ತೋಟಪ್ಪ ನಾರಾಯಣಪೂರ ಅವರಂಥ ಸರಳ ಜೀವಿಗಳು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದೇ ಜೀವನದ ಪರಮಧ್ಯೇಯವೆಂದು ಭಾವಿಸಿ ಸ್ವಾತಂತ್ರ್ಯಾನಂತರ ಯಾವುದೇ ಲಾಭ ಪಡೆಯದೆ ಸರಳವಾಗಿ ಬದುಕಿ ಆದರ್ಶವನ್ನು ಮೆರೆದು ಹೋಗಿದ್ದಾರೆ.

ಗದಗ: ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ತೋಟಪ್ಪ ನಾರಾಯಣಪೂರ ಅವರು ಆಪ್ರತಿಮ ದೇಶಭಕ್ತರಾಗಿದ್ದರು ಎಂದು ಪ್ರೊ. ದತ್ತಪ್ರಸನ್ನ ಪಾಟೀಲ ತಿಳಿಸಿದರು.

ನಗರದಲ್ಲಿ ಕಬ್ಬಿಗರ ಕೂಟ ಏರ್ಪಡಿಸಿದ್ದ ತೋಟಪ್ಪ ನಾರಾಯಣಪೂರ ಅವರ 60ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ತೋಟಪ್ಪ ನಾರಾಯಣಪೂರ ಅವರ ಕೊಡುಗೆ ಕುರಿತು ಮಾತನಾಡಿದರು.

ನೆಹರು, ಗಾಂಧೀಜಿ ಅವರಂಥ ಮಹಾನ್ ನಾಯಕರ ನೇರ ಸಂಪರ್ಕದಲ್ಲಿದ್ದರೂ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ದುಡಿದು ಮಡಿದರು. ಇಂದು ದೇಶ ಸೇವೆಯ ಹೆಸರಿನಲ್ಲಿ ಸ್ವಂತ ಲಾಭಕ್ಕೆ ಪರಿತಪಿಸುವವರನ್ನು ಕಂಡಾಗ ತೋಟಪ್ಪ ನಾರಾಯಣಪೂರ ಅವರಂಥ ಸರಳ ಜೀವಿಗಳು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದೇ ಜೀವನದ ಪರಮಧ್ಯೇಯವೆಂದು ಭಾವಿಸಿ ಸ್ವಾತಂತ್ರ್ಯಾನಂತರ ಯಾವುದೇ ಲಾಭ ಪಡೆಯದೆ ಸರಳವಾಗಿ ಬದುಕಿ ಆದರ್ಶವನ್ನು ಮೆರೆದು ಹೋಗಿದ್ದಾರೆ. ಇಂಥವರ ಜೀವನಗಾಥೆ ಇಂದಿನ ಪೀಳಿಗೆಗೆ ಮಾದರಿ ಎಂದರು.

ಈ ವೇಳೆ ಮನೋಹರ ಮೇರವಾಡೆ ಹಾಗೂ ದತ್ತಪ್ರಸನ್ನ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾ. ಪ್ರೊ. ಕೆ.ಎಚ್. ಬೇಲೂರ, ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ, ಎಂ.ಎಫ್. ಡೋಣಿ, ಡಾ. ಸುಬ್ಬಣ್ಣವರ, ಎಂ.ಸಿ. ವಗ್ಗಿ, ಎಲ್.ಎಸ್. ನೀಲಗುಂದ, ನಜೀರ ಸಂಶಿ, ರಾಚಪ್ಪ ಕುಪ್ಪಸ, ಎಂ.ಪಿ. ತಳಬಾಳ, ಎಸ್.ವಿ. ನಾರಾಯಣಪೂರ, ಪಿ.ಎಸ್. ಹಿರೇಮಠ, ಬಿ.ಎಂ. ಬಿಳೇಯಲಿ, ಬಿ.ಎಂ. ಮಾನೇದ, ಬಾಬಾಜಾನ ಯಲಿಗಾರ, ವೀರೇಶ ನಾರಾಯಣಪೂರ, ಎಸ್.ಯು. ಸಜ್ಜನಶೆಟ್ಟರ, ಮಂಜುನಾಥ ಹಿಂಡಿ, ಜಿ.ಎಂ. ಯಾನಮಶೆಟ್ಟರ, ಶ್ರೀಶ ಕಬಾಡಿ, ರತ್ನಕ್ಕಾ ಪಾಟೀಲ, ಅನಸೂಯಾ ಮಿಟ್ಟಿ ಮುಂತಾದವರು ಇದ್ದರು. ಬಸವರಾಜ ಗಣಪ್ಪನವರ ಸ್ವಾಗತಿಸಿದರು. ಆರ್.ಟಿ. ನಾರಾಯಣಪೂರ ವಂದಿಸಿದರು.