ಜನತಾ ನ್ಯಾಯಾಲಯದ ಮೊರೆ ಹೋಗಿ

| Published : Aug 20 2025, 02:00 AM IST

ಸಾರಾಂಶ

ಸಾರ್ವಜನಿಕರು ತಮಗೆ ತೊಂದರೆಯಾದಾಗ ಕಾನೂನಿನ ಮೊರೆ ಹೋಗುವುದು ಸಹಜ. ನ್ಯಾಯಾಲಯದಿಂದ ತೀರ್ಪು ಬರುವಷ್ಟರಲ್ಲಿ ಸಾಕಷ್ಟು ವಿಳಂಬವಾಗುತ್ತದೆ. ಈ ವಿಳಂಬ ತಡೆಯಲು ಈಗ ಕಾಯಂ ಜನತಾ ನ್ಯಾಯಾಲಯ ಜಾರಿಯಲ್ಲಿದೆ.

ಕೊಪ್ಪಳ:

ಸಾರ್ವಜನಿಕರು ಪ್ರಕರಣ ದಾಖಲಿಸಿದಾಗ ವಿಳಂಬವಾಗುವುದನ್ನು ತಡೆಯಲು ಕಾಯಂ ಜನತಾ ನ್ಯಾಯಾಲಯದ ಮೋರೆ ಹೋಗುವಂತೆ ಗಂಗಾವತಿ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಯಕ ಅವರು ಕರೆ ನೀಡಿದರು.

ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಯಲ್ಲಿ ಗಂಗಾವತಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಚಿಕ್ಕಜಂತಕಲ್ ಗ್ರಾಪಂ ಆಶ್ರಯದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ ಕಾನೂನು ಅರಿವು ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರು ತಮಗೆ ತೊಂದರೆಯಾದಾಗ ಕಾನೂನಿನ ಮೊರೆ ಹೋಗುವುದು ಸಹಜ. ನ್ಯಾಯಾಲಯದಿಂದ ತೀರ್ಪು ಬರುವಷ್ಟರಲ್ಲಿ ಸಾಕಷ್ಟು ವಿಳಂಬವಾಗುತ್ತದೆ. ಈ ವಿಳಂಬ ತಡೆಯಲು ಈಗ ಕಾಯಂ ಜನತಾ ನ್ಯಾಯಾಲಯ ಜಾರಿಯಲ್ಲಿದ್ದು, ಪ್ರಕರಣದ ಎರಡು ಕಡೆಯವರು ಅಹಂಕಾರ, ದರ್ಪ ಬಿಟ್ಟು ಸೌಹಾರ್ದಯುತವಾಗಿ ರಾಜೀ ಸಂಧಾನದ ಮೂಲಕ ಬಂದರೆ ಬೇಗ ನ್ಯಾಯ ಸಿಗಬಹುದು. ನೆಮ್ಮದಿಯ ಜೀವನ ನಡೆಸಬಹುದು ಎಂದರು.

ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ. ಮಂಜುನಾಥ ಹಾಗೂ ಕೊಪ್ಪಳ ದೇವದಾಸಿ ಪುನರ್ವಸತಿ ಯೋಜನೆ ಯೋಜನಾಧಿಕಾರಿ ಪೂರ್ಣಿಮಾ ಮಾತನಾಡಿದರು.ಕಾರ್ಯಕ್ರಮದಲ್ಲಿ ವೆಂಕೋಬ ಭಂಗಿ, ಗಂಗಾವತಿ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಗುಡ್ಡಪ್ಪ ಹಳ್ಳಕಾಯಿ, ಸದಸ್ಯ ಕಾರ್ಯದರ್ಶಿಗಳಾದ ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೇಘಾ ಸೋಮಣ್ಣನವರ, ತಹಸೀಲ್ದಾರ್‌ ರವಿ ಅಂಗಡಿ, ಪೊಲೀಸ್‌ ಉಪವಿಭಾಗಾಧಿಕಾರಿ ಸಿದ್ದಲಿಂಗಪ್ಪಗೌಡ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ ಇದ್ದರು.