ಅಂಕಪುರದಲ್ಲಿ ಉಚಿತ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ, ರಕ್ತದಾನ ಹಾಗೂ ಆಭಾ ಕಾರ್ಡ್ ನೋಂದಣಿ ಕಾರ್ಯಕ್ರಮವನ್ನು ಯಾಶಸ್ವಿಯಾಗಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಔಷಧ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಣ್ಣಮಂಜೇಗೌಡ, ಉಪಾಧ್ಯಕ್ಷ ಗಣೇಶ್, ಕಾರ್ಲೆ ಜಿಲ್ಲಾ ಔಷಧ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಡಾ. ತೇಜಸ್ವಿ (ಕಾರ್ಲೆ ಪಿಎಚ್‌ಸಿ), ಡಾ. ಮೇಘನಾ (ಅಂಕಪುರ ಪಿಎಚ್‌ಸಿ), ಶಿಕ್ಷಕರಾದ ವಿಜಯಕುಮಾರ್, ಕಾಂಗ್ರೆಸ್ ಮುಖಂಡ ಹೇಮಂತ್ ಗೌಡ, ರೆಡ್ ಕ್ರಾಸ್ ನಿರ್ದೇಶಕ ಗಿರಿ ಗೌಡ, ಸೇವಾದಳದ ರಾಣಿ ವಿ.ಎಸ್, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ನಿಚಿತಾ ಕುಮಾರಿ, ಚೈತ್ರ ಕೆ.ಎನ್ ಹಾಗೂ ಎ.ಜೆ. ವೆಂಕಟೇಶ್ ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ಹಾಸನ
ಅಂಕಪುರದಲ್ಲಿ ಉಚಿತ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ, ರಕ್ತದಾನ ಹಾಗೂ ಆಭಾ ಕಾರ್ಡ್ ನೋಂದಣಿ ಕಾರ್ಯಕ್ರಮವನ್ನು ಯಾಶಸ್ವಿಯಾಗಿ ನಡೆಸಲಾಯಿತು.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಭಾರತೀಯ ರೆಡ್‌ಕ್ರಾಸ್ ಹಾಸನ, ಪ್ರಾಥಮಿಕ ಆರೋಗ್ಯ ಕೇಂದ್ರ ಅಂಕಪುರ, ಜಿಲ್ಲಾ ಔಷಧ ಸಗಟು ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ, ಡಾ. ಗುರುರಾಜ ಹೆಬ್ಬಾರ್ ಮೆಮೋರಿಯಲ್ ಟ್ರಸ್ಟ್, ಭಾರತ ಸೇವಾದಳ, ವೈಜ್ಞಾನಿಕ ಸಂಶೋಧನಾ ಪರಿಷತ್ ಘಟಕ, ನವಚೇತನ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ಅಂಕಪುರ ಗ್ರಾಮಸ್ಥರ ಸಹಯೋಗದಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.
ಕಾರ್ಯಕ್ರಮಕ್ಕೆ ಹಿಮ್ಸ್ ಪ್ರಾಂಶುಪಾಲರಾದ ಡಾ. ಕವಿತಾ ಸಿ.ಬಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಔಷಧ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಣ್ಣಮಂಜೇಗೌಡ, ಉಪಾಧ್ಯಕ್ಷ ಗಣೇಶ್, ಕಾರ್ಲೆ ಜಿಲ್ಲಾ ಔಷಧ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಡಾ. ತೇಜಸ್ವಿ (ಕಾರ್ಲೆ ಪಿಎಚ್‌ಸಿ), ಡಾ. ಮೇಘನಾ (ಅಂಕಪುರ ಪಿಎಚ್‌ಸಿ), ಶಿಕ್ಷಕರಾದ ವಿಜಯಕುಮಾರ್, ಕಾಂಗ್ರೆಸ್ ಮುಖಂಡ ಹೇಮಂತ್ ಗೌಡ, ರೆಡ್ ಕ್ರಾಸ್ ನಿರ್ದೇಶಕ ಗಿರಿ ಗೌಡ, ಸೇವಾದಳದ ರಾಣಿ ವಿ.ಎಸ್, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ನಿಚಿತಾ ಕುಮಾರಿ, ಚೈತ್ರ ಕೆ.ಎನ್ ಹಾಗೂ ಎ.ಜೆ. ವೆಂಕಟೇಶ್ ಉಪಸ್ಥಿತರಿದ್ದರು.ಶಿಬಿರದ ಸುಗಮ ನಿರ್ವಹಣೆಗೆ ಡಾ. ರಾಜೇಂದ್ರ, ಘಟಕ ನಾಯಕರು ಸೃಜನ್ ತಮ್ಮೇಗೌಡ, ರೋಹಿತ್ ಗೌಡ ಮತ್ತು ಪ್ರಿಯಾಂಕ ಹಾಗೂ ೮೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಸಹಕರಿಸಿದರು. ಅನೇಕ ವಿಭಾಗಗಳ ವೈದ್ಯಾಧಿಕಾರಿಗಳು ೨೦ಕ್ಕೂ ಹೆಚ್ಚು ವಿಧದ ತಪಾಸಣೆ ಹಾಗೂ ಚಿಕಿತ್ಸೆ ನೀಡಿದರು. ಮಹಿಳೆಯರಿಗಾಗಿ ಗರ್ಭ ಕಂಠ ಮತ್ತು ಸ್ತನ ಕ್ಯಾನ್ಸರ್ ತಪಾಸಣೆಗಳನ್ನು ಡಾ. ಪ್ರೇಮಲತಾ ನಡೆಸಿದರು. ಒಟ್ಟಾರೆ ೫೦೦ಕ್ಕೂ ಹೆಚ್ಚು ಜನರು ಆರೋಗ್ಯಸೇವೆಯಿಂದ ಪ್ರಯೋಜನ ಪಡೆದಿದ್ದು, ಹಲವಾರು ದಾನಿಗಳು ರಕ್ತದಾನ ಮಾಡಿದರು.