ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಪ್ರಧಾನಿ ನರೇಂದ್ರ ಮೋದಿ ವಾಜಪೇಯಿ ನಂತರ ಬಲಿಷ್ಠ ರಾಷ್ಟ್ರ ಕಟ್ಟಿದ ಧೀಮಂತ ವ್ಯಕ್ತಿತ್ವದ ನಾಯಕ. ಅವರ ನಾಯಕತ್ವದಲ್ಲಿ ಸರ್ಕಾರ ಮಾಡಿದ ಕೆಲಸಗಳು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುವಂತದಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶಾದ್ಯಂತ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ವಿಜೃಂಭಣೆಯಿಂದ ಆಚರಿಸುತ್ತಿದೆ. ಮೋದಿ ಅವರ ಆಡಳಿತದಲ್ಲಿ ಸ್ತ್ರೀ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ರೈತರ ಪರ ಕಾಳಜಿ ಹೊಂದಿರುವ ಪ್ರಧಾನಿಯಾಗಿದ್ದು, 25 ವರ್ಷಗಳಿಂದ ದೇಶದ ಪ್ರಧಾನಿಗಳ ಕಾರ್ಯ ವೈಖರಿಯನ್ನು ಗಮನಿಸಿದ್ದೇನೆ. ದೇಶದ ಬಗ್ಗೆ ಕಳಕಳಿಯಿಂದ ಆಡಳಿತ ಮಾಡಿದವರಲ್ಲಿ ಪ್ರಧಾನಿ ಮೋದಿ ಮೊದಲಿಗರು, 60 ವರ್ಷ ದೇಶವಾಳಿದ ಕಾಂಗ್ರೆಸ್ ಪ್ರಧಾನಿಗಳು ತಮ್ಮ ಬಗ್ಗೆಯೇ ಯೋಚಿಸಿಕೊಂಡಿದ್ದಾರೆ. ವಿಶ್ವದ ಹಿರಿಯಣ್ಣ ಅಮೆರಿಕ ಅಧ್ಯಕ್ಷರಿಗೆ ನೇರವಾಗಿ ಉತ್ತರ ನೀಡಿದ ಚಾಣಾಕ್ಷ ಪ್ರಧಾನಿ ಮೋದಿಯವರು ಎಂದು ಹೇಳಿದ ಅವರು, ಹಿಂದಿನ ಪ್ರಧಾನಿ ಅಮೆರಿಕ ಅಧ್ಯಕ್ಷನಿಗೆ ಸಲಾಂ ಹೊಡೆಯುವ ಕಾಲ ನೋಡಿದ್ದೇವೆ. ಆದರೆ ಇಂದು ಅಮೆರಿಕ ಅಧ್ಯಕ್ಷನೇ ಪ್ರಧಾನಿ ಮೋದಿಯವರಿಗೆ ಸಲಾಂ ಹೊಡೆಯುವ ಕಾಲ ಬಂದಿದೆ ಎಂದು ಹೇಳಿದರು.ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ರಕ್ತದಾನ, ಸಸಿ ನೆಡುವ ಕಾರ್ಯಕ್ರಮ, ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಕ್ಷಣ ಜನರ ಸೇವೆ ಮಾಡಲು ಅವರ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ಪ್ರಧಾನಿ ಮೋದಿಯವರು ಉತ್ತಮ, ಚಾಣಾಕ್ಷ ಆಡಳಿತದಿಂದ ಜಗತ್ತಿನ ನಾಯಕರೆನಿಸಿಕೊಂಡಿದ್ದಾರೆ. ವ್ಯಸನ ಮುಕ್ತ ದೇಶ, ಆರೋಗ್ಯ ಕಾಪಾಡುವ ಮ್ಯಾರಾಥಾನ್ ಮೋದಿಯವರ ಕನಸಾಗಿದೆ.11 ವರ್ಷದ ಆಡಳಿತದಲ್ಲಿ ಪ್ರಧಾನಿ ಮೋದಿಯವರು ಇತಿಹಾಸ ಸೃಷ್ಠಿ ಮಾಡಿದ್ದಾರೆ ಎಂದು ಹೇಳಿದರು.ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಬಿಜೆಪಿ ಮುಖಂಡ ಶೀಲವಂತ ಉಮರಾಣಿ, ಯುವ ಮೋರ್ಚಾ ಅಧ್ಯಕ್ಷ ರಾಚು ಬಡಿಗೇರ, ಅನೀಲ ಜಮಾದಾರ, ರಾಘವೇಂದ್ರ ಕಾಪಸೆ, ದೇವೆಂದ್ರ ಕುಂಬಾರ ವೇದಿಕೆ ಮೇಲೆ ಇದ್ದರು. ಮುಖಂಡರಾದ ಅನೀಲಗೌಡ ಬಿರಾದಾರ, ಸುನೀಲಗೌಡ ಬಿರಾದಾರ, ಸಂಜೀವ ಮಲ್ಲಾಡಿ, ವೆಂಕಟೇಶ ಕುಲಕರ್ಣಿ, ಬಾಳು ಮುಳಜಿ, ಶ್ರೀಕಾಂತ ಬಡಿಗೇರ, ಸಾಗರ ಬಿರಾದಾರ, ಮಂಜು ದೇವರ, ಮಹೇಶ ಹೂಗಾರ, ವಿಜು ಮಾನೆ, ಸಂತೋಷಗೌಡ ಪಾಟೀಲ, ಮಲ್ಲು ವಾಲಿಕಾರ, ಶಾಂತು ಕಂಬಾರ, ಅನಸೂಯಾ ಮದರಿ, ವಿಜಯಲಕ್ಷ್ಮಿ ರೂಗಿಮಠ, ಶಾಮಲಾ ಬಗಲಿ, ಭೌರಮ್ಮ ನಾವಿ, ಚನ್ನುಗೌಡ ಪಾಟೀಲ, ಬತ್ತುಸಾಹುಕಾರ ಹಾವಳಗಿ, ಭೀಮರಾಯಗೌಡ ಮದರಖಂಡಿ, ಶಿವಯೋಗಿ ರೂಗಿಮಠ, ಭೀಮರಾಯಗೌಡ ಬಿರಾದಾರ, ಪ್ರಶಾಂತ ಗವಳಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.