ಗೊರೂರರ ಬದುಕು ಬರಹ ಯುವ ಪೀಳಿಗೆಗೆ ಮಾದರಿ

| Published : Sep 21 2025, 02:00 AM IST

ಸಾರಾಂಶ

ಕನ್ನಡ ಸಾಹಿತ್ಯದ ಪ್ರಮುಖ ಸಾಹಿತಿಗಳಲ್ಲಿ ಗೊರೂರು ಒಬ್ಬರು ಗಂಭೀರ ಸಾಹಿತ್ಯ ರೂಪಿತವಾಗುತ್ತಿದ್ದ ಕಾಲಘಟ್ಟದಲ್ಲಿ ಗೊರೂರರು ತಮ್ಮ ಕಥೆ, ಕಾದಂಬರಿ ಮತ್ತು ಪ್ರಬಂಧಗಳಲ್ಲಿ ನವಿರಾದ ಹಾಸ್ಯ ತಂದ ಕನ್ನಡದ ಮೊದಲಿಗರು. ತಮ್ಮ ಕೃತಿಗಳಲ್ಲಿ ಗ್ರಾಮೀಣ ಬದುಕನ್ನು ಸೋಜಿಗದ ರೀತಿ ಕಟ್ಟಿ ಕೊಟ್ಟಿರುವ ಸ್ಮರಣೀಯ ಎಂದು ಟಿ.ಬಿ. ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಅವರು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಡಾ.ಗೊರೂರ ಸಾಹಿತ್ಯ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಗೊರೂರರ ಬದುಕು ಬರಹ ಕುರಿತ ವಿಚಾರಣ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಗೊರೂರರ ಬದುಕು ಬರಹ ಯುವ ಪೀಳಿಗೆಗೆ ಮಾದರಿಯಾಗಬೇಕು. ಗೊರೂರರು ಸೇರಿದಂತೆ ಶ್ರೇಷ್ಠ ಸಾಹಿತಿ ಚಿಂತಕರ ಪುಸ್ತಕಗಳನ್ನು ಓದಿ ಜ್ಞಾನ ವಿಕಸನ ಮಾಡಿಕೊಳ್ಳಲು ತಿಳಿಸಿದರು.

ಗೊರೂರರ ಬದುಕು ಬರಹ ಕುರಿತು ತುಮಕೂರು ವಿವಿ ಮಾಧ್ಯಮ ವಿಭಾಗದ ಪ್ರಾಧ್ಯಾಪಕರಾದ ಡಾ.ಸಿಬಂತಿ ಪದ್ಮನಾಭ ಅವರು ಮಾತನಾಡಿ, ಗೊರೂರರು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲಿಗೆ ಹಾಸ್ಯ ತಂದ ಬರಹಗಾರರು. ಹೇಮಾವತಿ, ಪುನರ್ಜನ್ಮ, ಮೆರವಣಿಗೆ, ಊರ್ವಶಿ, ರಾಜನರ್ತಕಿ, ಬೈಲಹಳ್ಳಿ ಸರ್ವೆ, ಇವೇ ಮುಂತಾದ ಕೃತಿಗಳಲ್ಲಿ ಹಾಸ್ಯದೊಂದಿಗೆ ಬದುಕು ಬದಲಿಸಿಕೊಳ್ಳಲು ಆರೋಗ್ಯಕರ ಬದುಕು ಕಟ್ಟಿಕೊಳ್ಳುವ ಬಗೆಗೆ ತಿಳಿಸಿರುವರು.

ಪ್ರಾಂಶುಪಾಲ ಚಂದ್ರಯ್ಯಬೆಳವಾಡಿ ಮಾತನಾಡಿ, ಗೊರೂರರು ಗಾಂಧಿಯವರ ಪ್ರಭಾವದಿಂದ ತಾನು 8ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಸ್ವಾತಂತ್ರ್ಯ ಚಳುವಳಿಗೆ ದುಮುಕಿ ದೇಶ ಪರಕೀಯರಿಂದ ಮುಕ್ತಿ ಹೊಂದಬೇಕೆಂಬ ಆಶಯ ಸಾರಿದ್ದು ಅನುಕರಣೀಯ ಎಂದರು.

ಕಾರ್ಯಕ್ರಮದಲ್ಲಿ ಕಾದಂಬರಿಕಾರ್ತಿ ಡಾ. ಕಮಲಾ ನರಸಿಂಹ, ಗೊರೂರರ ಸುಪುತ್ರಿ ಕೆನಡಾ ನಿವಾಸಿ ವಾಸಂತಿ ಮೂರ್ತಿ, ಡಾ.ಶ್ರೀನಿವಾಸ, ಕಸಾಪ ತಾಲೂಕು ಅಧ್ಯಕ್ಷ ಪಾಂಡುರಂಗಯ್ಯ, ನಗರಸಭೆ ಅಧ್ಯಕ್ಷರಾದ ಜೀಷಾನ್ ಮೊಹಮೂದ್, ರೇಣುಕಮ್ಮ, ಸತೀಶ್ ಕುಮಾರ್, ಮೆಣಸಗಿ ಸೇರಿದಂತೆ ಹಲವರು ಹಾಜರಿದ್ದರು.