ಸಾರಾಂಶ
ರಾಣಿಬೆನ್ನೂರು: ಮೆಕ್ಕೆಜೋಳಕ್ಕೆ ₹ 3000 ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ತಾಲೂಕಿನ ಹುಲಿಹಳ್ಳಿ ಮೆಗಾ ಮಾರುಕಟ್ಟೆ ಬಳಿ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ಸಾಲ ಮಾಡಿ ಬಿತ್ತನೆ, ಕಟಾವು, ಸಾಗುವಳಿಗೆ ಮಾಡಿದ ಖರ್ಚು ಮೈಮೇಲೆ ಆಗುತ್ತದೆ. ಜಿಲ್ಲಾದ್ಯಂತ ಹೆಚ್ಚಿನ ರೈತರು ಮೆಕ್ಕೆಜೋಳ ಬೆಳೆದಿದ್ದು, ಬೇರೆ ಬೇರೆ ಜಿಲ್ಲೆಗಳಿಂದ ಮೆಕ್ಕೆಜೋಳ ರಾಣಿಬೆನ್ನೂರು ಮಾರುಕಟ್ಟೆಗೆ ಬಂದಿದೆ. ಪರಿಸ್ಥಿತಿ ಅರಿತ ದಲ್ಲಾಳಿಗಳು ಮತ್ತು ಖರೀದಿದಾರರು ರೈತರಿಗೆ ತಕ್ಕಂತೆ ಖರೀದಿ ಮಾಡುತ್ತಿಲ್ಲ. ಪ್ರಸ್ತುತ ಮೆಕ್ಕೆಜೋಳವನ್ನು ₹1700ರಿಂದ 1950ರ ವರೆಗೆ ಈ ಟೆಂಡರ್ ಮುಖಾಂತರ ಖರೀದಿ ಮಾಡಲಾಗುತ್ತಿದೆ. ರೈತರಿಗೆ ಕನಿಷ್ಠ ₹ 3000 ಬೆಂಬಲ ಬೆಲೆ ಘೋಷಣೆ ಮಾಡಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕೈ ಜೋಡಿಸಿ ಮೆಕ್ಕೆಜೋಳವನ್ನು ಪಿಡಿಎಸ್‌ಗೆ ಸೇರಿಸಿ ರೈತರಿಗೆ ₹ 3000 ಕನಿಷ್ಠ ದರ ದೊರಕುವಂತೆ ಮಾಡಬೇಕು. ಇಲ್ಲವಾದರೆ ನ.14ರಂದು ಮೆಕ್ಕೆ ಜೋಳ ಖರೀದಿ ಕೇಂದ್ರ ಪ್ರಾರಂಭಿಸುವವರೆಗೂ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಮೆಗಾ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಮಧ್ಯಾಹ್ನ 3ರಿಂದ ಸಂಜೆ 5.30ರ ವರೆಗೆ ಈ ಟೆಂಡರ್ ಮಾಡುತ್ತಿದ್ದು ಇದರಿಂದ ಮೆಕ್ಕೆಜೋಳ ತಂದ ರೈತರು ಈ ಟೆಂಡರ್ ಪ್ರಕ್ರಿಯೇ ಮುಗಿದರೂ ರಾತ್ರಿ 9 ರಿಂದ 11ರ ವರೆಗೂ ತೂಕದ ಪ್ರಕ್ರಿಯ ನಡೆಯುತ್ತದೆ. ಇದರಿಂದ ರೈತರಿಗೆ ಸ್ವಗ್ರಾಮಕ್ಕೆ ತೆರಳಲು ತೊಂದರೆಯಾಗುತ್ತಿದೆ. ಅದಕ್ಕಾಗಿ ಬೆಳಗ್ಗೆ 11ಕ್ಕೆ ಟೆಂಡರ್ ಪ್ರಕ್ರಿಯೆ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಮಹೇಶ ಕೊಟ್ಟೂರ, ಹನುಮಂತಪ್ಪ ದಿವಿಗಿಹಳ್ಳಿ, ರಾಜಶೇಖರ ದೂದಿಹಳ್ಳಿ, ರಾಜೇಶ ಅಂಗಡಿ, ಮಂಜುನಾಥ ಸಂಬೋಜಿ, ಬಸವರಾಜ ಮೆಗಳಗೆರಿ, ಲಲಿತಾ ಲಮಾಣಿ, ಶೈಲಾ ಹರನಗಿರಿ, ನೀಲಮ್ಮ ಮೆಗಳಗೆರಿ, ಕೊಟ್ರಮ್ಮ ಕಾಯಕದ, ಅಮಿದಾಬಾನು ಶಿಡೇನೂರ, ನಾಗಮ್ಮ ತಳವಾರ, ಮಹದೇವಪ್ಪ ಬಣಕಾರ, ಚಂದ್ರಶೇಖರ ಪಾಟೀಲ, ನಿಂಗಪ್ಪ ಸತ್ಯಪ್ಪನವರ, ಮಹಾಂತೇಶ ಬೂದನೂರ, ಪರಸಪ್ಪ ಚಿತ್ತಣ್ಣನವರ ಮತ್ತಿತರರಿದ್ದರು.
;Resize=(128,128))
;Resize=(128,128))
;Resize=(128,128))