ಕನ್ನಡಪ್ರಭ ವಾರ್ತೆ ಮೈಸೂರುಇತ್ತೀಚೆಗೆ ನಡೆದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ, ರಾಜ್ಯ ಒಕ್ಕಲಿಗರ ಸಂಘದ ಕೋಶಾಧ್ಯಕ್ಷರಾದ ಕೆ.ವಿ. ಶ್ರೀಧರ್ ಅವರು ಮೆರವಣಿಗೆಗೆ ಕೊಡುಗೆ ನೀಡಿದ್ದ ಗಂಗರ ಸಾಮ್ರಾಜ್ಯದ ಇತಿಹಾಸ'''''''' ಸ್ತಬ್ಧಚಿತ್ರ ಸಾರ್ವಜನಿಕರ ಗಮನ ಸೆಳೆಯಿತು.ಸ್ತಬ್ಧಚಿತ್ರವು ಒಕ್ಕಲಿಗರ ಇತಿಹಾಸ ಸಾರುವ ಜತೆಗೆ ಗಂಗರ ಕಾಲದ ಪ್ರಸಿದ್ಧ ರಾಜರು, ಆಳ್ವಿಕೆಯ ವರ್ಷ, ನಾಡಿಗೆ ಅವರ ಕೊಡುಗೆಗಳು, ಗಂಗರು ಒಕ್ಕಲಿಗರ ಮೂಲ ಪುರುಷರು ಎಂಬ ಮಾಹಿತಿಯನ್ನು ಸಾರುವ ಜತೆಗೆ ಗಂಗ ಸಾಮ್ರಾಜ್ಯದಿಂದ ಪ್ರಾರಂಭವಾಗುವ ಒಕ್ಕಲಿಗರ ಇತಿಹಾಸ ನಾಡಿಗೆ ನೀಡಿದ ಸಾಂಸ್ಕೃತಿಕ, ಆಡಳಿತಾತ್ಮಕ ಕೊಡುಗೆಯನ್ನು ಸಾರಿ ಹೇಳುತ್ತಿತ್ತು. ಆಕರ್ಷಿಸಿದ ಸ್ತಭ್ಧಚಿತ್ರ ಸ್ತಬ್ಧಚಿತ್ರದ ಮುಂಭಾಗ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅಲಂಕೃತವಾಗಿತ್ತು. ಪುತ್ಥಳಿಯ ಎರಡೂ ಬದಿಯಲ್ಲಿ ಕೆಂಪು ಹಳದಿ ಮಿಶ್ರಿತ ಕರುನಾಡಿನ ಬಣ್ಣವನ್ನು ಹೋಲುವ ಎರಡು ಕೆತ್ತನೆಯ ಕಂಬಗಳು ಸ್ತಬ್ಧಚಿತ್ರಕ್ಕೆ ಮಂಟಪದ ಮೆರುಗು ನೀಡಿದರೆ ಪುತ್ಥಳಿಯ ಹಿಂದೆ ಗಂಗ ಸಾಮ್ರಾಜ್ಯ ಪರಾಕ್ರಮಿ ರಾಜರುಗಳ ಚಿತ್ರ, ಒಕ್ಕಲಿಗರ ಪೌರುಷ, ಶೂರತ್ವದ ಸಂಕೇತದಂತೆ ರಾರಾಜಿಸುತ್ತಿತ್ತು. ಮೇಲ್ಭಾಗದಲ್ಲಿ "ಗಂಗರ ಸಾಮ್ರಾಜ್ಯದ ಇತಿಹಾಸ'''''''' ಎಂಬ ದೊಡ್ಡ ಅಕ್ಷರಗಳ ಹೆಸರು ಒಕ್ಕಲಿಗರ ಹೆಮ್ಮೆಯ ಪ್ರತೀಕದಂತೆ ರಾರಾಜಿಸುತ್ತಿತ್ತು.ಸ್ತಬ್ಧಚಿತ್ರದ ಸುತ್ತಲೂ ಗಂಗ ಸಾಮ್ರಾಜ್ಯದ ಇತಿಹಾಸ, ಆಡಳಿತ, ಪ್ರಸಿದ್ಧ ರಾಜರು, ಸಾಮ್ರಾಜ್ಯದ ವ್ಯಾಪ್ತಿ, ರಾಜರುಗಳು ನಾಡಿಗೆ ನೀಡಿದ ಕೊಡುಗೆಗಳ ಮಾಹಿತಿ ವರ್ಣರಂಜಿತವಾಗಿತ್ತು. ಸ್ತಬ್ಧಚಿತ್ರದಲ್ಲಿತ್ತು ಒಕ್ಕಲಿಗರು ಇತಿಹಾಸ ಒಕ್ಕಲಿಗರ ಮೂಲ ಮತ್ತು ತಲಕಾಡಿನ ಗಂಗರು ಗಂಗರು ಒಕ್ಕಲಿಗರ ಮೂಲಪುರುಷರು. ಇವರು ಸ್ಥಳಿಯರಾಗಿದ್ದು ಬಹುಸಂಖ್ಯಾತ ರೈತಾಪಿ ವರ್ಗದವರು. ಕೋಲಾರ, ಬೆಂಗಳೂರು, ತುಮಕೂರು, ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಒಳಗೊಂಡತೆ ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನ೦ತರ ಅಧಿಕಾರಕ್ಕೆ ಬಂದವರು. ಚನ್ನಪಟ್ಟಣ ಬಳಿಯ ಮಾಕುಂದ ಮತ್ತು ನೆಲಮಂಗಲ ಬಳಿಯ ಮಣ್ಣೆ ಇವರ ಉಪ ರಾಜಧಾನಿಗಳಾಗಿದ್ದವು. ಇವರು ಕ್ರಿ.ಶ. 3ನೇ ಶತಮಾನದಿಂದ 10 ನೇ ಶತಮಾನದವರೆಗೆ ಸುಮಾರು 800 ವರ್ಷಗಳ ಕಾಲ ಸುದೀರ್ಘ ಅಳ್ವಿಕೆ ನಡೆಸಿದರು.ಗಂಗ ಸಾಮ್ರಾಜ್ಯದ ವಿಸ್ತರಣೆ, ಉಪರಾಜಧಾನಿಗಳು, ಒಕ್ಕಲಿಗರ ಕುಲಕಸುಬಾದ ಕೃಷಿ, ಬೇಸಾಯದ ಚಿತ್ರಗಳು ಒಕ್ಕಲಿಗ ಸಮುದಾಯದ ಇತಿಹಾಸದ ಹಾದಿಯನ್ನು ತೆರೆದಿಟ್ಟವು. ಆಂದ್ರ ಪ್ರದೇಶ, ತಮಿಳುನಾಡಿನ ವರೆಗೂ ವಿಸ್ತರಿಸಿದ್ದ ಗಂಗ ಸಾಮ್ರಾಜ್ಯದ ಆಡಳಿತ, ಉಪವಿಭಾಗಗಳು, ಗಂಗವಾಡಿಗಳು, ಸ್ಮಾರಕಗಳ ಮಾಹಿತಿ ಯುವಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು.
ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಒಕ್ಕಲಿಗರ ಇತಿಹಾಸ ಸಾರಿದ ಸ್ತಬ್ಧಚಿತ್ರ
ಸ್ತಬ್ಧಚಿತ್ರವು ಒಕ್ಕಲಿಗರ ಇತಿಹಾಸ ಸಾರುವ ಜತೆಗೆ ಗಂಗರ ಕಾಲದ ಪ್ರಸಿದ್ಧ ರಾಜರು, ಆಳ್ವಿಕೆಯ ವರ್ಷ, ನಾಡಿಗೆ ಅವರ ಕೊಡುಗೆಗಳು, ಗಂಗರು ಒಕ್ಕಲಿಗರ ಮೂಲ ಪುರುಷರು ಎಂಬ ಮಾಹಿತಿಯನ್ನು ಸಾರುವ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.