ಸಾರಾಂಶ
ಕನಕಪುರ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿದ್ದ 17 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ 7 ಅಭ್ಯರ್ಥಿ ಗಳು ಅವಿರೋಧ ಆಯ್ಕೆಯಾಗಿದ್ದರು. ಉಳಿದ 10 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿತ್ತು. ಮಂಗಳವಾರ ಮತ ಎಣಿಕೆ ನಡೆದು ಎಲ್ಲಾ 10 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ.
ಫಲಿತಾಂಶದ ಬಳಿಕ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರು ತಾಲೂಕಿಗೆ ನೀಡಿದ ಅಭಿವೃದ್ಧಿ ಕೊಡುಗೆಗಳೇ ಗ್ರಾಪಂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಕಾರಣ. ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹಾಗೂ ಸದಸ್ಯರಿಗೆ ಅಭಿನಂದನೆ ತಿಳಿಸಿದರು.ಜಿಪಂ ಮಾಜಿ ಅಧ್ಯಕ್ಷ ಹೆಚ್.ಬಸಪ್ಪ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್, ಗ್ರಾಪಂ ಮಾಜಿ ಅಧ್ಯಕ್ಷ ಏಳಗಳ್ಳಿ ರವಿ, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಸಾತನೂರು ನಾಗರಾಜು, ಜಿಪಂ ಮಾಜಿ ಸದಸ್ಯರಾದ ಎಂ.ರಾಜೇಂದ್ರ, ಶಾಂತರಾಜು ಇತರರು ಹಾಜರಿದ್ದರು.
ಕಾಂಗ್ರೆಸ್ ಬೆಂಬಲಿತ ವಿಜೇತ ಅಭ್ಯರ್ಥಿಗಳು:ಉಯ್ಯಂಬಳ್ಳಿ ಗ್ರಾಪಂ ಕೊಗ್ಗೆದೊಡ್ಡಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಂದರಮ್ಮ, ಹಾರೋ ಶಿವನಹಳ್ಳಿ ರಮೇಶ್, ಹೋಸದುರ್ಗ ಗ್ರಾಪಂ ಕೆಂಪಾಲನಾಥ ಮುದ್ದಮ್ಮ, ಏರಂಗೆರೆ ಮಂಗಳಮ್ಮ, ಮುನಿ ಬಸವಯ್ಯ, ಕೋಡಿಹಳ್ಳಿ ಗ್ರಾಪಂ ದೊಡ್ಡ ಕಬ್ಬಳ್ಳಿ ಮಂಗಳಗೌರಮ್ಮ, ಅರಕೆರೆ ಗ್ರಾಪಂ ಇಂದಿರಾನಗರ ಅಶ್ವಿನಿ, ರಾಂಪುರದೊಡ್ಡಿ ಅಜಿರಾಬಾನು, ಐಗೊಲ್ಲಹಳ್ಳಿ ಗ್ರಾಪಂ ಆಲ್ಕುಕುಳಿ ಬಸವರಾಜು, ಚಾಕನಹಳ್ಳಿ ಗ್ರಾಪಂ ಲಕ್ಷ್ಮೀಪುರ ಸತೀಶ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.
ಶಿವನಹಳ್ಳಿ ಗ್ರಾಪಂ ರಾಜಣ್ಣ, ಉಯ್ಯಂಬಳ್ಳಿ ಗ್ರಾಪಂ ಕಾಡು ಶಿವನಹಳ್ಳಿದೊಡ್ಡಿ ದಿವ್ಯಜ್ಯೋತಿ, ಹೊಸದುರ್ಗ ಗ್ರಾಪಂ ಹಣಕಡಬೂರು ಜಯಮ್ಮ, ಗುಡ್ಡೇವೀರನ ಹೊಸಹಳ್ಳಿ ಸುಮಿತ್ರ ಬಾಯಿ, ಬನ್ನಿಮುಕ್ಕೋಡ್ಲು ಗ್ರಾಪಂ ಬೇವಿನ ಮರದದೊಡ್ಡಿ ಗೌರಮ್ಮ, ಮರಳೆ ಬೇಕುಪ್ಪೆ ಗ್ರಾಪಂ ಟೋಕಿ ನಾಯಕನದೊಡ್ಡಿ ಚಂದ್ರಮ್ಮ, ನಲ್ಲಹಳ್ಳಿ ಗ್ರಾಪಂ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಲಿತಾಂಶ ಹೋರಬಿಳುತ್ತಿದ್ದಂತೆ ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್, ಎಂಎಲ್‌ಸಿ ಎಸ್. ರವಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.ಕೆ ಕೆ ಪಿ ಸುದ್ದಿ 04:
ಕನಕಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿದ್ದ ಸ್ಥಾನಗಳ ಉಪಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು.ಗಳಿಗೆ