ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ತಾಲೂಕಿನ ಇನಾಮ ಬಡಸ ಗ್ರಾಮದ ಬಳಿ ಹಾಡುಹಗಲೇ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಬಿಂದನ್ ಪಾಟೀಲ ಬ್ರೇಕ್‌ ಹಾಕಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಬಿಂದನ್‌ ಪಾಟೀಲ ಗಣಿಗಾರಿಕೆ ಬಗ್ಗೆ ಪರಿಶೀಲನೆ ನಡೆಸಿದರು.ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಬಿಂದನ್ ಪಾಟೀಲ ಅವರು, ಸ್ಥಳದಲ್ಲೇ ಕಾರ್ಯಾಚರಣೆ ನಡೆಸಿ ಗಣಿಗಾರಿಕೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಖಡಕ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ತಾಲೂಕಿನ ಇನಾಮ ಬಡಸ ಗ್ರಾಮದ ಬಳಿ ಹಾಡುಹಗಲೇ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಬಿಂದನ್ ಪಾಟೀಲ ಬ್ರೇಕ್‌ ಹಾಕಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಬಿಂದನ್‌ ಪಾಟೀಲ ಗಣಿಗಾರಿಕೆ ಬಗ್ಗೆ ಪರಿಶೀಲನೆ ನಡೆಸಿದರು.ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಬಿಂದನ್ ಪಾಟೀಲ ಅವರು, ಸ್ಥಳದಲ್ಲೇ ಕಾರ್ಯಾಚರಣೆ ನಡೆಸಿ ಗಣಿಗಾರಿಕೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಖಡಕ್ ಸೂಚನೆ ನೀಡಿದರು. ಪರಿಶೀಲನೆ ವೇಳೆ, ಗಣಿಗಾರಿಕೆ ನಡೆಸುತ್ತಿದ್ದವರ ಬಳಿ ಯಾವುದೇ ಪರವಾನಗಿ ಅಥವಾ ಅಗತ್ಯ ದಾಖಲೆಗಳೇ ಇರಲಿಲ್ಲ.

ಈ ಹಿನ್ನೆಲೆಯಲ್ಲಿ ಅಧಿಕಾರಿಯ ಪ್ರಶ್ನೆಗಳಿಗೆ ಉತ್ತರಿಸದೆ ಸ್ಥಳದಲ್ಲಿದ್ದವರು ಸಬೂಬು ಹೇಳುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆಗ ಆಕ್ರೋಶಗೊಂಡ ಅಧಿಕಾರಿ ಸ್ಥಳದಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಕಾನೂನು ಬಾಹಿರ ಗಣಿಗಾರಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಘಟನೆಯ ವೇಳೆ ಸಂಬಂಧಪಟ್ಟ ಮೇಲಾಧಿಕಾರಿಗಳು ಅಥವಾ ಜವಾಬ್ದಾರಿ ವ್ಯಕ್ತಿಗಳನ್ನು ತಕ್ಷಣ ಸ್ಥಳಕ್ಕೆ ಕರೆಸುವಂತೆ ಬಿಂದನ್ ಪಾಟೀಲರು ಸೂಚಿಸಿದರೂ, ಅಲ್ಲಿದ್ದವರು ಆ ಸೂಚನೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯಿಸಿದರು.

ಮಹಿಳಾ ಅಧಿಕಾರಿಯ ಈ ನಡೆ ಸ್ಥಳದಲ್ಲಿದ್ದವರನ್ನು ಕ್ಷಣಕಾಲ ಗೊಂದಲಕ್ಕೆ ದೂಡಿತು. ಬಿಂದನ್‌ ಅವರ ಕಾರ್ಯದಕ್ಷತೆಯ ವಿಡಿಯೋಗಳು ಹಾಗೂ ಕಾರ್ಯಾಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

--------

ಕೋಟ್

ಬೆಳಗಾವಿ ತಾಲೂಕಿನ ಇನಾಮ ಬಡಸ ಗ್ರಾಮದ ಬಳಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆ ಸ್ಥಳಕ್ಕೆ 15 ದಿನಗಳ ಹಿಂದೆಯೇ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಅದನ್ನು ತಡೆದಿದ್ದೇನೆ. ಸ್ಥಳದಲ್ಲಿದ್ದವರ ಬಳಿ ಯಾವುದೇ ಮಾನ್ಯ ಪರವಾನಗಿ ಅಥವಾ ದಾಖಲೆಗಳು ಲಭ್ಯವಾಗಿರಲಿಲ್ಲ. ಈಗ ಆ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

-ಬಿಂದನ್ ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ತಾಲೂಕಿನ ಇನಾಮ ಬಡಸ ಗ್ರಾಮದ ಬಳಿ ಹಾಡುಹಗಲೇ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಬಿಂದನ್ ಪಾಟೀಲ ಬ್ರೇಕ್‌ ಹಾಕಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಬಿಂದನ್‌ ಪಾಟೀಲ ಗಣಿಗಾರಿಕೆ ಬಗ್ಗೆ ಪರಿಶೀಲನೆ ನಡೆಸಿದರು.ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಬಿಂದನ್ ಪಾಟೀಲ ಅವರು, ಸ್ಥಳದಲ್ಲೇ ಕಾರ್ಯಾಚರಣೆ ನಡೆಸಿ ಗಣಿಗಾರಿಕೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಖಡಕ್ ಸೂಚನೆ ನೀಡಿದರು.