ಸಾರಾಂಶ
ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದವರನ್ನು ಅರಣ್ಯ ಇಲಾಖೆ ಸಿಬ್ಬಂದಿ ರೆಡ್ ಹ್ಯಾಂಡ್ ಬಂಧಿಸಿದ್ದಾರೆ.
ಶಿರಾ: ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದವರನ್ನು ಅರಣ್ಯ ಇಲಾಖೆ ಸಿಬ್ಬಂದಿ ರೆಡ್ ಹ್ಯಾಂಡ್ ಬಂಧಿಸಿದ್ದಾರೆ. ಬುಕ್ಕಾಪಟ್ಟಣ ವಲಯ ವ್ಯಾಪ್ತಿಯ ಚಿಂಕಾರ ಗುಂಗುರಪೇಟೆ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಎಸ್‌ಬಿಬಿಎಲ್ ಬಂದೂಕಿನೊಂದಿಗೆ ಓರ್ವನನ್ನು ಬಂಧಿಸಿದ್ದು, ಇಬ್ಬರು ತಪ್ಪಿಸಿಕೊಂಡಿ ದ್ದಾರೆ. ಗಾಣದ ಹುಣಸೆ ಗ್ರಾಮದ ರಮೇಶ್ ಬಂಧಿತ. ಕೋರ ಗ್ರಾಮದ ಚಿನ್ನಿ ಅಲಿಯಾಸ್ ಮೋಹನ್ ಕುಮಾರ್, ಕಾಟನಹಳ್ಳಿ ಮಧು ಎನ್ ಪರಾರಿಯಾಗಿದ್ದಾರೆಂದು ಅರಣ್ಯ ಇಲಾಖೆ ಶಂಕಿಸಿದೆ. ಆರೋಪಿಗಳ ಮೇಲೆ ವನ್ಯಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ವಲಯ ಅಧಿಕಾರಿ ಸಿದ್ದರಾಜು ಎಸ್.ಎಸ್, ಉಪ ವಲಯ ಅರಣ್ಯ ಅಧಿಕಾರಿ ಕಿರಣ್ ಟಿ, ಅರಣ್ಯ ಪಾಲಕರಾದ ಶಶಿಕುಮಾರ್, ರೇವಣ್ಣ, ಸಿದ್ದಪ್ಪ ಕಾಳಗಿ ಚಾಲಕರಾದ ಪುಟ್ಟಸ್ವಾಮಿ ಮತ್ತು ನಾಗರಾಜ ನಾಯಕ ಇದ್ದರು.