ಕನ್ನಡಪ್ರಭ ವಾರ್ತೆ ಸಿದ್ದಾಪುರ
ಸಿದ್ದಾಪುರದ ಮುತ್ತಪ್ಪ ಭಗವತಿ ದೇವಾಲಯದ 51ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯ ಹಾಗೂ ವಿವಿಧ ತೆರೆಗಳೊಂದಿಗೆ ಫೆ.18ರಿಂದ 22ರವರೆಗೆ ನಡೆಯಲಿದೆ.18ರಂದು ಬೆಳಗ್ಗೆ 6ಕ್ಕೆ ಪಂಚಗವ್ಯ, ಪುಣ್ಯಾಹ, 6.30ಕ್ಕೆ ಗಣಪತಿ ಹೋಮ, 10ಕ್ಕೆ ಧ್ವಜಾರೋಹಣ, 10.30ರಿಂದ 11.30ರವರೆಗೆ ನವಕಲಶ ಅಭಿಷೇಕ, 19ರಂದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, 8.30ರಿಂದ ಚಂಡಿಕಾ ಹೋಮ, ಮಧ್ಯಾಹ್ನ 2.30ಕ್ಕೆ ಮಹಾಪೂಜೆ ತೀರ್ಥ ಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. 6.30ಕ್ಕೆ ದೇವರ ಬಲಿ ನಡೆಯಲಿದೆ. 20ರಂದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, 8ರಿಂದ 12ರವರೆಗೆ ದುರ್ಗಾ ಪೂಜೆ, ಆಶ್ಲೇಷ ಬಲಿ, ನಾಗಹೋಮ, ಮಹಾಪೂಜೆ, ತೀರ್ಥ ಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ವಾದ್ಯ ಮೇಳದೊಂದಿಗೆ ಸಿದ್ಧಾಪುರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಿಯು ಸ್ನಾನಕ್ಕೆ ತೆರಳಿ ನಂತರ ರಾತ್ರಿ 8 ಗಂಟೆಗೆ ದೇವಾಲಯದಲ್ಲಿ ದೇವಿಯ ನರ್ತನ ನಡೆಯಲಿದೆ.21ರಂದು ಮುತ್ತಪ್ಪ ತೆರೆ ಮಹೋತ್ಸವ ನಡೆಯಲಿದ್ದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, ಸಂಜೆ 5 ಗಂಟೆಗೆ ಮುತ್ತಪ್ಪನ ಮಲೆ ಇಳಿಸುವುದು, ರಾತ್ರಿ 7ಕ್ಕೆ ಮುತ್ತಪ್ಪನ ವೆಳ್ಳಾಟಂ, 7.30ಕ್ಕೆ ಶಾಸ್ತ್ರಪ್ಪನ ವೆಳ್ಳಾಟಂ, 8ಕ್ಕೆ ಗುಳಿಗನ ವೆಳ್ಳಾಟಂ, 8.30ಕ್ಕೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 7ಕ್ಕೆ ವಸೂರಿ ಮಾಲಾ ದೇವಿಯು ಕಾವೇರಿ ನದಿಗೆ ಸ್ನಾನಕ್ಕೆ ತೆರಳಿ ಸ್ನಾನದ ಬಳಿಕ ಸಿದ್ದಾಪುರದ ಬೀದಿಗಳಲ್ಲಿ ವಸೂರಿ ಮಾಲಾ ದೇವಿಯು ನರ್ತಿಸುತ್ತಾ ದೇವಾಲಯಕ್ಕೆ ಬರಲಿದೆ ನಂತರ ವಿಷ್ಣುಮೂರ್ತಿ ವಳ್ಳಾಟಂ ನಡೆಯಲಿದೆ.
22ರಂದು ಬೆಳಗ್ಗೆ 5 ಗಂಟೆಗೆ ಗುಳಿಗನ ತೆರೆ, 6.30ಕ್ಕೆ ಶಾಸ್ತ್ರಪ್ಪನ ತೆರೆ, 7.30ಕ್ಕೆ ತಿರಪ್ಪನ ಮುತ್ತಪ್ಪನ ತೆರೆ, 8ಕ್ಕೆ ಭಗವತಿಯ ತೆರೆ, ಪೂರ್ವಾಹ್ನ 11 ಗಂಟೆಗೆ ವಿಷ್ಣುಮೂರ್ತಿ ತೆರೆ ನಡೆಯಲಿದೆ.ಕೊಡಗಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಏಳು ವಸೂರಿ ಮಾಲಾ ದೇವಿಯ ತೆರೆ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ.