ಭೀಮಾ ನದಿ ತೀರದಲ್ಲಿ ಪ್ರವಾಹ ಆತಂಕ

| Published : Sep 25 2025, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಉಜ್ಜನಿ, ಸೀನಾ ಜಲಾಶಯದಿಂದ ಭೀಮಾ ನದಿಗೆ 2.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಭೀಮಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ, ಭೀಮಾ ತೀರದ ಜನರಲ್ಲಿ ಪ್ರವಾಹ ಆತಂಕ ಮನೆಮಾಡಿದೆ.

ಕನ್ನಡಪ್ರಭ ವಾರ್ತೆ ಇಂಡಿ

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಉಜ್ಜನಿ, ಸೀನಾ ಜಲಾಶಯದಿಂದ ಭೀಮಾ ನದಿಗೆ 2.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಭೀಮಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ, ಭೀಮಾ ತೀರದ ಜನರಲ್ಲಿ ಪ್ರವಾಹ ಆತಂಕ ಮನೆಮಾಡಿದೆ.

ಇಂಡಿ, ಸಿಂದಗಿ ತಾಲೂಕಿನ ಅನೇಕ ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ಭೀಮಾ ತೀರದಲ್ಲಿ ಜಿಲ್ಲಾಡಳಿತ ತೀವ್ರ ಕಟ್ಟೆಚರ ವಹಿಸಿದೆ. ಕ್ಷಣಕ್ಷಣಕ್ಕೆ ಭೀಮಾ ನದಿ ಒಳಹರಿವು ಹೆಚ್ಚುತ್ತಿದ್ದು, ನದಿ ತೀರಕ್ಕೆ ಯಾರು ತೆರಳದಂತೆ ಮೈಕ್ ಮೂಲಕ ಡಂಗೂರ ಸಾರಲಾಗಿದೆ. ನದಿ ತೀರದ ಗ್ರಾಮದಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಡಂಗೂರ ಸಾರಿದ್ದಾರೆ.

ಭೀಮಾನದಿಯ ನೀರು ಬುಯ್ಯಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣಕ್ಕೆ ನುಗ್ಗಿವೆ. ಖೇಡಗಿ ಗ್ರಾಮದ ಗುಡ್ಡದ ಬಸವರಾಜೇಂದ್ರ ಮಠಕ್ಕು ನುಗ್ಗಿದೆ. ಮಿರಗಿ ಗ್ರಾಮದ ಅಂಬಾಭವಾನಿ ದೇವಸ್ಥಾನಕ್ಕೂ ನೀರು ಬಂದಿದೆ. ಅಲ್ಲದೇ, ಭೀಮಾನದಿ ದಂಡೆಯ ಮೇಲಿನ ಗ್ರಾಮಗಳ ಸುಮಾರು 600 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳು ಸಂಪೂರ್ಣ ಜಲಾವೃತ್ತಗೊಂಡಿವೆ.

ಮಳೆಗೆ ಮನೆ ಕುಸಿತ:

ಮಳೆಯಿಂದ ತೇವಾಂಶಗೊಂಡಿದ್ದ ಖೇಡಗಿ ಗ್ರಾಮದ ಶರಣವ್ವ ವಗ್ಗಿ ಎಂಬುವವರ ಮನೆ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿನ ಪಾತ್ರೆ ಸೇರಿದಂತೆ ಮನೆ ಉಪಯೋಗಿ ಸಾಮಗ್ರಿಗಳು ಹಾನಿಯಾಗಿವೆ.

ಕಾಳಜಿ ಕೇಂದ್ರಗಳ ಸ್ಥಾಪನೆಭೀಮಾನದಿ ದಂಡೆಯಲ್ಲಿನ ಪ್ರವಾಹ ವ್ಯಾಪಿಸಬಹುದಾದ 12 ಗ್ರಾಮಗಳಲ್ಲಿ ತಾಲೂಕು ಆಡಳಿತ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ದತೆ ಮಾಡಿಕೊಂಡಿದೆ. ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದೆ. ಸೀನಾ ನದಿ ಪ್ರದೇಶದಲ್ಲಿ ಮಳೆ ಹೆಚ್ಚಾದರೆ ಭೀಮಾನದಿಗೆ ನೀರಿನ ಹರಿವು ಹೆಚ್ಚಾದರೆ ಸಮಸ್ಯೆ ಆಗುವ ಸಾದ್ಯತೆ ಇದೆ. ಜನರು, ಜಾನುವಾರುಗಳು ನದಿಯ ದಂಡೆಗೆ ಹೋಗದಂತೆ ಡಂಗೂರು ಸಾರಲಾಗಿದೆ. ವಸತಿ ಪ್ರದೇಶದ ಕುಟುಂಬಗಳಿಗೆ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರವಾಗಲು ಸೂಚಿಸಲಾಗಿದೆ. ಭೀಮಾನದಿಯಲ್ಲಿ ಸದ್ಯ 2.50 ಲಕ್ಷ ಕ್ಯೂಸೆಕ್ಸ ನೀರು ಹರಿಯುತ್ತಿದೆ.ಕೋಟ್‌ಭೀಮಾ ನದಿಯಲ್ಲಿ ಉಜನಿ, ಸೀನಾ ನದಿಯಿಂದ ಹಾಗೂ ಹಳ್ಳಗಳಿಂದ ಒಟ್ಟು 2.50 ಲಕ್ಷ ಕ್ಯೂಸೆಕ್ಸ ನೀರು ಹರಿಯುತ್ತಿದೆ. ಸೀನಾ ನದಿ ಭಾಗದಲ್ಲಿ ಮಳೆ ಮುಂದುವರೆದರೆ ನೀರಿನ ಹರಿಯು ಇನ್ನು ಹೆಚ್ಚಾಗಿ ಸಮಸ್ಯೆ ಆಗಬಹುದು. ಹೀಗಾಗಿ, ಮುಂಜಾಗ್ರತ ಕ್ರಮವಾಗಿ ನದಿ ದಂಡೆಯ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ನೋಡಲ್‌ ಅಧಿಕಾರಿಗಳು ನೀರಿನ ಪ್ರವಾಹ ಅವಲೋಕಿಸುತ್ತಿದ್ದಾರೆ. ನೋಡಲ್‌ ಅಧಿಕಾರಿಗಳಿಂದ ನಿರಂತರ ಮಾಹಿತಿ ಪಡೆದು ಜಿಲ್ಲಾಡಳಿತಕ್ಕೆ ತಿಳಿಸಲಾಗುತ್ತಿದೆ. ಸಧ್ಯ ಪ್ರವಾಹದಿಂದ ಸಮಸ್ಯಯಾದ ಬಗ್ಗೆ ಮಾಹಿತಿ ಇಲ್ಲ. ಬಿ.ಎಸ್‌.ಕಡಕಭಾವಿ, ತಹಸೀಲ್ದಾರ್‌,ಇಂಡಿ