ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ನೀಡುತ್ತಿಲ್ಲ: ಶಾಸಕ ಎಚ್.ಟಿ.ಮಂಜು

| Published : Sep 16 2025, 12:03 AM IST

ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ನೀಡುತ್ತಿಲ್ಲ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಸಾರ್ವಜನಿಕರು ಅಭಿವೃದ್ಧಿ ಕೆಲಸಗಳಿಗೆ ಮುಕ್ತ ಮನಸ್ಸಿನಿಂದ ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಲು ಸಾಧ್ಯ. ಗ್ರಾಮೀಣ ಭಾಗದ ಪ್ರಮುಖ ರಸ್ತೆಗಳು ಹದಗೆಟ್ಟಿರುವ ಬಗೆಗೆ ಯೋಜನಾ ಪಟ್ಟಿ ಸಿದ್ಧಪಡಿಸಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕ್ಷೇತ್ರದ ಒಬ್ಬ ಜವಾಬ್ದಾರಿಯುತ ಶಾಸಕನಾಗಿ ಹಗಲಿರುಳು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ, ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ನೀಡುತ್ತಿಲ್ಲ. ಇರುವ ಅನುದಾನವನ್ನೆ ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ತಾಲೂಕಿನ ಕರೋಟಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಹರಿಹರಪುರದಿಂದ ಕೃಷ್ಣಾಪುರ ಸಂಪರ್ಕಿಸುವ ಮುಖ್ಯ ರಸ್ತೆಗೆ 1.20 ಕೋಟಿ ರು. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರವು ಅನುದಾನ ನೀಡುವಲ್ಲಿ ವಿಪಕ್ಷ ಶಾಸಕ ಎಂಬ ತಾರತಮ್ಯ ಮಾಡಿದರೂ ಕೂಡಾ ನಾನು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತರುತ್ತಿದ್ದೇನೆ ಎಂದರು.

ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಸಾರ್ವಜನಿಕರು ಅಭಿವೃದ್ಧಿ ಕೆಲಸಗಳಿಗೆ ಮುಕ್ತ ಮನಸ್ಸಿನಿಂದ ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಲು ಸಾಧ್ಯ. ಗ್ರಾಮೀಣ ಭಾಗದ ಪ್ರಮುಖ ರಸ್ತೆಗಳು ಹದಗೆಟ್ಟಿರುವ ಬಗೆಗೆ ಯೋಜನಾ ಪಟ್ಟಿ ಸಿದ್ಧಪಡಿಸಿದ್ದೇನೆ. ಶತಾಯಗತಾಯ ಅನುದಾನ ತಂದು ಕೆಲಸ ಮಾಡುತ್ತೇನೆ. ಜನರು ನಿರೀಕ್ಷೆ ಹುಸಿಗೊಳಿಸದೆ ಕೆಲಸ ಮಾಡುತ್ತೇನೆ ಎಂದರು.

ಸರ್ಕಾರದ ನೇರ ಅನುದಾನಕ್ಕೆ ಒಳಪಟ್ಟಿರುವ ಗ್ರಾಪಂ ಕೂಡಾ ಗ್ರಾಮಗಳ ಅಭಿವೃದ್ದಿಗೆ ಕೆಲಸ ಮಾಡಬೇಕು. ಗ್ರಾಪಂ ಸದಸ್ಯರು ನಿಮ್ಮ ಗ್ರಾಮದ ಒಳಗಿನ ಕೆಲಸಗಳನ್ನು ಗ್ರಾಪಂ ಅನುದಾನಗಳು ಮತ್ತು ನರೇಗಾ ಯೋಜನೆಯ ಮೂಲಕ ಮಾಡಿಕೊಳ್ಳಲು ಶ್ರಮಿಸಬೇಕು ಎಂದರು.

ಒಬ್ಬ ಶಾಸಕನನಾಗಿ ಕ್ಷೇತ್ರದ ಜನರು ನನಗೆ ಮಾಡಿರುವ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಮುಂದೆ ಇರುವ ಎರಡೂವರೆ ವರ್ಷಗಳ ಅವಧಿಯಲ್ಲಿ ಶಕ್ತಿಮೀರಿ ಕೆಲಸ ಮಾಡುತ್ತೇನೆ ಎಂದರು.

ಈ ವೇಳೆ ಮಾಕವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಂಜೇಗೌಡ, ಸದಸ್ಯರಾದ ಎಂ.ಆರ್ ಮಂಜೇಗೌಡ, ಎಂ.ಟಿ ಮಂಜೇಗೌಡ, ಕರೋಟಿ ಅನಿಲ್, ಕೋಮನಹಳ್ಳಿ ಜಗದೀಶ್, ಮುಖಂಡರಾದ ಪಟೇಲ್ ತಮ್ಮೆಗೌಡ, ಕರೋಟಿ ಶಿವರಾಮೇಗೌಡ, ಅಣ್ಣೆಗೌಡ, ರಾಮಚಂದ್ರೆಗೌಡ, ದೇವರಾಜೇಗೌಡ, ವಾಸುದೇವ್, ತಿಂಮೇಗೌಡ, ರಾಮೇಗೌಡ, ಯೋಗೇಶ್, ಕೃಷ್ಣಪುರ ಹರೀಶ್, ನಾಗೇಶ್, ಸುಕಂದರಾಜು, ಕರೋಟಿ ವಿಜಿಕುಮಾರ್, ಹೆಗ್ಗಡಹಳ್ಳಿ ಅಲೋಕ್ ಕುಮಾರ್, ಕೋಮನಹಳ್ಳಿ ರೋಬೊ ಮಂಜೇಗೌಡ, ಪಿಡಿಓ ಶೈಲಜಾ ಸೇರಿದಂತೆ ಗ್ರಾಮಸ್ಥರು ಇದ್ದರು.