ಸಾರಾಂಶ
ಸಂತಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು ಪಟ್ಟಣದಲ್ಲಿ ಹಾಲಮತ ಸಮಾಜದವರು ಸಂಭ್ರಮದಿಂದ ಆಚರಣೆ ಮಾಡಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕನಕದಾಸರ ಆಳೆತ್ತರದ ಭಾವಚಿತ್ರದ ಮೆರವಣಿಗೆಗೆ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಸಂತಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು ಪಟ್ಟಣದಲ್ಲಿ ಹಾಲಮತ ಸಮಾಜದವರು ಸಂಭ್ರಮದಿಂದ ಆಚರಣೆ ಮಾಡಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕನಕದಾಸರ ಆಳೆತ್ತರದ ಭಾವಚಿತ್ರದ ಮೆರವಣಿಗೆಗೆ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಚಾಲನೆ ನೀಡಿದರು.ಸುಮಂಗಲೆಯರ ಆರತಿ, ಕುಂಭೋತ್ಸವ, ಡೊಳ್ಳು ಕುಣಿತ, ವಿವಿಧ ವಾಧ್ಯಮೇಳದೊಂದಿಗೆ ಆರಂಭವಾದ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವ ಮಾರ್ಗದ ಮೂಲಕ ಸರ್ಕಾರಿ ಆಸ್ಪತ್ರೆ, ಹುತಾತ್ಮ ವೃತ್ತ, ಹಳೇ ಪೊಲೀಸ್ ಠಾಣೆ ಎದುರಿನ ಜುನಿಪೇಠ್ ಅಂಬೇಡ್ಕರ್ ಮಾರ್ಗರ್ಮೂಲಕ ಮುಖಾಂತರ ಮಿನಿವಿಧಾನಸೌಧದ ಪಕ್ಕದ ರಸ್ತೆ ಮೂಲಕ ಪುರಸಭೆಯ ಸಾಂಸ್ಕೃತಿಕ ಭವನಕ್ಕೆ ಆಗಮಿಸಿ ಸಮಾವೇಶಗೊಂಡಿತು.
ವಿವಿಧ ಗ್ರಾಮ ಹಾಗೂ ಬೇರೆ ಬೇರೆಯಿಂದ ಆಗಮಿಸಿದ ಡೊಳ್ಳಿನ ಮೇಳಗಳ ಡೊಳ್ಳು ಕುಣಿತ ಹಾಗೂ ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ ಅಧ್ಯಕ್ಷತೆಯಲ್ಲಿ ಪಟ್ಟಣದ ಪುರಸಭೆ ಸಾಂಸ್ಕೃತಿಕ ಭವನದಲ್ಲಿ ನಡೆದ ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಲಜಯಂತಿಯ ಮಾಳಿಂಗರಾಯ ಮಹಾರಾಜರು ವಹಿಸಿದ್ದರು.ಆಲಮಟ್ಟಿಯ ವಶಿಷ್ಠ ಮುನಿಗಳು, ಲಖನಾಯಕನೊಪ್ಪದ ಕೃಷ್ಣಾನಂದ ಸ್ವಾಮೀಜಿ, ಹಳೇತೊರಗಲ್‌ನ ಕರಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಟಕೋಳದ ತ್ರಿವಿಧ ದಾಸೋಹಿ ಅಭಿನವ ಸಿದ್ದರಾಯ ಅಜ್ಜನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಹಾರೋಹಳ್ಳಿ ಸುವರ್ಣಮುಖಿ ಧಾಮದ ಡಾ.ನಾಗರಾಜ, ಸಾಹಿತಿ ಅರ್ಚನಾ ಅಥಣಿ, ಕನಕದಾಸರ ಜೀವನ ಚರಿತ್ರೆ ಹಾಗೂ ಕುರುಬ ಸಮಾಜದ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು. ಪ್ರದೇಶ ಕುರುಬರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಮೆಟಗುಡ್ಡ, ಜಿಪಂ ಮಾಜಿ ಸದಸ್ಯ ರೇಣಪ್ಪ ಸೋಮಗೊಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್. ಕೊಂಗವಾಡ, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ವಿಠ್ಠಲ ಜಟಗನ್ನವರ, ಕೆಂಪಣ್ಣ ಕ್ವಾರಿ, ರವಿ ಮೊರಬದ, ಸಿದ್ದಪ್ಪ ಮಕ್ಕನ್ನವರ ಸೇರಿದಂತೆ ಸಮಾಜದ ಹಲವು ಮುಖಂಡರು ಹಾಗೂ ಜನತೆ ಪಾಲ್ಗೊಂಡಿದ್ದರು.