ಸಾರಾಂಶ
ಹಾನಗಲ್ಲ: ಪಠ್ಯಕ್ರಮವು ಯುವ ಜನಾಂಗಕ್ಕೆ ದಾರಿದೀಪವಾಗಬೇಕು. ಹಾಗೆಯೇ ಬದುಕು ಕಟ್ಟಿಕೊಡುವ ಶಕ್ತಿ ಇರಬೇಕು. ಯಾವುದೋ ಪಠ್ಯಕ್ರಮ ಇನ್ನಾವುದೊ ಶಿಕ್ಷಣ ಅನ್ನುವ ರೀತಿಯಲ್ಲಿ ಇರಬಾರದು ಎಂದು ರಾಣಿಬೆನ್ನೂರಿನ ಆರ್.ಟಿ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೊಟ್ರೇಶ ಬಸಾಪುರ ಹೇಳಿದರು.ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪಠ್ಯಕ್ರಮಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸರಿಯಾದ ಶಿಕ್ಷಕರನ್ನು ನಿರ್ಮಾಣ ಮಾಡುವ ಪಠ್ಯಕ್ರಮವನ್ನು ನಿರ್ಮಿಸುವ ಜವಾಬ್ದಾರಿ ಪ್ರಶಿಕ್ಷಕರಿಗಿದೆ. ಅದಕ್ಕಾಗಿ ಹಾವೇರಿ ವಿಶ್ವವಿದ್ಯಾಲಯ ಮಟ್ಟದ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಮೂರು ಮತ್ತು ನಾಲ್ಕನೇ ಸೆಮಿಸ್ಟರ್‌ನ ಪಠ್ಯಕ್ರಮ ಕಾರ್ಯಾಗಾರ ನಡೆಸುತ್ತಿದ್ದಾರೆ. ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಕೌಶಲ್ಯ ಅಳವಡಿಸಿಕೊಂಡು ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಶಿಕ್ಷಕರೆ ಹಳಿ ತಪ್ಪಿದ ರೈಲಿನಂತಾಗುತ್ತಾರೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಸದಾಶಿವಪ್ಪ ಎನ್. ಅವರು, ಪಠ್ಯಕ್ರಮ ಕೆಲವು ನಿರ್ದಿಷ್ಟ ನಿಯಮ ನಿಬಂಧನೆಗಳನ್ನು ಒಳಗೊಂಡಿದ್ದು, ಅವುಗಳನ್ನ ಅಳವಡಿಸಿಕೊಂಡು ಸರಿಯಾದ ರೀತಿಯಲ್ಲಿ ಪಠ್ಯಕ್ರಮ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರಶಿಕ್ಷಕರ ಮೇಲಿದೆ. ಹಾಗಾಗಿ ಯಾವುದೆ ಕಟ್ಟುಪಾಡುಗಳಿಗೊಳಗಾಗದೆ ಎಲ್ಲರಿಗೂ ಒಳಿತಾಗುವ ಪಠ್ಯಕ್ರಮ ನಿರ್ಮಿಸಿ ವಿಶ್ವವಿದ್ಯಾಲಯಕ್ಕೆ ಒಪ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲೆಯ ಒಂಬತ್ತು ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರಾದ ರಾಣಿಬೆನ್ನೂರಿನ ಬಿಎಜೆಎಸ್ಎಸ್ ಪ್ರಾಚಾರ್ಯ ಡಾ. ಮೃತ್ಯುಂಜಯ ಎಂ.ಎಂ., ಡಾ. ಹನುಮಂತಪ್ಪ ಬ್ಯಾಡಗಿ, ಆರ್.ಟಿ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದ ರಾಘವೇಂದ್ರ ಕಡ್ಲಿಮಠ, ಅರುಣಕುಮಾರ ಕಲ್ಮಠ, ಬಸವಚೇತನ ಶಿಕ್ಷಣ ಮಹಾವಿದ್ಯಾಲಯದ ಪವಿತ್ರಾ ಯಡಚಿ, ಯಲ್ಲೇಶ ಜಿ ಎಚ್., ಹಾವೇರಿ ಟಿ.ಎಂ.ಎ.ಇ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದಲಿಂಗಸ್ವಾಮಿ ಪಿ.ಎಂ. ಮತ್ತು ಪ್ರಸನ್ನ ಹಲಗೆರಿ, ಶ್ರುತಿ ಎಸ್.ಕೆ., ಶಂಕರಗೌಡ ತರಗನಹಳ್ಳಿ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಂಜುನಾಥ ವಡ್ಡರ, ಎಸ್.ಸಿ.ಬಿ. ಶಿಕ್ಷಣ ಮಹಾವಿದ್ಯಾಲಯ ಸವಣೂರಿನ ಪ್ರಾಚಾರ್ಯ ರಾಜೇಂದ್ರ ತೊಂಡೂರು, ನಾಗವೇಣಿ ಎಚ್.ಎಂ. ಎಸ್.ಟಿ.ಜೆ. ಹಿರೇಕೆರೂರು ಶಿಕ್ಷಣ ಮಹಾವಿದ್ಯಾಲಯದ ದಿನೇಶ ತುಮ್ಮಿನಕಟ್ಟಿ, ಬಿ.ಆರ್.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದ ಹಿರೇಮಠದ ಗಂಗಾಧರ, ಮಾರುತಿ ಗಿರಿಯಮ್ಮನವರ, ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಡಾ. ರಾಘವೇಂದ್ರ ಮಾಡಳ್ಳಿ, ಡಾ. ವಿಶ್ವನಾಥ ಬೊಂದಾಡೆ, ಡಾ. ಹರೀಶ ಟಿ. ತಿರುಕಪ್ಪ, ಡಾ. ಪ್ರಕಾಶ ಹುಲ್ಲೂರ, ಡಾ. ಜಿತೇಂದ್ರ ಜಿ.ಟಿ., ಡಾ. ಪ್ರಕಾಶ. ಜಿ.ವಿ., ಡಾ. ರುದ್ರೇಶ ಬಿ.ಎಸ್. ಇದ್ದರು.