ಮಗ್ಗಗಳಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್: ಅಭಿನಂದನೆ

| Published : Jan 15 2024, 01:46 AM IST

ಮಗ್ಗಗಳಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್: ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ವಿದ್ಯುತ್ ಮಗ್ಗ ನೇಕಾರರಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ಭರವಸೆಯನ್ನು ಈಡೇರಿಸಿದೆ. ರಾಜ್ಯದ ಇರುವ 25 ಸಾವಿರ 10 ಎಚ್‌ಪಿ ವರಗಿನ ವಿದ್ಯುತ್ ಮಗ್ಗದ ಘಟಕಗಳಿಗೆ ಅನುಕೂಲವಾಗಿದೆ ಎಂದು ಕರ್ನಾಟಕ ರಾಜ್ಯ ನೇಕಾರರ ಮಹಾ ಮಂಡಲದ ಪ್ರಧಾನ ಕಾರ್ಯದರ್ಶಿ ಬಿ.ಜಿ.ಹೇಮಂತರಾಜು ಹೇಳಿದರು.

ದೊಡ್ಡಬಳ್ಳಾಪುರ: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ವಿದ್ಯುತ್ ಮಗ್ಗ ನೇಕಾರರಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ಭರವಸೆಯನ್ನು ಈಡೇರಿಸಿದೆ. ರಾಜ್ಯದ ಇರುವ 25 ಸಾವಿರ 10 ಎಚ್‌ಪಿ ವರಗಿನ ವಿದ್ಯುತ್ ಮಗ್ಗದ ಘಟಕಗಳಿಗೆ ಅನುಕೂಲವಾಗಿದೆ ಎಂದು ಕರ್ನಾಟಕ ರಾಜ್ಯ ನೇಕಾರರ ಮಹಾ ಮಂಡಲದ ಪ್ರಧಾನ ಕಾರ್ಯದರ್ಶಿ ಬಿ.ಜಿ.ಹೇಮಂತರಾಜು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿದ್ದ ನೇಕಾರರಿಗೆ ನೆರವಾಗುವ ದಿಸೆಯಲ್ಲಿ 10 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ 20 ಎಚ್‌ಪಿವರೆಗೆ ವಿದ್ಯುತ್ ಸಹಾಯಧನ ನೀಡಿದ್ದರು. ಈಗ 10 ಎಚ್‌ಪಿವರೆಗೆ ಉಚಿತ ವಿದ್ಯುತ್‌ ನೀಡುವ ಯೋಜನೆ ಜಾರಿ ಆಗಿದೆ. ಡಿಸೆಂಬರ್‌ನಲ್ಲಿ ಬಂದಿರುವ ನವೆಂಬರ್ ತಿಂಗಳ ವಿದ್ಯುತ್ ಬಿಲ್ ಶೂನ್ಯವಾಗಿದೆ. ಆದರೆ ತಂತ್ರಾಂಶದ ಸಮಸ್ಯೆಯಿಂದಾಗಿ ಹಲವು ಬಿಲ್‌ಗಳಲ್ಲಿ ಬಾಕಿ ಮೊತ್ತ ಬರುತ್ತಿದ್ದು, ನೇಕಾರರು ಆತಂಕ ಪಡಬೇಕಿಲ್ಲ. ಈ ಬಗ್ಗೆ ಬೆಸ್ಕಾಂ ಸಹ ಸೂಚನೆ ನೀಡಿದೆ ಎಂದು ಹೇಳಿದರು.

ನೇಕಾರ ಸಮ್ಮಾನ್ ಯೋಜನೆಯ ಮೂಲಕ 83 ಸಾವಿರ ಜನ ನೇಕಾರರು ಮತ್ತು ನೇಕಾರ ಕಾರ್ಮಿಕರಿಗೆ ತಲಾ ₹5 ಸಾವಿರ ನೇಕಾರರ ಖಾತೆಗೆ ಜಮಾ ಮಾಡುವ ಮೂಲಕ ರಾಜ್ಯ ಸರ್ಕಾರ ನೇಕಾರರಿಗೆ ಅಸರೆಯಾಗಿದೆ. ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಮಸ್ತ ನೇಕಾರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೇಕಾರರಿಗೆ ನೀಡಲಾಗುತ್ತಿರುವ ರಿಯಾಯಿತಿ ವಿದ್ಯುತ್ ಯೋಜನೆ ಸ್ಥಗಿತಗೊಳಿಸಲು ಚಿಂತನೆ ನಡೆದಿತ್ತು. ನೇಕಾರರ ಹಲವಾರು ಯೋಜನೆಗಳಿಗೆ ಅನುದಾನ ನೀಡುತ್ತಿರಲಿಲ್ಲ. ಈಗ ಕಾಂಗ್ರೆಸ್ ನೇಕಾರರ ಹಿತಕ್ಕಾಗಿ ಹಲವು ಯೋಜನೆ ಜಾರಿಗೊಳಿಸುತ್ತಿದೆ ಎಂದರು.

ನೇಕಾರರ ಸಾಲದ ಮೇಲಿನ ಬಡ್ಡಿ ಮನ್ನಾ, ವಸತಿ ಯೋಜನೆ ಗುಂಪು ವಿಮಾ ಯೋಜನೆಯಡಿ 9ರಿಂದ 12ನೇ ತರಗತಿ ಓದುವ ನೇಕಾರ ಮಕ್ಕಳಿಗೆ ₹1,200 ವಿದ್ಯಾರ್ಥಿವೇತನ, ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಎರಡು ಮಗ್ಗ ಯೋಜನೆ ಎಲೆಕ್ಟ್ರಾನಿಕ್ ಜಕಾರ್ಡ್ ಯೋಜನೆ ಶೇ 3 ಬಡ್ಡಿದರದಲ್ಲಿ ಸಾಲ ಸೌಲಭ್ಯ ಯೋಜನೆ ಜಾರಿಗೆ ತಂದು ನೇಯ್ದೆ ಉದ್ಯಮಕ್ಕೆ ಆಸರೆ ಆಗಿದೆ ಎಂದರು.

ನೇಕಾರರಿಗೆ ವರವಾಗಿರುವ ಉಚಿತ ವಿದ್ಯುತ್ ಜಾರಿಗೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ರಾಜ್ಯನೇಕಾರ ಮಹಾ ಮಂಡಳಿಯ ಜೊತೆಗೆ ನಿಂತು ಸಹಕರಿಸಿದ ಹಿರಿಯ ಕಾಂಗ್ರೆಸ್ ಮುಖಂಡರಾದ ವೀರಪ್ಪಮೊಯ್ಲಿ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಇಲಾಖೆಯ ಅಧಿಕಾರಿಗಳು ಸಹಕರಿದ್ದಾರೆ ಎಂದರು.

ಕರ್ನಾಟಕ ರಾಜ್ಯ ನೇಕಾರರ ಮಹಾ ಮಂಡಲದ ನಿರ್ದೇಶಕ ಜೆ.ಎಸ್. ಮಂಜುನಾಥ್, ಕೆ.ಜಿ.ಗೋಪಾಲ್‌, ರಂಗಸ್ವಾಮಿ, ನೇಕಾರರ ಹೋರಾಟ ಸಮಿತಿಯ ಉಪಾಧ್ಯಕ್ಷ ಸಂಜೀವಪ್ಪ, ಎಸ್.ಎನ್.ಶಿವರಾಮ್ ಇತರರಿದ್ದರು.

13ಕೆಡಿಬಿಪಿ6-

ದೊಡಬಳ್ಳಾಪುರದಲ್ಲಿ ನೇಕಾರರ ಹೋರಾಟ ಸಮಿತಿಯ ಬಿ.ಜಿ.ಹೇಮಂತರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.