ಶಾಲೆಗಳ ಬಿಸಿಯೂಟಕ್ಕೆ ಸಿದ್ದಗಂಗಾ ಶ್ರೀಗಳ ದಾಸೋಹವೇ ಸ್ಪೂರ್ತಿ

| Published : Sep 21 2025, 02:00 AM IST

ಸಾರಾಂಶ

ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ಸಂಪತ್ತು ಹಾಗೂ ಆರ್ಥಿಕತೆಯಿಂದ ನೋಡಲು ಸಾಧ್ಯವಿಲ್ಲ. ಆ ದೇಶದಲ್ಲಿರುವ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳು, ಜನರ ಜೀವನದ ಗುಣಮಟ್ಟ ನೋಡಿ ಅದರ ಅಭಿವೃದ್ಧಿಯನ್ನು ಅಳೆಯಬೇಕಾಗಿದೆ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಯೋಗಿ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ಸಂಪತ್ತು ಹಾಗೂ ಆರ್ಥಿಕತೆಯಿಂದ ನೋಡಲು ಸಾಧ್ಯವಿಲ್ಲ. ಆ ದೇಶದಲ್ಲಿರುವ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳು, ಜನರ ಜೀವನದ ಗುಣಮಟ್ಟ ನೋಡಿ ಅದರ ಅಭಿವೃದ್ಧಿಯನ್ನು ಅಳೆಯಬೇಕಾಗಿದೆ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಯೋಗಿ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ನಿಟ್ಟೂರಿನಲ್ಲಿ ರೋಟರಿ ಕ್ಲಬ್ ನಿಟ್ಟೂರು ವತಿಯಿಂದ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಮಧ್ಯಾಹ್ನದ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ, ಅನ್ನ ಹಾಗೂ ವಸತಿಗೆ ಮಾರ್ಗದರ್ಶನವೆಂದರೆ ಅದು ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯರು. ಅವರು ನೀಡಿದಂತಹ ದಾಸೋಹದ ಮಾರ್ಗದರ್ಶನವೇ ಅಕ್ಷರ ದಾಸೋಹವಾಗಿ ನಿರ್ಮಾಣವಾಗಿದ್ದು, ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಸಿಗುವ ಮೂಲಕ ಮಕ್ಕಳ ಹೊಟ್ಟೆ ತುಂಬುತ್ತಿದೆ ಎಂದು ತಿಳಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಪೌಷ್ಟಿಕತೆ ಹೋಗಲಾಡಿಸಲು ಹಲವು ಯೋಜನೆಗಳನ್ನು ಸಹ ಮಾಡಿವೆ ಪೌಷ್ಟಿಕ ಸಪ್ತಾಹ ದಂತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಶಿಶುಗಳಿಗೆ ಮಹಿಳೆಯರಿಗೆ ಗರ್ಭಿಣಿಯರಿಗೆ ಎಲ್ಲರಿಗೂ ವಿಶೇಷ ಸೌಲಭ್ಯಗಳನ್ನು ಸಹ ನೀಡುತ್ತಿದೆ. ಮಧ್ಯಾಹ್ನದ ಊಟವನ್ನು ನೀಡುತ್ತಿರುವುದರಿಂದ ಮಕ್ಕಳಲ್ಲಿ ಹಾಜರಾತಿ ಹೆಚ್ಚುತ್ತಿದೆ, ಶಿಕ್ಷಣದಲ್ಲಿ ಆಸಕ್ತಿ ಹೆಚ್ಚುತ್ತಿದೆ. ಅಪೌಷ್ಟಿಕತೆ ಹೋಗಲಾಡಿಸಲು ಕೂಡ ಸಾಧ್ಯವಾಗಿದೆ. ಎಂದು ತಿಳಿಸಿದರು.ಸಿದ್ದರಬೆಟ್ಟದ ಮಠಾಧ್ಯಕ್ಷರಾದ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಒಂದು ಯೋಜನೆ ಇಲ್ಲಿ ಯಶಸ್ಸು ಕಂಡರೆ ಮುಂದಿನ ದಿನದಲ್ಲಿ ಬೇರೆ ಕಾಲೇಜುಗಳಲ್ಲಿಯೂ ಆರಂಭಿಸುವುದಕ್ಕೂ ಹೆಚ್ಚಿನ ಮಾರ್ಗದರ್ಶನ ಸಿಗುತ್ತದೆ ನಮ್ಮ ಶ್ರೀಮಠದಿಂದಲೂ ಸಹ ಹೆಚ್ಚಿನ ಸಹಕಾರವನ್ನು ನಾವು ನೀಡುತ್ತೇವೆ ನಿಮಗೆ ಗೊತ್ತಿರುವಂತಹ ಕಂಪನಿಗಳಿಂದ ಸಂಸ್ಥೆಗಳಿಂದ ಅಲ್ಲಿ ಬರುವಂತಹ ಲಾಭದ ಒಂದು ಅಂಶವನ್ನು ಈ ಯೋಜನೆಗೆ ನೀಡಿದರೆ ಗ್ರಾಮೀಣ ಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯಎಲಿಜಬೆತ್ ಚೆರಿಯನ್ ಮಾತನಾಡಿ, ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಇಂತಹ ಯೋಜನೆ ಮಾಡಲು ಮುಂದಾಗಿರುವುದು ನಿಜವಾಗಿಯೂ ಅತ್ಯಂತ ಹೆಚ್ಚು ವಿಶೇಷ ಎನಿಸಿದ್ದು ನಮ್ಮ ಸಂಸ್ಥೆಯಿಂದ ಅತ್ಯಂತ ಹೆಚ್ಚಿನ ರೀತಿಯಲ್ಲಿ ಸಹಕಾರವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿಟ್ಟೂರು ಕ್ಲಬ್ ಅಧ್ಯಕ್ಷ ಗುರುಮೂರ್ತಿ, ಕಾರ್ಯದರ್ಶಿ ಬಸವರಾಜು, ಸಹಾಯಕ ರಾಜ್ಯಪಾಲ ಪ್ರಭುಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಉಮೇಶ್ ಎಂ ಎಸ್, ಮಾಜಿ ನಿಟ್ಟೂರ್ ಅಧ್ಯಕ್ಷ ಸಚಿನ್, ರೇಣುಕ ಪ್ರಸನ್ನ, ಕಾಲೇಜಿನ ಪ್ರಾಂಶುಪಾಲ ರಾಮದಾಸ್ ಕೆ ಆರ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.