ಸಾರಾಂಶ
ಮಣಿಪಾಲ: ಪೊಲೀಸ್ ಇಲಾಖೆಯಲ್ಲಿರುವ ಪ್ರತಿಯೊಬ್ಬರೂ ವೃತ್ತಿ ಸೇವೆಯಲ್ಲಿ ಶ್ರೇಷ್ಠತೆ, ಉತ್ಕೃಷ್ಠತೆಗಾಗಿ ಕೌಶಲ್ಯ ಬಲವರ್ಧನೆ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಡಾ. ಟಿ.ಎಂ. ಎ. ಪೈ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಮಣಿಪಾಲ ಕೆಎಂಸಿ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ ಸೆಂಟರ್ ಸಹಯೋಗದಲ್ಲಿ ಮಂಗಳೂರು ವಲಯ ಮಟ್ಟದ 7ನೇ ಪೊಲೀಸ್ ಕರ್ತವ್ಯ ಕೂಟ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗೂ ವಹಿಸಿದ ಕೆಲಸ ಮಾಡಿಯೇ ತೀರುತ್ತೇನೆ, ನಿಜವಾದ ಅಪರಾಧಿ ಹಿಡಿಯುತ್ತೇನೆ ಎನ್ನುವ, ಗೆಲ್ಲುವ ಛಲ ಅಂತಿಮ ಕ್ಷಣದಲ್ಲೂ ಇರಬೇಕು. ಇದರಿಂದ ಮಾತ್ರ ಉತ್ತಮ ಪೊಲೀಸ್ ವ್ಯವಸ್ಥೆ ಸಾಧ್ಯವಾಗುತ್ತದೆ ಎಂದು ಹೇಳಿದರು. ಮಣಿಪಾಲ ಕೆಎಂಸಿ ಡೀನ್ ಡಾ. ಅನಿಲ ಕೆ. ಭಟ್ ಮಾತನಾಡಿ, ಅನುಗುಣವಾಗಿ ಸಾಕ್ಷ್ಯ ಸಂಗ್ರಹ, ನಿರ್ವಹಣೆಗೆ ಅಧುನಿತ ತಂತ್ರಜ್ಞಾನ ಬಳಕೆ ಮುಖ್ಯ. ಸ್ಪರ್ಧೆಗಿಂತಲೂ ನಿರಂತರ, ನಿಖರ ಕಲಿಕೆ ಅತ್ಯಗತ್ಯ. ಕೌಶಲ್ಯ, ತರಬೇತಿ, ಆಸಕ್ತಿ ವ್ಯಕ್ತಿಯನ್ನು ರೂಪಿಸುತ್ತದೆ ಎಂದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ್ , ಮಂಗಳೂರು ಆರ್. ಎಫ್.ಎಸ್. ಎಲ್. ಉಪನಿರ್ದೇಶಕಿ ಸುಜಾತಾ ಕೆ.ಎಂ. ಉಪಸ್ಥಿತರಿದ್ದರು. ಉದಯ ಕುಮಾರ್ ಪ್ರಾರ್ಥಿಸಿದರು. ಉಡುಪಿ ಉಪವಿಭಾಗದ ಉಪ ಅಧೀಕ್ಷಕ ಡಿ. ಟಿ. ಪ್ರಭು ಸ್ವಾಗತಿಸಿದರು. ಸೋಮಶೇಖರ್ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))