಜನತೆ ಏರ್ಪಡಿಸಿದ್ದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಸಾಧ್ಯವಾಗಲಿದೆ. ಆದ್ದರಿಂದ, ಪ್ರತಿ ಒಬ್ಬರು ಮನೆಯ ಹಬ್ಬದ ಸಡಗರಕ್ಕೆ ಸಿದ್ಧತೆ ಕೈಗೊಳ್ಳುವ ಮನಸ್ಥಿತಿಯನ್ನು ಹೊಂದಿ ಸಾಹಿತ್ಯ ಸಮ್ಮೇಳನ ಸಿದ್ಧತೆಯಲ್ಲಿ ಪಾಲ್ಗೊಳ್ಳಿ ಎಂದರು.ಸವಣೂರನಲ್ಲಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಕುರಿತು ಕಸಾಪ ತಾಲೂಕು ಘಟಕದ 2026ರ ಜ. 10 ಹಾಗೂ 11ರಂದು ಪಟ್ಟಣದ ಕೆಪಿಎಸ್ (ಸರ್ಕಾರಿ ಮಜೀದ ಪಿಯು ಕಾಲೇಜ್) ಶಾಲಾ ಆವರಣದಲ್ಲಿ 15ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಯೋಜನೆಗೆ ಸರ್ವರೂ ಒಪ್ಪಿಗೆ ಸೂಚಿಸಿದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಿ.ಎನ್.ಪಾಟೀಲ ಮಾತನಾಡಿ, ಶಾಸಕ ಯಾಸೀರಖಾನ್ ಪಠಾಣ ಸೇರಿದಂತೆ ರಾಜಕೀಯ ಪ್ರಮುಖರು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಡಾ. ವಿ.ಕೃ. ಗೋಕಾಕ ಭವನದಲ್ಲಿ ಮೂರನೇಯ ಪೂರ್ವಭಾವಿ ಸಭೆಯನ್ನು ಶಾಸಕರೊಂದಿಗೆ ಮಾತನಾಡಿ ಮುಂದಿನ ಸಭೆಯ ದಿನಾಂಕವನ್ನು ತಿಳಿಸಲಾಗುವುದು. ಆದ್ದರಿಂದ, ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಸಾಹಿತ್ಯ ಪರಿಷತ್ ನಿಯಮ ಅನುಸಾರ ಸಮ್ಮೇಳನ ಆಯೋಜನೆಯ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳನ್ನು ರಚಸಿ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿ ಸಭೆಯ ಒಪ್ಪಿಗೆಯನ್ನು ಪಡೆಯಲಾಗಿದೆ. ಮುಂದಿನ ಸಭೆಯಲ್ಲಿ ಸರ್ವಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವದು ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರಭು ಅರಗೋಳ, ತಾಲೂಕು ನೌಕರರ ಸಂಘದ ಅಧ್ಯಕ್ಷ ಬಸವರಾಜ ಹೊಸಮನಿ, ಪ್ರಮುಖರಾದ ಮಲ್ಲಾರಪ್ಪ ತಳ್ಳಿಹಳ್ಳಿ, ಮಾಂತೇಶ ಮೆಣಸಿನಕಾಯಿ, ಪ್ರವೀಣ ಚರಂತಿಮಠ, ಸಿ.ಸಿ.ಕೂಳೋನೂರ, ರವಿ ಕರಿಗಾರ, ವೀರಯ್ಯ ಸಂಕೀನಮಠ, ಲಕ್ಷ್ಮಣ ಕನವಳ್ಳಿ, ಪ್ರಕಾಶ ಜಮಾದಾರ, ಪರಶುರಾಮ ಈಳಗೇರ, ಸುನಂದಾ ಚಿನ್ನಾಪೂರ, ಸಿ.ಎನ್.ಲಕ್ಕನಗೌಡ್ರ, ಎಸ್.ವಿ. ಕೋಳಿವಾಡ, ಬಸನಗೌಡ ಪಾಟೀಲ, ಎಂ.ಎಸ್. ಮಲ್ಲನಗೌಡ್ರ, ನಿವೃತ್ತ ಶಿಕ್ಷಕರ ಸಂಘದ ಪಿ.ಎಂ. ಅರಗೋಳ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಮಹಿಳಾ ಸಂಘಟನೆ ಪದಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.