ವೈದೇಹಿ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ

| Published : Sep 15 2024, 01:51 AM IST

ಸಾರಾಂಶ

ನಗರದ ವಾಸವಿ ಮಹಲ್‌ನಲ್ಲಿ ರ‍್ಯವೈಶ್ಯ ಸಂಘಟನೆಗಳ ಸಹಯೋಗದೊಂದಿಗೆ ಬೆಂಗಳೂರಿನ ವೈದೇಹಿ ಆಸ್ಪತ್ರೆ ಹಿರಿಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿತು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ನಗರದ ವಾಸವಿ ಮಹಲ್‌ನಲ್ಲಿ ವೈಶ್ಯ ಸಂಘಟನೆಗಳ ಸಹಯೋಗದೊಂದಿಗೆ ಬೆಂಗಳೂರಿನ ವೈದೇಹಿ ಆಸ್ಪತ್ರೆ ಹಿರಿಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿತು.

ವೈಶ್ಯ ಸಂಘದ ಅಧ್ಯಕ್ಷ ಬಿ.ಎಂ. ಕೃಷ್ಣಮೂರ್ತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ರ‍್ಯವೈಶ್ಯ ಸಮುದಾಯ ಉಚಿತ ಆರೋಗ್ಯ ಶಿಬಿರ ನಡೆಸುವ ಮೂಲಕ ಯಾವುದೇ ರೋಗಗಳು ಬಾಧಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಬೆಂಗಳೂರಿನ ವೈದೇಹಿ ಆಸ್ಪತ್ರೆಯ ತಜ್ಞ ವೈದ್ಯರು ನಮ್ಮ ಮನವಿಯನ್ನು ಪುರಸ್ಕೃರಿಸಿ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.

ಉಪಾಧ್ಯಕ್ಷ ಪಿ.ಆರ್. ಪದ್ಮನಾಭಗುಪ್ತ ಮಾತನಾಡಿ, ಇಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 350ಕ್ಕೂ ಹೆಚ್ಚು ಜನರು ತಪಾಸಣೆಗೆ ಒಳಗಾಗಿದ್ದಾರೆ. ಕೆಲವರಿಗೆ ಮಾತ್ರ ಕೆಲವೊಂದು ಸಮಸ್ಯೆಗಳಿದ್ದು ಅವುಗಳಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ ಎಲ್ಲರನ್ನೂ ಅಭಿನಂದಿಸಿವುದಾಗಿ ತಿಳಿಸಿದರು.

ಡಾ. ಹರೀಶ್‌ಕುಮಾರ್, ಸಮಾಜದ ಹಿರಿಯ ಮುಖಂಡರಾದ ರಘುನಾಥ ಬಾಬು, ಕಾರ್ಯದರ್ಶಿ ಎ.ಎನ್. ಚಿದಾನಂದಗುಪ್ತ, ಸಿ.ಎಸ್. ಪ್ರಸಾದ್, ಉಪಾಧ್ಯಕ್ಷ ಎಂ.ವಿ.ವೆಂಕಟ ನಾಗರಾಜು, ಚಂದ್ರಶೇಖರ್‌ಗುಪ್ತ, ಆರ್.ಮಧು, ಚಿಕ್ಕ ಶ್ರೀನಿವಾಸಲು, ಸಿ.ಬಿ. ಆದಿಭಾಸ್ಕರಶೆಟ್ಟಿ, ಗೋವರ್ಧನ, ವೈ.ಎನ್. ವಿರೂಪಾಕ್ಷಿ, ವೆಂಕಟರಾಘವನ್, ಜ್ಯೋತಿನಾಗರಾಜು ಮುಂತಾದವರು ಉಪಸ್ಥಿತರಿದ್ದರು.