ಆಗಮಿಸದ ಅಧಿಕಾರಿಗಳು: ಸಭೆಗೆ ಬಹಿಷ್ಕಾರ
KannadaprabhaNewsNetwork | Published : Oct 14 2023, 01:00 AM IST
ಆಗಮಿಸದ ಅಧಿಕಾರಿಗಳು: ಸಭೆಗೆ ಬಹಿಷ್ಕಾರ
ಸಾರಾಂಶ
ವಿಜಯಪುರ: ಹೋಬಳಿಯ ವೆಂಕಟಗಿರಿ ಕೋಟೆ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಮೊದಲ ಕೆಡಿಪಿ ಸಭೆಗೆ ಸರ್ಕಾರದ 29 ಇಲಾಖೆಗಳ ಪೈಕಿ ಕೇವಲ 6 ಇಲಾಖೆಗಳ ಅಧಿಕಾರಿಗಳು ಮಾತ್ರ ಪಾಲ್ಗೊಂಡಿದ್ದ ಕಾರಣ ಗ್ರಾಪಂ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಹಾಗೂ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷೆ ಎಸ್. ಆಶಾ ಆಗ್ರಹಿಸಿದರು.
ವಿಜಯಪುರ: ಹೋಬಳಿಯ ವೆಂಕಟಗಿರಿ ಕೋಟೆ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಮೊದಲ ಕೆಡಿಪಿ ಸಭೆಗೆ ಸರ್ಕಾರದ 29 ಇಲಾಖೆಗಳ ಪೈಕಿ ಕೇವಲ 6 ಇಲಾಖೆಗಳ ಅಧಿಕಾರಿಗಳು ಮಾತ್ರ ಪಾಲ್ಗೊಂಡಿದ್ದ ಕಾರಣ ಗ್ರಾಪಂ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಹಾಗೂ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷೆ ಎಸ್. ಆಶಾ ಆಗ್ರಹಿಸಿದರು. ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತು ಹಾಗೂ ದೂರದೃಷ್ಟಿಯಿಂದ ಕ್ರಿಯಾ ಯೋಜನೆಗಳ ರೂಪಿಸುವ ಕುರಿತು ವೆಂಕಟಗಿರಿ ಕೋಟೆ ಗ್ರಾಮ ಪಂಚಾಯಿತಿಯಲ್ಲಿ ಕರೆದಿದ್ದ ಕೆಡಿಪಿ ಸಭೆ ಕರೆಯಲಾಗಿತ್ತು. ಕೇವಲ 6 ಅಧಿಕಾರಿಗಳು ಮಾತ್ರ ಬಂದರು. ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು ಗೈರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಮಾತನಾಡಿ, ಒಂದೆಡೆ ಸರ್ಕಾರ ಹತ್ತು- ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅವುಗಳನ್ನು ತಲುಪಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕಿದೆ. ಒಂದೆಡೆ ಸರ್ಕಾರದ ನಡೆ-ಹಳ್ಳಿ ಕಡೆ, ಮತ್ತೊಂದೆಡೆ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ, ಎಂಬ ಘೋಷವಾಕ್ಯದೊಂದಿಗೆ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಗ್ರಾಮೀಣರು ಯಾವುದೇ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು. ಸಭೆಯಲ್ಲಿ ಉಪಾಧ್ಯಕ್ಷ ವಿಶ್ವನಾಥಾಚಾರ್, ಅಬಕಾರಿ ಇಲಾಖೆ ಉಪನಿರೀಕ್ಷಕ ತಿಮ್ಮರಾಜು, ಶಿಕ್ಷಣ ಇಲಾಖೆ ಸಿಆರ್ ಪಿಪಿ ಶಿವಕುಮಾರ್, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಜೂನಿಯರ್ ಎಂಜಿನಿಯರ್ ರಂಜಿತ್, ಆರೋಗ್ಯ ಇಲಾಖೆಯ ಕೆ. ಸಂಧ್ಯಾ, ಬೆಸ್ಕಾಂನ ಮೇಲ್ವಿಚಾರಕ ಎನ್.ಮಹೇಶ್, ಕೃಷಿ ಅಧಿಕಾರಿ ಎನ್.ಶ್ವೇತ ಮಾತ್ರ ಹಾಜರಾಗಿದ್ದರು.