ನಿಸ್ವಾರ್ಥದಿಂದ ಇಂತಹ ಸಾಮಾಜಿಕ ಕಾರ್ಯಗಳನ್ನು ನೆರವೇರಿಸುತ್ತಿರುವದರಿಂದ ಜನರ ಒಗ್ಗಟ್ಟಿನ ಚಿಂತನೆಗೆ ಸಾಕ್ಷಿಯಾಗಿದೆ

ಹನುಮಸಾಗರ: ಜಾತಿ, ಧರ್ಮಗಳ ಬೇಲಿ ದಾಟಿ ಸರ್ವ ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ನಡೆಸುವ ಉಚಿತ ವಿವಾಹ ಬಡವರಿಗೆ ವರದಾನವಾಗಿವೆ ಎಂದು ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವ ಶಿವಚಾರ್ಯ ಹೇಳಿದರು.

ಸಮೀಪದ ಶಾಡಲಗೇರಿ ಗ್ರಾಮದಲ್ಲಿ ನಡೆದ ಶ್ರೀಶರಣಬಸವೇಶ್ವರ ಪುರಾಣ ಮಂಗಲ ಹಾಗೂ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮೂಹಿಕ ವಿವಾಹಗಳು ಸಂಸ್ಕಾರ ತಿಳಿಸುತ್ತವೆ. ನಿಸ್ವಾರ್ಥದಿಂದ ಇಂತಹ ಸಾಮಾಜಿಕ ಕಾರ್ಯಗಳನ್ನು ನೆರವೇರಿಸುತ್ತಿರುವದರಿಂದ ಜನರ ಒಗ್ಗಟ್ಟಿನ ಚಿಂತನೆಗೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮುತ್ತಯ್ಯ ಹಿರೇಮಠ, ನಾಗಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಶಂಭುಲಿಂಗ ಹಿರೇಮಠ, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಅಂದಪ್ಪ ತಳವಾರ, ಸಿದ್ದಪ್ಪ ರೊಟ್ಟಿ, ಮಲ್ಲಣ್ಣ ಗಟ್ಟಿ, ಸಂಗಪ್ಪ ವೀರಪ್ಪ ಅಂಗಡಿ, ಶಿವಪ್ಪ ರಡ್ಡೇರ, ಸಂಗಪ್ಪ ಅಂಗಡಿ, ಗುರುಪಾದಪ್ಪ ಹಡಪದ, ಅಬ್ದುಲ್ ಸಾಬ್ ಮುಲ್ಲಾ, ಶರಣಪ್ಪ ಹೂಗಾರ, ಮಹಾಂತೇಶ ಗೋನಾಳ, ಅಯ್ಯಪ್ಪ ನಸಗುನ್ನಿ, ಸಂಗಪ್ಪ ಹಳದೂರ, ಮಹಾಂತೇಶ ಬಾಗಲಿ, ಶಿವಪ್ಪ ಅಂಗಡಿ, ಸುರೇಶ ಬನ್ನಟ್ಟಿ, ಶರಣಪ್ಪ ಅಂಗಡಿ, ರಾಜಸಾಬ್ ಕಡೆಮನಿ, ಸಕ್ರಪ್ಪ ಗುಳಗುಳಿ, ಭೀಮಪ್ಪ ವಕ್ರದ, ಶರಣಪ್ಪ ಬೆಣ್ಣಿ, ಕುಮಾರ ಪೂಜಾರ, ದೇವರೆಡ್ಡಿ ರಡ್ಡೇರ, ರಾಯಪ್ಪ ಆರಿ ಸೇರಿದಂತೆ ಇತರರು ಇದ್ದರು.

ಶಿಕ್ಷಕ ಗುರುರಾಜ ಹಡಪದ ನಿರ್ವಹಿಸಿದರು.