ಕೆಎಡಿಬಿಐ ವಿರುದ್ಧ ಕಾನೂನು ಹೋರಾಟಕ್ಕೆ ರೈತರ ನಿರ್ಧಾರ

| Published : Jan 01 2025, 12:00 AM IST

ಕೆಎಡಿಬಿಐ ವಿರುದ್ಧ ಕಾನೂನು ಹೋರಾಟಕ್ಕೆ ರೈತರ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕೊಡಿಗೇಹಳ್ಳಿ, ಕೆಂಚಿನಪುರ, ಬಳ್ಳಗೆರೆ. ಬಿದಲೂರು, ಕೋಡಿಪಾಳ್ಯ ಹಾಗೂ ಹನುಮಂತಪುರ ಗ್ರಾಮಗಳ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗಿರುವ ಕೆಎಡಿಬಿಐ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿರುವುದಾಗಿ ರೈತರು ತಿಳಿಸಿದ್ದಾರೆ.

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕೊಡಿಗೇಹಳ್ಳಿ, ಕೆಂಚಿನಪುರ, ಬಳ್ಳಗೆರೆ. ಬಿದಲೂರು, ಕೋಡಿಪಾಳ್ಯ ಹಾಗೂ ಹನುಮಂತಪುರ ಗ್ರಾಮಗಳ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗಿರುವ ಕೆಎಡಿಬಿಐ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿರುವುದಾಗಿ ರೈತರು ತಿಳಿಸಿದ್ದಾರೆ.

ರೈತರ ಸಭೆಯಲ್ಲಿ ತ್ಯಾಮಗೊಂಡ್ಲು ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 2100 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆಗಳ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರ ಹಾಗೂ ಕೆಐಎಡಿಬಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಕಾನೂನಾತ್ಮಕವಾಗಿ ನ್ಯಾಯಾಲಯದ ಮೋರೆ ಹೋಗಲು ನಿರ್ಧರಿಸಿರುವುದಾಗಿ ರೈತ ಮುಖಂಡ ವಿಜಯ್ ಕುಮಾರ್ ಹೇಳಿದರು.

ಗ್ರಾಮೀಣ ಭಾಗದಲ್ಲಿ ಪೀತಾರ್ಜಿತವಾಗಿ ಕೃಷಿಯಲ್ಲಿ ತೊಡಗಿರುವ ರೈತರಿಗೆ ಅಧಿಕಾರಿಗಳ ನಡೆ ಹಾಗೂ ಕಾನೂನಿನ ಅರಿವು ಕಡಿಮೆ. ಇದನ್ನೇ ಬಂಡವಾಳ ಮಾಡಿಕೊಂಡು ದುರ್ಬಳಸಿಕೊಳ್ಳುತ್ತಿರುವ ಅಧಿಕಾರಿಗಳು, ಸುಲಭವಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆದ್ದರಿಂದ ರೈತರ ಸಭೆ ನಡೆಸಿ ಕಾನೂನಾತ್ಮಕ ಅರಿವು ಮೂಡಿಸಲು, ಕೃಷಿ ಭೂಮಿಯಲ್ಲಿ ಯಾವುದೇ ಕಾರಣಕ್ಕೂ ಕೈಗಾರಿಕೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸಬೇಕಾಗುತ್ತದೆ ಎಂದು ಹೇಳಿದರು.

ರೈತ ಮುಖಂಡ ಕೊಡಿಗೇನಹಳ್ಳಿ ಮಂಜುನಾಥ್ ಮಾತನಾಡಿ, ಕಳೆದ ಎರಡು ತಿಂಗಳಿಂದ ನೆಲಮಂಗಲ ತಾಲೂಕಿನ ರೈತರು ತಮ್ಮ ಕೃಷಿ ಭೂಮಿಯ ಉಳಿವಿಗೆ ಒಂದಲ್ಲ ಒಂದು ರೀತಿ ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹೋರಾಟಗಳಿಗೆ ಜನಪ್ರತಿನಿಧಿಗಳಾಗಲಿ, ಮಠಾಧೀಶರಾಗಲಿ ಬೆಂಬಲ ನೀಡುತ್ತಿಲ್ಲ. ಮಠಗಳ ಬೆಳವಣಿಗೆ ಹಾಗೂ ಜನಪ್ರತಿನಿಧಿಗಳ ಗೆಲುವಿಗೆ ಕಾರಣರಾದ ರೈತರನ್ನು ಮರೆತು ಹೋಗಿರುವುದು ದುರಂತ ಎಂದು ಹೇಳಿದರು.

ಸಭೆಯಲ್ಲಿ ಕೃಷಿ ಸಮಾಜದ ಅಧ್ಯಕ್ಷ ಚನ್ನೇಗೌಡ, ರೈತ ಮುಖಂಡರಾದ ಭೈರೇಗೌಡ, ನಾರಾಯಣಗೌಡ, ಚಂದ್ರ ಮೋಹನ್, ಸುರೇಶ್, ಮಂಜುನಾಥ್, ಚಂದ್ರು ಮತ್ತಿತರರು ಭಾಗವಹಿಸಿದ್ದರು.

ಪೋಟೋ 5 : ರೈತರ ಸಭೆಯಲ್ಲಿ ತ್ಯಾಮಗೊಂಡ್ಲು ಹೋಬಳಿಯ ಕೊಡಿಗೇಹಳ್ಳಿ, ಕೆಂಚಿನಪುರ, ಬಳ್ಳಗೆರೆ. ಬಿದಲೂರು, ಕೋಡಿಪಾಳ್ಯ ಹಾಗೂ ಹನುಮಂತಪುರ ವ್ಯಾಪ್ತಿ ರೈತರು ಕೆಎಡಿಬಿಐ ವಿರುದ್ಧ ಕಾನೂನು ಹೋರಾಟಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.