ನಾಳೆಯಿಂದ ಉಚಿತ ಯೋಗ ಧ್ಯಾನ ಪ್ರಾಣಾಯಾಮ ಶಿಬಿರ

| Published : May 04 2025, 01:32 AM IST

ಸಾರಾಂಶ

ಧ್ಯಾನ ಶಿಬಿರವು ಹಾಸನ ನಗರ ಮತ್ತು ಸುತ್ತಮುತ್ತಲ ಇರುವ ನಾಗರಿಕರಿಗಾಗಿ ಒಂದು ಅದ್ಭುತ ಅವಕಾಶ ಸಿಗಲಿದೆ ಎಂದರು. ಒಬ್ಬ ವ್ಯಕ್ತಿ ನೂರು ವರ್ಷಗಳ ಕಾಲ ನಿರೂಗಿಯಾಗಿ ಯಾವ ರೀತಿ ಬದುಕಬಹುದು, ಆಹಾರದ ಪದ್ಧತಿ ಕುರಿತು, ಆಯುರ್ವೇದ ಗಿಡ ಮೂಲಿಕೆಗಳ ಪರಿಚಯ ಹಾಗೂ ನಮ್ಮ ಮನೆ ಮದ್ದು ಸೇರಿದಂತೆ ಎಲ್ಲಾ ರೀತಿಯ ಬಗ್ಗೆ ತಿಳಿಸಿಕೊಡಲಿದ್ದಾರೆ. ಈ ಶಿಬಿರದಲ್ಲಿ ಭಾಗಿಯಾದರೇ ನೂರು ವರ್ಷ ಕಾಪಾಡಿಕೊಳ್ಳಬಹುದು. ಈ ಯೋಗ ಮಹೋತ್ಸವ ಎಂದರೇ ಒಂದು ರೀತಿ ಆನಂದ ಉತ್ಸವವಾಗಿದೆ ಎಂದು ಹೇಳಿದರು. ಈ ಯೋಗ ಸಂದೇಶವನ್ನು ಇಲ್ಲಿನ ಜನತೆಗೆ ಸಂದೇಶ ನೀಡುವುದು ಮುಖ್ಯ ಉದ್ದೇಶವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಪತಂಜಲಿ ಯೋಗ ಪರಿವಾರದಿಂದ ಮೇ ೫ರಿಂದ ೭ರವರೆಗೂ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಉಚಿತ ಯೋಗ ಧ್ಯಾನ ಪ್ರಾಣಾಯಾಮ ಶಿಬಿರಕ್ಕೆ ಸ್ವಾಮಿ ಪರಮಾರ್ಥ ದೇವ್ ಜೀ ಆಗಮಿಸಲಿದ್ದಾರೆ ಎಂದು ಪರಿವಾರದ ನಿಕಟ ಪೂರ್ವ ಜಿಲ್ಲಾ ಸಂರಕ್ಷಕರಾದ ಹರಿಹರಪುರ ಶ್ರೀಧರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮೂರು ದಿನಗಳ ಕಾಲಪತಂಜಲಿ ಯೋಗ ಪೀಠದ ವತಿಯಿಂದ ಹಾಸನ ನಗರದಲ್ಲಿ ಯೋಗ ಮಹೋತ್ಸವ ನಡೆಯಲಿದೆ. ಈ ಶಿಬಿರದ ಬಗ್ಗೆ ಮಾರ್ಗದರ್ಶನ ಮಾಡಲು ಪತಂಜಲಿ ಯೋಗ ಪೀಠ ಹರಿಧ್ವಾರದಿಂದ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್ ಈ ಸಂಘಟನೆಯ ಮುಖ್ಯ ಕೇಂದ್ರಿಯ ಪ್ರಭಾರಿಗಳು ಇದ್ದು, ಸ್ವಾಮಿ ಪರಮಾರ್ಥ ದೇವ್ ಗುರೂಜಿ ಅವರು ಹಾಸನ ನಗರಕ್ಕೆ ಮೊಟ್ಟ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ. ಈ ಶಿಬಿರವು ಹಾಸನ ನಗರ ಮತ್ತು ಸುತ್ತಮುತ್ತಲ ಇರುವ ನಾಗರಿಕರಿಗಾಗಿ ಒಂದು ಅದ್ಭುತ ಅವಕಾಶ ಸಿಗಲಿದೆ ಎಂದರು. ಒಬ್ಬ ವ್ಯಕ್ತಿ ನೂರು ವರ್ಷಗಳ ಕಾಲ ನಿರೂಗಿಯಾಗಿ ಯಾವ ರೀತಿ ಬದುಕಬಹುದು, ಆಹಾರದ ಪದ್ಧತಿ ಕುರಿತು, ಆಯುರ್ವೇದ ಗಿಡ ಮೂಲಿಕೆಗಳ ಪರಿಚಯ ಹಾಗೂ ನಮ್ಮ ಮನೆ ಮದ್ದು ಸೇರಿದಂತೆ ಎಲ್ಲಾ ರೀತಿಯ ಬಗ್ಗೆ ತಿಳಿಸಿಕೊಡಲಿದ್ದಾರೆ. ಈ ಶಿಬಿರದಲ್ಲಿ ಭಾಗಿಯಾದರೇ ನೂರು ವರ್ಷ ಕಾಪಾಡಿಕೊಳ್ಳಬಹುದು. ಈ ಯೋಗ ಮಹೋತ್ಸವ ಎಂದರೇ ಒಂದು ರೀತಿ ಆನಂದ ಉತ್ಸವವಾಗಿದೆ ಎಂದು ಹೇಳಿದರು. ಈ ಯೋಗ ಸಂದೇಶವನ್ನು ಇಲ್ಲಿನ ಜನತೆಗೆ ಸಂದೇಶ ನೀಡುವುದು ಮುಖ್ಯ ಉದ್ದೇಶವಾಗಿದೆ.

ಮೇ ತಿಂಗಳಲ್ಲಿ ನಡೆಯುವ ಮೂರು ದಿನಗಳ ಯೋಗ ಹಬ್ಬ ಎಂದರೇ ಇದಕ್ಕಿಂತ ದೊಡ್ಡ ಹಬ್ಬ ಹಾಸನದಲ್ಲಿ ಬರುವುದಿಲ್ಲ. ಸ್ವಾಮಿ ಪರಮಾರ್ಥ ದೇವ್ ಗುರೂಜಿ ಅವರು ಹೆಚ್ಚಿನ ಅಧ್ಯಾಯನ ಮಾಡಿ ಅವರ ಅನುಭವವನ್ನು ಹಾಸನಕ್ಕೆ ಧಾರೆ ಎರೆಯಲಿದ್ದಾರೆ. ಮೇ ೫ರಿಂದ ನಡೆಯುವ ಮೂರು ದಿನಗಳ ಕಾಲ ಬೆಳಿಗ್ಗೆ ೫:೩೦ರಿಂದ ಬೆಳಿಗ್ಗೆ ೭:೩೦ರವರೆಗೂ ಯೋಗ ಶಿಬಿರ ನಡೆಯಲಿದೆ. ಮೇ ೫ರ ಸೋಮವಾರ ಸಂಜೆ ೫ ಗಂಟೆಗೆ ವಿಜಯ ನಗರದ ಪತಂಜಲಿ ಯೋಗ ಭವನದಲ್ಲಿ ಸ್ವಾಮೀಜಿಯವರಿಂದ ಸತ್ಸಂಗ ನಡೆಯಲಿದೆ. ಮೇ.೬ರ ಮಂಗಳವಾರದಂದು ತಣ್ಣೀರುಹಳ್ಳದ ಬಳಿ ಇರುವ ಶ್ರೀ ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಸಂಜೆ ೫ ಗಂಟೆಗೆ ಏರ್ಪಡಿಸಲಾಗಿದೆ. ಈ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಇದಕ್ಕೂ ಮೊದಲು ಮೇ ೪ರ ಭಾನುವಾರದಂದು ಸಂಜೆ ೪ ಗಂಟೆಗೆ ಶೋಭಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಾಸನಾಂಬ ಕಲಾಕ್ಷೇತ್ರದಿಂದ ಹೊರಟು ಸಹ್ಯಾದ್ರಿ ವೃತ್ತ, ಸೀತಾರಾಮಾಂಜನೇಯ ದೇವಾಲಯ, ಸ್ಲೇಟರ್ಸ್ ಹಾಲ್, ಆರ್‌.ಸಿ. ರಸ್ತೆ, ಬಿ.ಎಂ. ರಸ್ತೆ, ನರಸಿಂಹರಾಜ ವೃತ್ತ, ಹೇಮಾವತಿ ಪ್ರತಿಮೆ ಮಾರ್ಗವಾಗಿ ಹಾಸನಾಂಬ ಕಲಾಕ್ಷೇತ್ರದ ಬಳಿ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪತಂಜಲಿ ಯೋಗ ಪರಿವಾರದ ಜಿಲ್ಲಾ ಸಂರಕ್ಷಕ ಲೋಕನಾಥ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಗಿರೀಶ್, ಯುವ ಭಾರತ್ ಜಿಲ್ಲಾ ಪ್ರಭಾರಿ ಸುರೇಶ್ ಪ್ರಜಾಪತಿ, ಕಿಸಾನ್ ಸೇವಾ ಸಮಿತಿ ಜಿಲ್ಲಾ ಪ್ರಭಾರಿ ನಾಗೇಶ್, ಮಹಿಳಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಶಾರದಾ ಧರ್ಮಾನಂದ್ ಇತರರು ಉಪಸ್ಥಿತರಿದ್ದರು.