ಸಾರಾಂಶ
ನರಗುಂದ: ತಾಲೂಕಿನ ರೈತರು ಬೆಳೆಹಾನಿ ಮಾಡಿಕೊಂಡು ಎರಡು ತಿಂಗಳ ಗತಿಸಿದರೂ ತಾಲೂಕಿನ ರೈತರಿಗೆ ಪರಿಹಾರ ನೀಡದೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ರೈತಸೇನೆ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಆರೋಪಿಸಿದರು.
3667ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, 2025- 26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ವಾಣಿಜ್ಯ ಬೆಳೆಗಳು ಅತಿವೃಷ್ಟಿಯಿಂದ ಹಾನಿಯಾಗಿವೆ. ಆದರೂ ಸರ್ಕಾರ ತಾಲೂಕಿನ ರೈತರಿಗೆ ಪರಿಹಾರ ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.ನ. 2ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಜಿಲ್ಲೆಯ ರೈತರಿಗೆ ₹91 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡಗೆ ಚಾಲನೆ ನೀಡಲಾಗಿದೆ ಎಂದು ಹೇಳಿ ಒಂದು ವಾರ ಗತಿಸಿದರೂ ಪರಿಹಾರ ಬಂದಿಲ್ಲ ಎಂದರು.
ಈ ಸಂದರ್ಭದಲ್ಲಿ ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಸಿ.ಎಸ್. ಪಾಟೀಲ, ಸುಭಾಸ ಗಿರಿಯಣ್ಣವರ, ಹನುಮಂತ ಸರನಾಯ್ಕರ, ಪರಮೇಶ ಅಣ್ಣಿಗೇರಿ, ಯಲ್ಲಪ್ಪ ಚಲವಣ್ಣವರ, ಫಕೀರಪ್ಪ ಅಣ್ಣಿಗೇರಿ, ಶಿವಪ್ಪ ಸಾತಣ್ಣವರ, ಸೋಮಲಿಂಗಪ್ಪ ಆಯಿಟ್ಟಿ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವಾಣ, ವಿಜಯಕುಮಾರ ಹೂಗಾರ ಇದ್ದರು.ಮಹರ್ಷಿ ವಾಲ್ಮೀಕಿ ಮಹಾನ್ ತತ್ವಜ್ಞಾನಿ
ಮುಂಡರಗಿ: ದೇಶಕ್ಕೆ ಸಂಸ್ಕೃತಿಯ ಸದ್ಗುಣಗಳನ್ನು ನೀಡಿದ ವಾಲ್ಮೀಕಿಯವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.ಸೋಮವಾರ ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಜರುಗಿದ ಮಹರ್ಷಿ ವಾಲ್ಮೀಕಿ ಭಾವಚಿತ್ರದೊಂದಿಗೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ರಾಮಾಯಣವೆಂಬ ಮಹಾಕಾವ್ಯ ರಚಿಸುವ ಮೂಲಕ ಬಹುದೊಡ್ಡ ಜ್ಞಾನಿಯಾಗಿರುವ ಮಹರ್ಷಿ ವಾಲ್ಮೀಕಿಯವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.ವಿವಿಧ ವಾದ್ಯಮೇಳದೊಂದಿಗೆ ಅದ್ಧೂರಿಯಾಗಿ ಪಟ್ಟಣದ ಆಂಜನೇಯ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಜಾಗೃತ ವೃತ್ತ, ಮುಖ್ಯ ಬಜಾರ್, ಬಸ್ ನಿಲ್ದಾಣದ ಮೂಲಕ ಬೃಂದಾವನ ವೃತ್ತದ ಮೂಲಕ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನ ತಲುಪಿತು.ಈ ಸಂದರ್ಭದಲ್ಲಿ ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಡಿ.ಡಿ. ಮೋರನಾಳ, ಹೇಮಗಿರೀಶ ಹಾವಿನಾಳ, ಎಸ್.ಡಿ. ಮಕಾಂದಾರ, ಡಾ. ಬಸವರಾಜ ಮೇಟಿ, ಪ್ರಹ್ಲಾದ್ ಹೊಸಮನಿ, ಪ್ರಕಾಶ ಹಲವಾಗಲಿ, ರಾಜಾಭಕ್ಷಿ ಬೆಟಗೇರಿ, ಮಂಜುನಾಥ ಮುಂಡವಾಡ, ರಾಮಣ್ಣ ಕೋಳಿ, ಮೈಲಾರಪ್ಪ ಕಲಕೇರಿ, ಕವಿತಾ ನಾಯಕ್, ದ್ಯಾಮಣ್ಣ ವಾಲಿಕಾರ, ಮಲ್ಲಪ್ಪ ನಾಯಕರ್, ಭೀಮಣ್ಣ ಪೂಜಾರ, ಪವಿತ್ರಾ ಕಲ್ಲಕುಟಿಗರ, ಲಕ್ಷ್ಮೀ ಮಾಗಡಿ, ಸುರೇಶ ಮಾಗಡಿ, ಶಿವನಗೌಡ ಗೌಡ್ರ, ಬಿ.ಎಫ್. ಈಟಿ, ಉದಯಕುಮಾರ ಯಲಿವಾಳ, ಎಚ್.ಕೆ. ಹಲವಾಗಲಿ, ಚಂದ್ರು ಪೂಜಾರ, ಯಲ್ಲಪ್ಪ ಗಣಾಚಾರಿ, ಸುರೇಶ ಬಣಕಾರ, ಶಿವು ವಾಲಿಕಾರ ಸೇರಿ ಅನೇಕರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))