ಸಾರಾಂಶ
ಖಾಸಗಿ ಸ್ಟಾರ್ಟ್ ಅಪ್‌ಗಳು ಹಾಗೂ ರಾಜ್ಯ ಐಟಿ ಬಿಟಿ ಇಲಾಖೆ, ಕಿಯೋನಿಕ್ಸ್ ಸಹಯೋಗದಲ್ಲಿ ರಾಜ್ಯದಲ್ಲೇ ಅಭಿವೃದ್ಧಿಪಡಿಸಿ ನಿರ್ಮಿಸಿರುವ ಬಹುನಿರೀಕ್ಷೆಯ ಅಗ್ಗದ ದರದ ‘ಕಿಯೋ’ ಎಐ ಕಂಪ್ಯೂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಸ್ಟಾರ್ಟ್ ಅಪ್‌ಗಳು ಹಾಗೂ ರಾಜ್ಯ ಐಟಿ ಬಿಟಿ ಇಲಾಖೆ, ಕಿಯೋನಿಕ್ಸ್ ಸಹಯೋಗದಲ್ಲಿ ರಾಜ್ಯದಲ್ಲೇ ಅಭಿವೃದ್ಧಿಪಡಿಸಿ ನಿರ್ಮಿಸಿರುವ ಬಹುನಿರೀಕ್ಷೆಯ ಅಗ್ಗದ ದರದ ‘ಕಿಯೋ’ ಎಐ ಕಂಪ್ಯೂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.ಲೀನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಇರುವ ಕಿಯೋಗೆ 18,999 ರು. ದರ ನಿಗದಿಪಡಿಸಲಾಗಿದೆ. ಭಾರೀ ಕುತೂಹಲ ಕೆರಳಿಸಿರುವ ಕಿಯೋ ಕಂಪ್ಯೂಟರ್ ಟೆಕ್ ಸಮ್ಮಿಟ್‌ನ ಪ್ರಮುಖ, ವಿಶೇಷ ಆಕರ್ಷಣೆಯಾಗಿತ್ತು. ಅಲ್ಲದೆ, ಸಮ್ಮಿಟ್‌ಗೆ ಬಂದವರೆಲ್ಲರೂ ಕರ್ನಾಟಕ ಪೆವಿಲಿಯನ್‌ನಲ್ಲಿ ಪ್ರದರ್ಶನಕ್ಕೆ ಇರಿಸಿದ್ದ ಕಿಯೋ ಕಂಪ್ಯೂಟರ್ ಅನ್ನು ನೋಡಿ, ವಿವರಗಳನ್ನು ಕೇಳಿ ತಿಳಿದುಕೊಂಡರು.
ಕಿಯೋ ಒಂದು ಪೂರ್ಣ ರೂಪದ ಕಂಪ್ಯೂಟರ್ ಆಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಈ ಕಂಪ್ಯೂಟರ್ ವೃತ್ತಿಪರ ಕ್ಯಾಮೆರಾ ಬ್ಯಾಟರಿ ಗಾತ್ರದಷ್ಟಿದೆ. ಇದು ರಾಜ್ಯದಲ್ಲೇ ಅಭಿವೃದ್ಧಿಪಡಿಸಿ, ನಿರ್ಮಿಸಿರುವ ಚಿಪ್‌ನಿಂದ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಮತ್ತೊಂದು ವಿಶೇಷ. ಲೀನಕ್ಸ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಕಿನೋ, ವೈಫೈ, ಎಥರ್‌ನೆಟ್, ಕಲಿಕೆಗೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳು, ಪ್ರೋಗ್ರಾಂಗಳು, ಪ್ರೊಡಕ್ಟಿವಿಟಿ ಟೂಲ್ಸ್‌ಗಳು ಇರಲಿವೆ. ಸದ್ಯ ಕಿಯೋ ಕಂಪ್ಯೂಟರ್ 8 ಜಿಬಿ ರ್‍ಯಾಮ್ ಮತ್ತು 32 ಜಿಬಿ ಮೆಮೊರಿ ಸ್ಟೋರೇಜ್ ಇರಲಿದ್ದು, ಸ್ಟೋರೇಜ್ ಅನ್ನು 1 ಟಿಬಿ ವರೆಗೆ ವಿಸ್ತರಿಸಿಕೊಳ್ಳಲು ಅವಕಾಶವಿದೆ.ಇದನ್ನು ಪರಿಪೂರ್ಣ ಕಂಪ್ಯೂಟರ್ ಆಗಿ ಬಳಸಲು ಮಾನಿಟರ್, ಕಿಬೋರ್ಡ್ ಮತ್ತು ಮೌಸ್ ಅನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಇದಕ್ಕೆ ಸುಮಾರು 4,000 ರು. ಹೆಚ್ಚುವರಿ ವೆಚ್ಚ ಆಗಲಿದೆ.
‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕಿಯೋ ಯೋಜನೆಯ ಸೀನಿಯರ್ ಟೆಕ್ನಿಕಲ್ ಲೀಡ್ ರವಿಕಿರಣ್, ಓಪನ್ ಸೋರ್ಸ್ ಸಾಫ್ಟ್‌ವೇರ್ ಬಳಸಿ ಕಂಪ್ಯೂಟರ್ ಅಭಿವೃದ್ಧಿಪಡಿಸಿರುವುದು ದೇಶದಲ್ಲೇ ಮೊದಲು. ಜಗತ್ತಿನಲ್ಲಿ ಬೇರೆ ಕಡೆ ಅಭಿವೃದ್ಧಿಪಡಿಸಿರುವ ಮಾಹಿತಿಯೂ ಇಲ್ಲ. ಇದಕ್ಕೆ ವೈರಸ್ ಕಾಟವಿಲ್ಲ. ಅತ್ಯಂತ ಸುರಕ್ಷಿತವಾಗಿರುತ್ತದೆ ಎಂದು ತಿಳಿಸಿದರು.ಮಂಗಳವಾರದಿಂದ ಕಿಯೋನೆಕ್ಸ್ಟ್ ವೆಬ್‌ಸೈಟ್‌ನಲ್ಲಿ ಕಿಯೋ ಕಂಪ್ಯೂಟರ್‌ನ ಪ್ರಿ-ಬುಕ್ಕಿಂಗ್ ಆರಂಭವಾಗಿದೆ. ಕಂಪ್ಯೂಟರ್‌ನ ಸಂಪೂರ್ಣ ಫೀಚರ್‌ಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))