ಚನ್ನಪಟ್ಟಣ: ನಿವೃತ್ತರಾದ ನೀಲಸಂದ್ರ ಗ್ರಾಪಂ ಪಿಡಿಒ ಆರ್.ಎಂ. ಕಲಾವತಿ ಅವರಿಗೆ ಗ್ರಾಮ ಪಂಚಾಯತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ದೊಡ್ಡನಹಳ್ಳಿ ಡಿ.ಎಲ್. ಜಗದೀಶ್ ಮಾತನಾಡಿ, ಕಲಾವತಿ ಅವರು ನೀಲಸಂದ್ರ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಪಂಚಾಯತಿ ಗಮನಾರ್ಹ ಸಾಧನೆಗಳನ್ನು ದಾಖಲಿಸಿದೆ. ಅವರ ಆಡಳಿತಾತ್ಮಕ ದಕ್ಷತೆ, ಶ್ರಮ ಮತ್ತು ಬದ್ಧತೆಯ ಫಲವಾಗಿ ಪಂಚಾಯತಿಗೆ ಪ್ರತಿಷ್ಠಿತ ಗಾಂಧಿಗ್ರಾಮ ಪುರಸ್ಕಾರ ಲಭಿಸಿದ್ದು, ಇಲ್ಲಿನ ಡಿಜಿಟಲ್ ಗ್ರಂಥಾಲಯ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಗ್ರಾಮೀಣಾಭಿವೃದ್ಧಿ, ಪಾರದರ್ಶಕ ಆಡಳಿತ ಹಾಗೂ ಜನಸ್ನೇಹಿ ಕಾರ್ಯಶೈಲಿಯ ಮೂಲಕ ಕಲಾವತಿ ಅವರು ಪಂಚಾಯಿತಿಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದ್ದು, ಅವರ ಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.ಮಾಜಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ಅಧಿಕಾರಿಯಾಗಿ ಮಾತ್ರವಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯ ಗುಣಗಳನ್ನು ಹೊಂದಿದ್ದ ಕಲಾವತಿ ಅವರ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಆರ್.ಎಂ. ಕಲಾವತಿ, ತಮ್ಮ ಸೇವಾ ಪಯಣವನ್ನು ಸ್ಮರಿಸಿಕೊಂಡರು. ಸರ್ಕಾರಿ ಸೇವೆಯಿಂದ ನಿವೃತ್ತಿಯಾಗುತ್ತಿರುವುದು ಭಾವನಾತ್ಮಕ ಕ್ಷಣವಾಗಿದೆ. ಸೇವಾ ಅವಧಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ನೀಡಿದ ಸಹಕಾರವೇ ತಮ್ಮ ಕಾರ್ಯ ಸಾಧನೆಗೆ ಕಾರಣವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.ನೀಲಸಂದ್ರ ಗ್ರಾಪಂ ಮಾಜಿ ಅಧ್ಯಕ್ಷರಾದ ಲಿಂಗಮ್ಮ, ಬಿಳಿಯಪ್ಪ, ಸಿದ್ದರಾಮಯ್ಯ, ಉಮೇಶ್, ದೊಡ್ಡನಹಳ್ಳಿ ಡಿ.ಎಲ್. ಜಗದೀಶ್, ಮಾಜಿ ಉಪಾಧ್ಯಕ್ಷರಾದ ಅಣ್ಣಯ್ಯಪ್ಪ, ಗೀತಾ ಹಾಗೂ ರಶ್ಮಿ, ಮಾಜಿ ಸದಸ್ಯರಾದ ಉದಯ್ ಕುಮಾರ್, ರಮೇಶ್, ಭಾಗ್ಯಮ್ಮ, ಎಸ್.ಕೆ. ಪಾಪಣ್ಣ, ಚಂದ್ರನಾಥ್, ಸ್ಮಿತಾ ಗೋವಿಂದರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪೊಟೋ೧೧ಸಿಪಿಟಿ೧:ಚನ್ನಪಟ್ಟಣ ತಾಲೂಕಿನ ನೀಲಸಂದ್ರ ಗ್ರಾಪಂ ಪಿಡಿಒ ಕಲಾವತಿಗೆ ನಿವೃತ್ತಿ ಬೀಳ್ಕೊಡುಗೆ ನೀಡಲಾಯಿತು.