ಬೇಸಿಗೆ ರಜೆಯಲ್ಲಿ ಮಕ್ಕಳ ಕ್ರೀಯಾಶೀಲತೆ ಹಾಗೂ ಸಾಮಾನ್ಯ ಜ್ಞಾನ ಹೆಚ್ಚಿಸಲು ಅಕ್ಕರೆ ಅಂಗಳ ವಿಶೇಷ ಗ್ರಾಮೀಣ ಬೇಸಿಗೆ ಶಿಬಿರ ಸಹಕಾರಿಯಾಗಲಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ರಜೆ ಸಮಯದಲ್ಲಿ ಟಿವಿ, ಮೊಬೈಲ್‌ಗೆ ಸೀಮಿತಗೊಳಿಸದೆ ಜ್ಞಾನ ಮತ್ತು ಮನರಂಜನೆಗೆ ಪ್ರೋತ್ಸಾಹಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿಶೇಷ ಗ್ರಾಮೀಣ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಗ್ರಾಮೀಣ ಸೊಗಡಿನ ಕ್ರೀಡೆ, ವಿಜ್ಞಾನ ಪ್ರಯೋಗ ಹಾಗೂ ಸೃಜನಾತ್ಮಕ ಚಟುವಟಿಕೆಗಳ ಕುರಿತು ವಿಷಯಾಧಾರಿತ ತರಬೇತಿ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಲಾಗುವುದು ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಗೂ ನೋಡಲ್ ಅಧಿಕಾರಿ ಎಂ.ಎನ್.ಮಂಜುನಾಥ್ ಹೇಳಿದರು.

ತಾಲೂಕಿನ ಕಾಂತಾಪುರ ಸರ್ಕಾರಿ ಶಾಲೆಯಲ್ಲಿ ಜಿಪಂ, ತಾಪಂ ಹಾಗೂ ಸ್ಥಳೀಯ ಗ್ರಾಪಂ ಸಹಭಾಗಿತ್ವದಲ್ಲಿ 34 ದಿನಗಳ ಕಾಲ ನಡೆಯುವ ಅಕ್ಕರೆ ಅಂಗಳ ವಿಶೇಷ ಗ್ರಾಮೀಣ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೇಸಿಗೆ ರಜೆಯಲ್ಲಿ ಮಕ್ಕಳ ಕ್ರೀಯಾಶೀಲತೆ ಹಾಗೂ ಸಾಮಾನ್ಯ ಜ್ಞಾನ ಹೆಚ್ಚಿಸಲು ಅಕ್ಕರೆ ಅಂಗಳ ವಿಶೇಷ ಗ್ರಾಮೀಣ ಬೇಸಿಗೆ ಶಿಬಿರ ಸಹಕಾರಿಯಾಗಲಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ರಜೆ ಸಮಯದಲ್ಲಿ ಟಿವಿ, ಮೊಬೈಲ್‌ಗೆ ಸೀಮಿತಗೊಳಿಸದೆ ಜ್ಞಾನ ಮತ್ತು ಮನರಂಜನೆಯಿಂದ ಕೂಡಿರುವ ವಿಶೇಷ ಗ್ರಾಮೀಣ ಬೇಸಿಗೆ ಶಿಬಿರದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು. ಶಾಲಾ ಮಕ್ಕಳೂ ಸಹ ಈ ಶಿಬಿರದ ಪ್ರಯೋಜನ ಪಡೆದುಕೊಂಡು ತಮ್ಮಲ್ಲಿರುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.

ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ದನಂಜಯ, ತಾಪಂ ನೋಡಲ್ ಅಧಿಕಾರಿ ಎಂ.ಕೆ.ವಿನೋದ್, ಗ್ರಾಪಂ ಆಡಳಿತಾಧಿಕಾರಿ ವಿನೋದ್, ಸಿಆರ್‌ಪಿ ಗೋಪಾಲ್, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸ್ವಾಮಿ, ಗ್ರಾಪಂ ಕಾರ್ಯದರ್ಶಿ ವೈಕುಂಠಪ್ಪ, ಶಿಕ್ಷಕಿ ಶಿವಮ್ಮ, ಗ್ರಾಪಂ ಗ್ರಂಥಾಲಯ ಅರಿವು ಕೇಂದ್ರದ ಮೇಲ್ವಿಚಾರಕಿ ಗಿರಿಜಮ್ಮ, ಶಿಬಿರದ ಅಧ್ಯಾಪಕಿ ಪುಷ್ಪಲತ ಸೇರಿದಂತೆ ತಟ್ಟೆಕೆರೆ ಸಿಆರ್‌ಸಿ ವ್ಯಾಪ್ತಿಯ ಶಾಲೆಗಳ ಶಿಕ್ಷಕರು ಇದ್ದರು.