ನಿಯತಿ ಸಹಕಾರಿ ಸೊಸೈಟಿಯ ಸಾಮಾನ್ಯ ಸಭೆ

| Published : Sep 19 2025, 01:03 AM IST

ನಿಯತಿ ಸಹಕಾರಿ ಸೊಸೈಟಿಯ ಸಾಮಾನ್ಯ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ನಿಯತಿ ಸಹಕಾರಿ ಸೊಸೈಟಿ ಲಿಮಿಟೆಡ್‌ನ ೫ನೇ ವಾರ್ಷಿಕ ಸಾಮಾನ್ಯ ಸಭೆ ನಗರದ ನ್ಯೂ ಉದಯ ಭವನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ನಿಯತಿ ಸಹಕಾರಿ ಸೊಸೈಟಿ ಲಿಮಿಟೆಡ್‌ನ ೫ನೇ ವಾರ್ಷಿಕ ಸಾಮಾನ್ಯ ಸಭೆ ನಗರದ ನ್ಯೂ ಉದಯ ಭವನದಲ್ಲಿ ನಡೆಯಿತು.

ಸಮಾಜದ ಅಧ್ಯಕ್ಷ ಡಾ.ಸೋನಾಲಿ ಸರ್ನೋಬತ್‌ ಅವರು ಸಮಾಜದ ಪ್ರಗತಿ, ಸಾಧನೆಗಳು ಮತ್ತು ಭವಿಷ್ಯದ ದೃಷ್ಟಿಕೋನ ಕುರಿತು ಸವಿಸ್ತಾರ ವರದಿ ಮಂಡಿಸಿದರು. ಬ್ಯಾಲೆನ್ಸ್ ಶೀಟ್‌ನ್ನು ನರಸಿಂಹ ಜೋಶಿ ಓದಿದರು. ಲಾಭ-ನಷ್ಟ ಪತ್ರಿಕೆಯನ್ನು ಅನುಷಾ ಜೋಶಿ ಮಂಡಿಸಿದರು. ಸಭೆಯ ಅಧಿಸೂಚನೆಯನ್ನು ದೀಪಾ ಪ್ರಭುದೇಸಾಯಿ ಓದಿದರು. ಕಿಶೋರ್ ಕಾಕಡೆ ಕಾರ್ಯಕ್ರಮ ನಿರೂಪಣೆ ಮಾಡಿದರು. ೨೦೨೫–೨೦೨೬ನೇ ಸಾಲಿನ ಬಜೆಟ್‌ನ್ನು ಪ್ರಸಾದ್ ಘಾಡಿ ಮಂಡಿಸಿದರು. ಕೊನೆಯಲ್ಲಿ ರೋಹಿತ್ ದೇಶಪಾಂಡೆ ಧನ್ಯವಾದ ಪ್ರಸ್ತಾವಿಸಿದರು.ಸಭೆಯಲ್ಲಿ ಡಾ.ಸಮೀರ್ ಸರ್ನೋಬತ್‌, ಭರತ್ ರಠೋಡ್, ರೋಹಿತ್ ದೇಶಪಾಂಡೆ, ಪ್ರಸಾದ್ ಘಾಡಿ, ಗಜಾನನ ರಾಮನಕಟ್ಟಿ, ಅನುಪ್ ಜಾವಳ್ಕರ್, ಬಸವರಾಜ ಹಪ್ಪಳಿ, ಬಸವರಾಜ ಹೊಂದಂಡಕಟ್ಟಿ, ಮಿಲಿಂದ ಪಾಟೀಲ, ಸಂದೀಪ ಖನ್ನೂಕರ್, ವಿಜಯ ಮೋರೆ, ಅಶೋಕ್ ನಾಯಕ್, ಸಂದ್ಯಾ ಬೀರ್ಜೆ, ಸೌಂದರ್ಯಾ ಪೂಜಾರಿ, ಮೇಘಾ ಕದ್ರೋಳಿ, ದಾಮೋದರ ಕಾಳೆ, ಮೃಣ್ಮಯಿ ದೇಸಾಯಿ ಸೇರಿದಂತೆ ನಿರ್ದೇಶಕರು, ಸಲಹೆಗಾರರು, ಸಿಬ್ಬಂದಿ ಹಾಗೂ ಶೇರುದಾರರು ಭಾಗವಹಿಸಿದ್ದರು.