ರೈತರನ್ನು ಪ್ರತಿಯೊಬ್ಬರು ಗೌರವಿಸಬೇಕು: ಬಿ. ಸಿದ್ದಬಸಪ್ಪ

| Published : Dec 26 2024, 01:01 AM IST

ರೈತರನ್ನು ಪ್ರತಿಯೊಬ್ಬರು ಗೌರವಿಸಬೇಕು: ಬಿ. ಸಿದ್ದಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

Everyone should respect farmers: B. Siddabasappa

-ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ರೈತ ದಿನಾಚರಣೆ ಕಾರ್ಯಕ್ರಮ

----

ಕನ್ನಡಪ್ರಭ ವಾರ್ತೆ ಭದ್ರಾವತಿ

ರೈತರು ಬೆಳೆ ಬೆಳೆಯುವುದರಿಂದಲೇ ಮನುಜ ಕುಲ ಶಾಂತಿಯಿಂದ ಜೀವನ ನಡೆಸಲು ಸಾಧ್ಯ ಎಂದು ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಹೇಳಿದರು.

ಅವರು ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನ್ನ ನೀಡುವ ರೈತರನ್ನು ಪ್ರತಿಯೊಬ್ಬರು ಗೌರವಿಸುವುದು ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎ. ಪ್ರಕಾಶ್, ಅರಳಿಹಳ್ಳಿ ಹಾಗೂ ಜಿ. ಗೋಪಾಲ್ ತಳ್ಳಿಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಪ್ರಕಾಶ್‌ ಅವರು, ಕೃಷಿಯ ಐತಿಹಾಸಿಕ ಹಿನ್ನೆಲೆ ಕೃಷಿ ಚಟುವಟಿಕೆಯ ಅದ್ಭುತಾವಕಾಶಗಳನ್ನು ಹೊಂದಿದೆ. ಕೃಷಿ ಕೇವಲ ಮನುಜ ಕುಲಕ್ಕೆ ಮಾತ್ರವಲ್ಲ ಸಕಲ ಜೀವರಾಶಿಗೆ ಅಗತ್ಯವಿದೆ ಎಂದರು.

ಗೋಪಾಲ್‌ ಅವರು ಕೃಷಿ ಚಟುವಟಿಕೆಯ ನೈಜ ಚಿತ್ರಣ ತೆರೆದಿರುವ ಮೂಲಕ ರೈತರು ಎದುರಿಸುವ ಸಂಕಷ್ಟಗಳು, ಸವಾಲುಗಳನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಬಿ. ಎಲ್.ರಂಗಸ್ವಾಮಿ ವಹಿಸಿದ್ದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ಕೆ ಮೋಹನ್, ನಿರ್ದೇಶಕರಾದ ಚೆನ್ನಯ್ಯ ಮತ್ತು ಪುಟ್ಟಲಿಂಗ ಮೂರ್ತಿ, ರಮೇಶ್, ಜನಾರ್ದನ, ಶ್ರೀನಿವಾಸ ಬಾಗೋಡಿ, ರಮೇಶ್, ಆಡಳಿತ ಅಧಿಕಾರಿ ಡಾ.ಎಸ್.ಪಿ ರಾಕೇಶ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಹಾಗೂ ಮುಖ್ಯೋಪಾಧ್ಯಾಯರಾದ ಹೇಮಾವತಿ, ರೇಣುಕಪ್ಪ, ಚೈತ್ರ, ಕಿರಣ್ ಕುಮಾರ್ ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನೇತ್ರಾವತಿ ಸ್ವಾಗತಿಸಿ, ರೇವತಿ ಅತಿಥಿಗಳನ್ನು ಪರಿಚಯಿಸಿದರು. ರೇಣುಕಪ್ಪ ನಿರೂಪಿಸಿದರು, ಅಲಿಮಿಯ ವಂದಿಸಿದರು.

------

ಫೋಟೊ: ಭದ್ರಾವತಿ ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಎ. ಪ್ರಕಾಶ್, ಅರಳಿಹಳ್ಳಿ ಹಾಗೂ ಜಿ. ಗೋಪಾಲ್ ತಳ್ಳಿಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಿ೨೩-ಬಿಡಿವಿಟಿ೧