ಮುಸ್ಲಿಂ ಮಹಿಳಾ ಆಯುಷ್ ವೈದ್ಯೆ ಹಿಜಾಬ್ ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ ಎಳೆದು ತೆಗೆದ ಘಟನೆಯನ್ನು ಖಂಡಿಸಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ವತಿಯಿಂದ ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ಹೊಸಪೇಟೆ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಸರ್ಕಾರದ ನೇಮಕಾತಿ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳಾ ಆಯುಷ್ ವೈದ್ಯೆ ಹಿಜಾಬ್ ಅನ್ನು ಎಳೆದು ತೆಗೆದ ಘಟನೆಯನ್ನು ಖಂಡಿಸಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ವತಿಯಿಂದ ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯ ಕೃತ್ಯವು ಕಾನೂನಿನ ಸ್ಪಷ್ಟ ಉಲ್ಲಂಘನೆ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿದಂತಾಗಿದೆ. ಬಿಹಾರ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಉದ್ದೇಶಪೂರ್ವಕವಾಗಿ ಮಹಿಳೆಯ ಒಪ್ಪಿಗೆ ಇಲ್ಲದೆ ಬಟ್ಟೆಯನ್ನು ಮುಟ್ಟುವ ಮೂಲಕ ಅಪರಾಧ ಮಾಡಿರುತ್ತಾರೆ. ಇದು ಇತರೆ ಮಹಿಳೆಯರ ಭಾವನೆಗಳಿಗೆ ನೋವುಂಟು ಆಗಿರುತ್ತದೆ.ಬಿಹಾರ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಸಂವಿಧಾನದ ಗೌರವಾನ್ವಿತ ಸ್ಥಾನದಲ್ಲಿದ್ದು, ಈ ರೀತಿ ಮಾಡಿರುವುದು ಅತೀವ ನೋವುಂಟಾಗಿರುತ್ತದೆ. ನಿತೀಶ್ ಕುಮಾರ ಅವರ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪರ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ರವಾನಿಸಲಾಯಿತು.
ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಅನ್ಸರ್ ಬಾಷಾ, ಅಬೂಬಕ್ಕರ್ ಅಶ್ರಫಿ. ಫೈರೋಜ್ ಖಾನ್, ಡಾ. ದುರ್ವೇಶ್ ಮಯೂದ್ದೀನ್, ಸದ್ಯಸರಾದ ಮೊಹಮ್ಮದ್ ಮೋಸಿನ್, ಸದ್ದಾಮ್ ಹುಸೇನ್, ಡಾ. ಹಬೀಬುಲ್ಲಾ, ಡಾ ಫಜಲುಲ್ಲಾ, ರೆಹೆಮಾನ್ ಸಾಬ್, ಜಾಫರ್ ಸೇರಿದಂತೆ ಸಮಾಜದ ಮುಖಂಡರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.