ಪೋಟೋ 2 : ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರಸರಣಕ್ಕೆ ಕೃಷಿ ಭೂಮಿಯಲ್ಲಿ ಗೋಪುರ ನಿರ್ಮಿಸಲು ರೈತರು ವಿರೋಧಿಸಿದ ಸ್ಥಳಕ್ಕೆ ಎಸಿ ಶ್ರೀನಿವಾಸ್, ತಹಶೀಲ್ದಾರ್ ಅರುಂಧತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha
Image Credit: KP
ದಾಬಸ್‌ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಪಂ ವ್ಯಾಪ್ತಿಯಲ್ಲಿನ ಕೃಷಿ ಭೂಮಿಯಲ್ಲಿ ವುದ್ಯುತ್ ಪ್ರಸರಣ ಗೋಪುರಗಳನ್ನು ನಿರ್ಮಿಸಲು ಕೆಪಿಟಿಸಿಎಸ್ ಮುಂದಾಗಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಎಂ.ಶ್ರೀನಿವಾಸ್ ಅವರಿಗೆ ಮನವಿ ಮಾಡಿದರು.
ದಾಬಸ್‌ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಪಂ ವ್ಯಾಪ್ತಿಯಲ್ಲಿನ ಕೃಷಿ ಭೂಮಿಯಲ್ಲಿ ವುದ್ಯುತ್ ಪ್ರಸರಣ ಗೋಪುರಗಳನ್ನು ನಿರ್ಮಿಸಲು ಕೆಪಿಟಿಸಿಎಸ್ ಮುಂದಾಗಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಎಂ.ಶ್ರೀನಿವಾಸ್ ಅವರಿಗೆ ಮನವಿ ಮಾಡಿದರು. ದೊಡ್ಡಬೆಳವಂಗಲದಲ್ಲಿ ನಿರ್ಮಿಸುತ್ತಿರುವ ವಿದ್ಯುತ್ ಕೇಂದ್ರಕ್ಕೆ ದಾಬಸ್‌ಪೇಟೆಯ 220/66/11 ಕೆವಿ ವಿದ್ಯುತ್ ಕೇಂದ್ರದಿಂದ 66/11 ಕೆವಿ ದೊಡ್ಡಬೆಳವಂಗಲ ವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ಪ್ರಸರಣಕ್ಕೆ ದಾಬಸ್‌ಪೇಟೆ - ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿನ ಕೃಷಿ ಜಮೀನುಗಳಲ್ಲಿ ಗೋಪುರಗಳನ್ನು ನಿರ್ಮಿಸಲು ಮುಂದಾಗಿದೆ. ವಿದ್ಯುತ್ ಸಂಚರಣಾ ಗೋಪುರದಿಂದ ಎರಡೂ ಬದಿಯಲ್ಲೂ 9 ಮೀಟರ್ ಅಂತರದಲ್ಲಿ ಬರುವ ಬೆಳೆ ಹಾಗೂ ಮರಗಿಡಗಳನ್ನು ನಾಶ ಮಾಡಿ ಪರಿಹಾರ ನೀಡುತ್ತೇವೆ ಎನ್ನುತ್ತಿದ್ದಾರೆ. ಮಣ್ಣೆ ಗ್ರಾಮದಲ್ಲಿ ಈಗಾಗಲೇ ಸ್ಯಾಟಲೈಟ್ ರಸ್ತೆ ನಿರ್ಮಿಸಲು ಭೂಸ್ವಾಧೀನ ಮಾಡಿಕೊಂಡಿದ್ದಾರೆ. ಮತ್ತೆ ವಿದ್ಯುತ್ ಗೋಪುರಗಳ ನಿರ್ಮಾಣಕ್ಕೆ ನಮ್ಮ ಭೂಮಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ದೊಡ್ಡಬೆಳವಂಗಲದಿಂದ ರಾಷ್ಟ್ರೀಯ ಹೆದ್ದಾರಿ 207ರ ಪಕ್ಕದಲ್ಲಿಯೇ ಗೋಪುರಗಳನ್ನು ನಿರ್ಮಿಸಿದ್ದಾರೆ. ರೈಲು ಹಳಿಯ ನೆಪ ಹೇಳಿಕೊಂಡು ಕೃಷಿ ಭೂಮಿಗೆ ಕೈಹಾಕಿದ್ದಾರೆ. ಓಬಳಾಪುರದಿಂದ ಮಾಕನಕುಪ್ಪೆವರೆಗೂ ಹೆದ್ದಾರಿಯ ಪಕ್ಕದಲ್ಲಿ,ಸರ್ಕಾರಿ ಭೂಮಿ ಹೆಚ್ಚಾಗಿರುವ ಪ್ರದೇಶದಲ್ಲಿ ಅಥವಾ ಕೆರೆ ಅಂಗಳದಲ್ಲಿ ಗೋಪುರಗಳನ್ನು ಹಾಕಿಕೊಳ್ಳಲಿ ಎಂದು ಎಸಿ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು. ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರಸರಣಕ್ಕೆ ಕೃಷಿ ಭೂಮಿಯಲ್ಲಿ ಗೋಪುರ ನಿರ್ಮಿಸಲು ರೈತರು ವಿರೋಧಿಸಿದ ಸ್ಥಳಕ್ಕೆ ಎಸಿ ಶ್ರೀನಿವಾಸ್, ತಹಶೀಲ್ದಾರ್ ಅರುಂಧತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಟ್ .............. ದೊಡ್ಡಬೆಳವಂಗಲದಲ್ಲಿ ನಿರ್ಮಿಸುತ್ತಿರುವ 66/11 ಕೆವಿ ವಿದ್ಯುತ್ ಕೇಂದ್ರಕ್ಕೆ, ವಿದ್ಯುತ್ ಪ್ರಸರಣೆ ಮಾಡಲು ಗೋಪುರ ನಿರ್ಮಿಸಲು ಮಣ್ಣೆ ಗ್ರಾಮದ ವ್ಯಾಪ್ತಿಯ ರೈತರು ತಕರಾರು ಅರ್ಜಿಗಳನ್ನು ನೀಡಿದ್ದರು. ಆದ್ದರಿಂದ ಇಂದು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದು, ಪರ್ಯಾಯ ಮಾರ್ಗದಲ್ಲಿ ಗೋಪುರಗಳ ನಿರ್ಮಿಸಲು ಅವಕಾಶವಿದ್ದಲ್ಲಿ ಅದರ ನಕ್ಷೆಯನ್ನು ರಚಿಸಲು ತಿಳಿಸಲಾಗಿದೆ, ರೈತರಿಗೆ ತೊಂದರೆಯಾಗದಂತೆ ಕಾರ‍್ಯ ನಿರ್ವಹಿಸುತ್ತೇವೆ. - ಎಂ.ಶ್ರೀನಿವಾಸ್, ಉಪವಿಭಾಗಾಧಿಕಾರಿ, ದೊಡ್ಡಬಳ್ಳಾಪುರ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.